ಅಧಿಕಾರಿಗಳ ವಿರುದ್ಧ”ಕೈ”ಶಾಸಕರ ಅವಹೇಳನಾಕಾರಿ ಹೇಳಿಕೆ..!?

16

ಚಿಕ್ಕಬಳ್ಳಾಪುರ: ಡಿಸಿ,ಎಸ್ಪಿಮತ್ತು ಸಿಇಒ ಮೂರು ಕೋತಿಗಳಿದ್ದಂತೆ ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಶಾಕರೊಬ್ಬರು ಅವಹೇಳನಾಕಾರಿ ಯಾಗಿ ನಿಂದಿಸಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಗೌರಿಬಿದನೂರು ಶಾಸಕ ಹೆಚ್.ಎನ್. ಶಿವ ಶಂಕರೆಡ್ಡಿ ಹೇಳಿಕೆ ಯಿಂದ ಅಧಿಕಾರಿಗಳಿಗೆ ಮುಜುಗರ ಹುಟ್ಟಿಸಿವಂತಾಗಿದ್ದು,ಶಾಸಕರ ಹೇಳಿಕೆ ಡಿಸಿ,ಎಸ್ಪಿ,ಸಿಇಒ ಡಾ.ಕೆ.ಸುಧಾಕರ್ ಗುಲಾಮರು‌ ಎಂದು ಕೈ ಕಾರ್ಯಕರ್ತರು ಬೆಲೆ‌ಏರಿಕೆ ವಿರುದ್ದ ಜಿಲ್ಲಾಢಳಿತ ಭವನದ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನೆ ಕಾರ್ಯ ಕ್ರಮದಲ್ಲಿ ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ. ಅಧಿಕಾರಿಗಳನ್ನು ‌ಕೋತಿಗಳಿಗೆ ಹೋಲಿಸಿದ ಶಾಸಕ ಶಿವಶಂಕರ ರೆಡ್ಡಿ ತಮ್ಮ ಅವಹೇಳನಕಾರಿ ಭಾಷಣದ ಉದ್ದಕ್ಕೂ ಜಿಲ್ಲೆಯ ಮೂರು ಜನ ಅಧಿಕಾರಿಗಳನ್ನು ಸಾಯಿಕೃಷ್ಣ ಚಾರಿಟಬಲ್ ಟ್ರಸ್ಟ್ ಏಜೆಂಟ್ಸ್ ಎಂದು ಆರೋಪಿಸಿದ್ದಾರೆ.