ನೊಂದ ದಂಪತಿಗೆ ಅಧಿಕಾರಿಗಳ ಅಭಯ.!

14

ಚಿಕ್ಕಬಳ್ಳಾಪುರ/ಚಿಂತಾಮಣಿ:ವೃದ್ದ ದಂಪತಿಗಳ ನಿವೇಶನದಲ್ಲಿ ಕೌನ್ಸಿಲರ್ ಜಗದೀಶನ ಅತಿಕ್ರಮ ಪ್ರವೇಶ. ಕೈಲಿ ವಿಷದ ಬಾಟಲಿ ಹಿಡಿದು ಡಿಸಿ,ಎಸ್ ಪಿ ಕಚೇರಿಗೆ ಅಲೆದಾಡುತ್ತಿರುವ ವೃದ್ದ ದಂಪತಿ ಜಗದೀಶ್ ಆತನ ಹಿಂಬಾಲಕರ ಬಂಧನಕ್ಕೆ ಎಸ್ಪಿ ಆದೇಶ, ಹಿರಿಯರ ಅನುಭವ ಪಡೆದು ಮುಂದಿನ ಜೀವನ ಹಾದಿ ಸುಗಮ ಮಾಡಿಕೊಳ್ಳಿ ಅನ್ನೋದು ಅನುಭವದ ಮಾತು,ಅಂತಹ ಹಿರಿಯ ಜೀವ ಗಳಿಗೆ ಆಸರೆಯಾಗಿ ಉಳಿದಿದ್ದ ನಿವೇಶನಕ್ಕೆ ಅತಿಕ್ರಮ ಪ್ರವೇಶ ಮಾಡಿ ರಾತ್ರೋರಾತ್ರಿ ಕಾಂಪೌಂಡ್ ಒಡೆದು ಅಲ್ಲಿ ಬೆಳೆದಿದ್ದ ಗಿಡ ಮರಗಳನ್ನು ಜಿಸಿಬಿಯಲ್ಲಿ ದ್ವಂಸಗೊಳಿಸಿ ಅವರಿಂದ ನಿವೇಶನ ಕಬಳಿಸುವ ನಿಟ್ಟಿನಲ್ಲಿ ಕೌನ್ಸಿಲರ್ ಒಬ್ಬ ತನ್ನಅಟ್ಟಹಾಸ ಮೆರೆದಿದ್ದಾನೆ. ಆತನ ಅತಿಕ್ರಮ ಪ್ರವೇಶ ತಡೆದು ನಮ್ಮ ನಿವೇಶನ ನಮಗೆ ಉಳಿಸಿಕೊಡಿ ಎಂದು ಆ ಹಿರಿಯ ಜೀವಗಳು ವಿಷದ ಬಾಟಲಿ ಕೈಲಿ ಹಿಡಿದು ಡಿಸಿ,ಎಸ್ಪಿ ಕಚೇರಿಗೆ ಅಲೆದಾಡುತ್ತಿರುವ ಧಾರುಣ ಕತೆ ಇದು…. ಈ ಬಳಲಿದ ಹಿರಿಯ ಮುಖಗಳಲ್ಲಿ ಸುರಿ ಯುತ್ತಿರುವ ಕಣ್ಣೀರು ನೋಡಿದರೆ ಯಾರಿ ಗಾದರೂ ಸರಿ, ಅಯ್ಯೋ ಪಾಪ‌ ಅನಿಸದಿರದು… ಈ ಹಿರಿಯ ಜೀವಗಳೆರಡು ಬ್ಯಾಗಲ್ಲಿ ಫೈಲಿಟ್ಟು ಕೊಂಡು ಅದರ ಜತೆ ವಿಷದ ಬಾಟಲಿ ಇಟ್ಟು ಕೊಂಡು ಇಟ್ಟುಕೊಂಡೆ ಡಿಸಿ,ಎಸ್ಪಿ ಕಚೇರಿಗೆ ಅಲೆದಾಡುತಿರೋದು ಯಾಕೆ ಅಂತ ಕೇಳಿ, ನಿಮಗೆ ಅರ್ಥ ಆಗೋ ತರಹ‌ ನಾವು ಹೇಳ್ತೀವಿ. ಬೈಟ್ : ಕೃಷ್ಣಪ್ಪ ನಿವೃತ್ತ ಸಹಾಯಕ ಇವರ ಈ ಗೋಳಾಟಕ್ಕೆ ಕಾರಣ ಯಾರು ಗೊತ್ತ… ಇಲ್ನೊಡಿ ಹೀಗೆ ಕೈ ಮುಗಿತಿರೋ ಈತನ ಹೆಸರು ಎಂ.ಜಗದೀಶ್ ಬಿನ್ ಮುನಿ ನಾರಾಯಣಪ್ಪ ಈತ ಚಿಂತಾಮಣಿ ನಗರಸಭೆ 19ನೇ ವಾರ್ಡಿನ ಕೌನ್ಸಿಲರ್. ತನ್ನ ರಾಜಕೀಯ ಪ್ರಭಾವನ್ನ ಬಳಸಿ ಕಳೆದ 30 ವರ್ಷ ಗಳಿಂದ ಅನುಭವದಲ್ಲಿರುವ ಕೃಷ್ಣಪ್ಪರವರ‌ ನಿವೇಶನ ವನ್ನ ದೌರ್ಜನ್ಯವಾಗಿ ವಶಪಡಿಸಿ ಕೊಳ್ಳಲು ಮುಂದಾಗಿದ್ದೇ ಇಂತಹುದೊಂದು ಘಟನೆಗೆ ಕಾರಣ. ಚಿಂತಾಮಣಿ ನಗರದ ಬೆಂಗಳೂರು ರಸ್ತೆಯಿಂದ ರಾಜೀವ್ ನಗರದ ಮಳಪಲ್ಲಿ ಸರ್ವೇ ನಂ.63ರಲ್ಲಿನ ಈ ನಿವೇಶನ ಕೃಷ್ಣಪ್ಪ ರವರಿಗೆ‌ ಗ್ರಾಮ ಪಂಚಾಯ್ತಿಯಲ್ಲಿ ನೊಂದಾವಣೆಯಾಗಿತ್ತು.ಇದೇ ಸ್ವತ್ತು ನಗರಸಭೆ ಗೆ ವರ್ಗಾವಣೆಯಾಗಿದ್ದ ಆ ಜಮೀನಿಗೆ ನಗರ ಸಭೆಯಲ್ಲಿ ಖಾತೆ ನಂಬರ್ 362 /1 ಎಂದು ಹೊಸ ಖಾತೆ ನಂಬರ್ ನೀಡಲಾಗಿತ್ತು.ನಿವೃತ್ತ ಈ ದಂಪತಿಗಳಿಗೆ ಪ್ರಭಾವಿಗಳಾಗಲಿ ರಾಜಕಾರಣಿ ಗಳಾಗಲಿ ಯಾರು ಇಲ್ಲ ಅನ್ನೋದನ್ನ ಗಮನಿಸಿದ ಈ ನಗರಸಭೆ ಸದಸ್ಯ ಜಗದೀಶ್ ಮತ್ತು ಈತನ ಸಹಚರರು ಏಕಾಏಕಿ ನುಗ್ಗಿ ಹಾಡುಹಗಲೆ ಕೇವಲ 3 ಗಂಟೆಗಳಲ್ಲಿ ಕಾಂಪೌಡ್ ಕೂಚಗಳು,ಆ ನಿವೇಶನ ದಲ್ಲಿ ಬೆಳೆದಿದ್ದ ಮರ‌ ಗಿಡಗಳನ್ನು ನಾಶಮಾಡಿ ರಾತ್ರೋ ರಾತ್ರಿಯೇ ಶೀಟ್ ಗಳಲ್ಲಿ ಕಾಂಪೌಡ್ ವಾಲ್ ನಿರ್ಮಾಣ ಮಾಡಿದ್ದಾರೆ. ಈ ಎಲ್ಲ ಘಟನೆಗಳನ್ನ ಗಮನಿಸಿದ ಈ ವೃದ್ದದಂಪತಿ ಕೇಳಿದ್ದಕ್ಕೆ ಕೃಷ್ಣಪ್ಪ ಮತ್ತು ಆತನ ಹೆಂಡತಿಯನ್ನ ವಯಸ್ಸಾದ ಹಿರಿಯರು ಎನ್ನುವದನ್ನ ಮರೆತು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಕೊಲ್ಲುವುದಾಗಿ ಪ್ರಾಣ ಬೆದರಿಕೆ ಹಾಕಿದ್ದಾರೆ.ಇವರ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟರೂ ನಗರಠಣಾ ಸಬ್ ಇನ್ಸ್ ಪೆಕ್ಟರ್ ನಾರಾಯಣ ಸ್ವಾಮಿ ಕ್ರಮ ಕೈಗೊಂಡಿಲ್ಲ ನಗರಸಭೆ ಕಮೀಷನರ್ ಸಹ ಪ್ರಭಾವಿ ಕೌನ್ಸಿಲರ್ ಪರವಾಗಿಯೆ ಮಾತನಾಡಿದ್ದಾರೆ. ಇನ್ನು ಚಿಂತಾಮಣಿಯ ಯಾವ ಅಧಿಕಾರಿ ಬಳಿ ಯೂ ನ್ಯಾಯಸಿಗೊಲ್ಲ ಎಂದರಿತ ಈ ದಂಪತಿ ತಮ್ಮಲ್ಲಿ ರುವ ದಾಖಲೆಗಳನ್ನ ಹಿಡಿದು ನೇರ ವಾಗಿ ಡಿಸಿ ಬಳಿ ಬಂದು ತಮ್ಮ ಅಳಲನ್ನ ತೋಡಿ ಕೊಳ್ಳೋಣ. ಅಲ್ಲಿಯೂ ನ್ಯಾಯ ಸಿಗದೆ ಹೋದರೆ ಅಲ್ಲಿಯೇ ವಿಷ ಕುಡಿದು ಸಾಯುವ ನಿರ್ಧಾರಕ್ಕೆ ಬಂದಿದ್ದಾರೆ. ವಿಷದ ಬಾಟಲನ್ನು ತಮ್ಮೊಂದಿಗೆ ತಂದಿರುವ‌ ಈ ದಂಪತಿಯ ದುಗುಡವನ್ನ ಅರ್ಥಮಾಡಿಕೊಂಡ ಡಿಸಿ ಆರ್.ಲತಾ ತಹಶೀಲ್ದಾರ್ ಗೆ ಪರಿಶೀಲಿಸುವಂತೆ ಸೂಚಿಸಿದ್ದಾರೆ ಎಸ್ ಪಿ ಮಿಥುನ್ ಕುಮಾರ್ ಅಂತೂ ಸರ್ಕಲ್ ಇನ್ಸ್ ಪೆಕ್ಟರ್ ಗೆ ಕಾಲ್ ಮಾಡಿ ದೌರ್ಜನ್ಯವೆಸಗಿದ ವ್ಯಕ್ತಿ ಎಷ್ಟೆ ಪ್ರಭಾವಶಾಲಿ ಯಾಗಿದ್ದರು ಬಂಧಿಸಿ ಆ ನಿವೇಶನ ಹೇಗಿತ್ತೋ ಹಾಗೆಯೆ ನಿರ್ಮಾಣ ಮಾಡಿಕೊಡಿ ಅಂತ ಹೇಳಿದ ಮೇಲೆ ನಿರ್ಮಾಣದ ಹಂತದಲ್ಲಿದ್ದ ಕಾಂಪೌಂಡ್ ಕೆಲಸ ಮಾತ್ರ ನಿಂತಿದೆ…ಮುಂದೆ ಯಾವ ಹಂತಕ್ಕೆ ಈ ನಿವೇಶನದ ಕತೆ ಮುಂದು‌ ವರೆಯುತ್ತೋ,ವೃದ್ದ ದಂಪತಿಗಳು ಕಾದು‌ ನೋಡುತ್ತಿದ್ಜಾರೆ.