ವಸೂಲಿದಂದೆಯಲ್ಲಿ ಟ್ರಾಫಿಕ್ ಪೊಲೀಸರು…!?

66

ಬೆಂಗಳೂರು:ಮಹಾನಗರ ವಾಗಿ ಬೆಳೆಯುತ್ತಿದ್ದಂತೆ ವಾಹನ ದಟ್ಟನೆಯೂ ಸಹಾ ಹೆಚ್ಚಾಗುತ್ತಿದೆ.ಪ್ರತಿನಿತ್ಯ ವಾಹನ ಸಂಚಾರ ನಿಯಂತ್ರಣಕ್ಕೆ ಸರ್ಕಾರವೂ ಸಹಾ ಹಲವಾರು ಕಾನೂನುಗಳನ್ನೂ ರೂಪಿಸಿವೆ.ಈ ಕಾನೂನು ಗಳನ್ನೆ ಬಂಡವಾಳ ಮಾಡಿಕೊಂಡಿರುವ ಸಂಚಾರ ಪೋಲಿಸರು ರಸ್ತೆಯಲ್ಲಿ ಬರುವ ವಾಹನ ಸವಾರರ ಮುಂದೆ ಸರ್ಕಾರದ ಅಧಿಕೃತ ಬಿಕ್ಷುಕರಂತೆ ವರ್ತಿಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಬೆಂಗಳೂರು ನಗರದ ಮೈಸೂರು ರಸ್ತೆಯಲ್ಲಿರುವ ಬ್ಯಾಟರಾಯನ ಪುರ ಸಂಚಾರಿ ಪೋಲಿಸ್ ಠಾಣೆ ವ್ಯಾಪ್ತಿಗೆ ಸೇರಿದ ಬಾಪೂಜಿ ನಗರದ ರಸ್ತೆಯಲ್ಲಿ ಭಿಕ್ಷೆಗಿಳಿದ ಸಂಚಾರಿ ಪೋಲಿಸರ ಬಂಡವಾಳ ವನ್ನು ನಮ್ಮ ತಂಡ ಬಯಲಿಗೆಳೆಯುವಲ್ಲಿ ಯಶಸ್ವಿಯಾಗಿದೆ. ಈಗಾಗಲೇ ಕರೋನಾ ಸಂಕಷ್ಟದಲ್ಲಿರುವ ಸಾರ್ವಜನಿಕರಿಂದ ಅಕ್ರಮವಾಗಿ ಹಣ ವಸೂಲಿ ಮಾಡಿ ಸಿಕ್ಕಿಬಿದ್ದಿದ್ದಾರೆ.ಕಳೆದ ಕೆಲವು ದಿನಗಳ ಹಿಂದೆ ಆಸ್ಪತ್ರೆಗೆಂದು ದ್ವಿಚಕ್ರ ವಾಹನದಲ್ಲಿ ಹೋಗಿತ್ತಿದ್ದ ಮಹಿಳೆಯನ್ನು ತಡೆದ ಸಂಚಾರ ಪೋಲಿಸ್ ಉಪನಿರೀಕ್ಷಕರೊಬ್ಬರು ವಾಹನದ ಹಿಂಬದಿ ಸವಾರಿಯಲ್ಲಿದ್ದ ಮಹಿಳೆ ಹೆಲ್ಮೆಟ್ ಹಾಕಿಲ್ಲ ಎಂದು ದಂಡ ಕೇಳಿದ್ದಾರೆ.ಇದೇ ಸಮಯದಲ್ಲಿ ಅಲ್ಲೆಇದ್ದ ವಾಹನ ಚಾಲಕನೊಬ್ಬ ನಿಂದ ವಸೂಲಿಮಾಡಿದ ಹಣ ಜೇಬಿಗಿಳಿಸಿ ಕೊಳ್ಳುತ್ತಾನೆ.ಹಾಗೂ ಅದೇ ಮಹಿಳೆಯ ಬಳಿ ಯಾವೂದೇ ರಸೀದಿ ನೀಡದೆ ಹಣವಸೂಲಿ ಮಾಡಿ ಇಲಾಖೆಯ ಗೌರವವನ್ನು ಬೀದಿಪಾಲಗುವಂತೆ ಮಾಡುವುದರೊಂದಿಗೆ ಅಧಿಕೃತವಾಗಿ ಭಿಕ್ಷೆ ಬೇಡಿ ಇಲಾಖೆ ಗೌರವಕ್ಕೆ ಮಸಿಬಳಿಯುತ್ತಿದ್ದಾರೆ. ಇನ್ನಾದರು ಇಲಾಖೆಯ ಹಿರಿಯ ಅಧಿಕಾರಿಗಳು ಇಂತಹ ಪ್ರಕರಣಗಳ ಬಗ್ಗೆ ಗಮನ ಕೊಟ್ಟು ಬೀದಿಲಿ ಭಿಕ್ಷೆಬೇಡುತ್ತಿರುವ ಇಂತಹ ಭ್ರಷ್ಟರ ವಿರುದ್ದ ಸೂಕ್ತ ಕ್ರಮ ಜರುಗಿಸಿ ಇಲಾಖೆಯ ಗೌರವವನ್ನು ರಕ್ಷಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ.