ಡಿಸಿ ಬಗ್ಗೆ ಅವಹೇಳನಕಾರಿ ಮಾತನಾಡಿದ ಶಾಸಕರು ಕೂಡಲೇ ಕ್ಷಮೆ ಕೇಳುವಂತೆ ಒತ್ತಾಯ.

89

ನಗರ ಸಭೆ ಮಹಿಳೆಯರ ಆಕ್ರೋಶ.

ಚಿಕ್ಕಬಳ್ಳಾಪುರ/ಚಿಂತಾಮಣಿ:ಕಳೆದ ದಿನ ಚಿಂತಾಮಣಿ ಕ್ಷೇತ್ರದ ಶಾಸಕ ಜೆಕೆ.ಕೃಷ್ಣಾರೆಡ್ಡಿ ತಾಲ್ಲೂಕಿನ ಹಿರೇಕಟ್ಟಿಗೇನಹಳ್ಳಿ ಗ್ರಾಮದ ದೇವಸ್ಥಾನದ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿ ಮಹಿಳೆ ಜಿಲ್ಲಾಧಿಕಾರಿ ಡಾ.ಲತಾ ರವರ ಬಗ್ಗೆ ಹಗುರವಾಗಿ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ. ಜಿಲ್ಲಾಧಿಕಾರಿ ಒಬ್ಬ ಹೆಣ್ಣುಮಗಳು ಎಂಬುದು ಅವರು ಮರೆತಿದ್ದಾರೆ. ಉನ್ನತ ಅಧಿಕಾರದಲ್ಲಿದ್ದ ಶಾಸಕ ಹೆಣ್ಣಿಗೆ ಗೌರವ ಕೊಡುವುದು ಕಲಿಯ ಬೇಕು, ಮಾತಾಡುವ ರೀತಿಯನ್ನು ಬದಲಿಸಿ ಕೊಳ್ಳಬೇಕು,ಜಿಲ್ಲಾಧಿಕಾರಿಯಲ್ಲಿ ಕ್ಷಮೆಯಾಚಿಸ ಬೇಕು,ಇಲ್ಲದಿದ್ದರೆ ನಗರಸಭೆ ಸದಸ್ಯರಲ್ಲಿ ಮಹಿಳೆಯರೇ ಹೆಚ್ಚಾಗಿರುವುದರಿಂದ ಮುಂದಿನ ದಿನಗಳಲ್ಲಿ ಬಹಿರಂಗವಾಗಿ ಜಿಲ್ಲಾಧಿಕಾರಿಗಳಿಗೆ ಕ್ಷಮೆ ಕೇಳದಿದ್ದರೆ ಹೋರಾಟಗಳನ್ನು ನಡೆಸುತ್ತೇವೆ ಎಂದು ಚಿಂತಾಮಣಿ ನಗರಸಭೆ ಅಧ್ಯಕ್ಷೆ ರೇಖಾಉಮೇಶ್, ಉಪಾಧ್ಯಕ್ಷೆ ಸುಹಾಸಿನಿಶೇಷರೆಡ್ಡಿ ಮತ್ತು ನಗರಸಭಾ ಸದಸ್ಯೆ ರುಬಿಯಾಸುಲ್ತಾನಾ ಅಲ್ಲಾಬಕಷ್ ರವರು ಎಚ್ಚರಿಕೆ ನೀಡಿದ್ದಾರೆ. ನಗರಸಭೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಾಸಕ ಕೃಷ್ಣಾರೆಡ್ಡಿ ರವರು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಹೇಳಿದ್ದಾರೆ. ಅವರೊಬ್ಬ ಶಾಸಕರಾಗಿ ಯಾವರೀತಿ ನಡೆದು ಕೊಳ್ಳಬೇಕು ಮತ್ತು ಮಹಿಳೆಯರಿಗೆ ಯಾವ ರೀತಿ ಗೌರವ ಕೊಡಬೇಕು ಎಂಬುದನ್ನು ಕಲಿಯ ಬೇಕು ಎಂದು ತಮ್ಮಆಕ್ರೋಶ ವ್ಯಕ್ತಪಡಿಸಿದರು.