ಕೆಎಂಕೆ ಟ್ರಸ್ಟ್ ವತಿಯಿಂದ ದಿನಸಿಕಿಟ್ ವಿತರಣೆ.

7

ಚಿಕ್ಕಬಳ್ಳಾಪುರ/ಚಿಂತಾಮಣಿ :ತಾಲ್ಲೂಕಿನ ಕೈವಾರ ಗ್ರಾಮದಲ್ಲಿ ಶನಿವಾರ ದಿನದಂದು ಕೆ ಎಂ ಕೆ ಟ್ರಸ್ಟ್ ನಿಂದ ದಿನಸಿ ಸಾಮಗ್ರಿಗಳ ಕಿಟ್ ಗಳನ್ನು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷ ಜಿಎನ್ ವೇಣುಗೋಪಾಲ್ ಮಾತನಾಡಿ ಕೊರೊನಾ 2ನೇ ಅಲೆಯಿಂದ ಸಂಕಷ್ಟದಲ್ಲಿರುವವರಿಗೆ ನಮ್ಮ ಟ್ರಸ್ಟ್ ವತಿಯಿಂದ ತಮ್ಮ ಕೈಲಾದ ಸಹಾಯ ಮಾಡುತ್ತಿರುವುದಾಗಿ ಹೇಳಿದರು. 2ನೇ ಅಲೆಗೆ ಹೆಚ್ಚಾಗಿಯುವಕರು,ಮಧ್ಯ ವಯಷ್ಕರರು ಸಾವನ್ನಪ್ಪಿರುವುದುದೊಡ್ಡ ದುರಂತವೇ ಆಗಿದೆ.ಸರ್ಕಾರವು ಸಂಕಷ್ಟದ ಕಾಲದಲ್ಲಿ ಸ್ಪಂದಿಸದೇ ಇರುವುದು ಬೇಸರ ತಂದಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ಕೆ ಎಂ ರಾಜಶೇಖರ್ ರೆಡ್ಡಿ ,ಸಂತೇಕಲ್ಲ ಹಳ್ಳಿ ಮಹೇಶ್ ,ಪೆದ್ದುರು ನಾಗರಾಜ್ ರೆಡ್ಡಿ ,ಶಿವಣ್ಣ ,ನಾರಾಯಣ ರೆಡ್ಡಿ , ಗಣೇಶ್, ಶ್ರೀಧರ್ , ನಾರಾಯಣಸ್ವಾಮಿ, ರಾಮಣ್ಣ, ಅವಿನಾಶ್, ಕುಮಾರ್ ,ಇದ್ದರು.