ವಾರಿಯರ್ಸ್‌ ಗೆ ವಯಕ್ತಿಕ ಸಂಬಳ ನೀಡಿದ ಶಾಸಕ:ಜೆಕೆ…

8

ಕೊವಿಡ್ ಕೇಂದ್ರದಲ್ಲಿ ಕಾರ್ಯನಿವರ್ಹಿಸಿದ ವೈದ್ಯರು ಮತ್ತು ಸಿಬ್ಬಂದಿಗೆ ವೈಯುಕ್ತಿವಾಗಿ ೫ ಲಕ್ಷ ೧೦ ಸಾವಿರ ರೂ ಎರಡನೇ ತಿಂಗಳ ಸಂಬಳ ನೀಡಿದ ಶಾಸಕ ಜೆಕೆ.ಕೃಷ್ಣಾರೆಡ್ಡಿ. ವಿಶ್ವವನ್ನು ಕಾಡುತ್ತಿರುವ ಕೊರೊನಾ ವೈರಸ್ ನ್ನು ಎದುರಿಸಿ ಚಿಂತಾಮಣಿ ಕೊವೀಡ್ ಕೇಂದ್ರ ದಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವಾಲೆಂಟರಿ ವೈದ್ಯರು,ಶುಶ್ರೂಷಕಿಯರು ಹಾಗೂ ಸಿಬ್ಬಂದಿಗೆ ಶಾಸಕ ಜೆಕೆ.ಕೃಷ್ಣಾರೆಡ್ಡಿ ವೈಯಕ್ತಿಕ ವಾಗಿ ಎರಡನೇ ತಿಂಗಳ ಸಂಬಳ ಸುಮಾರು ೫ ಲಕ್ಷ ೧೦ ಸಾವಿರ ರೂ ಹಣನೀಡಿ ತಮ್ಮ ಕೃತಜ್ಞತೆ ಸಲ್ಲಿಸಿದರು. ಚಿಂತಾಮಣಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿನ ಕೋವಿಡ್ ಕೇಂದ್ರದಲ್ಲಿ ಕಾರ್ಯನಿರ್ವಹಿಸಿದ ಹೆಚ್ಚುವರಿ ವೈದ್ಯರು, ಶುಶ್ರೂಷಕಿಯರು ಹಾಗೂ ಸಿಬ್ಬಂದಿಗೆ ಶಾಸಕ ಜೆಕೆ ಕೃಷ್ಣಾರೆಡ್ಡಿರವರು ಸ್ವಂತ ಹಣದಿಂದ ೨೫ ಜನರಿಗೆ ಎರಡನೇ ತಿಂಗಳ ಸಂಬಳ ಐದು ಲಕ್ಷದ ಹತ್ತುಸಾವಿರ ರೂ ನಗದು ಹಣವನ್ನು ವಿತರಣೆ ಮಾಡಿ ಕೊವೀಡ್ ಕೇಂದ್ರ ದಲ್ಲಿ ಸೇವೆ ಸಲ್ಲಿಸಿದ ಎಲ್ಲಾ ವೈದ್ಯಕೀಯ ಸಿಬ್ಬಂದಿಗೆ ಕೃತಜ್ಞತೆ ಗಳನ್ನು ಸಲ್ಲಿಸಿದರು. ಈ ವೇಳೆ ಶಾಸಕ ಜೆಕೆ ಕೃಷ್ಣಾರೆಡ್ಡಿ ಮಾತನಾಡಿ ಕೊರೊನಾ ಸಂಕಷ್ಟದಲ್ಲಿ ಸೋಂಕಿನಿಂದ ಮೃತ ಪಟ್ಟವರ ಮೃತದೇಹವನ್ನು ಮುಟ್ಟಲು ರಕ್ತ ಸಂಬಂದಿಗಳೆ ಮುಂದಾಗದ ಸಂದರ್ಭದಲ್ಲಿ ತಮ್ಮ ಪ್ರಾಣನ್ನು ಲೆಕ್ಕಿಸದೆ ಸೋಂಕಿತರಿಗೆ ಚಿಕಿತ್ಸೆ ನೀಡಿದ ಸೋಂಕನ್ನು ನಿಯಂತ್ರಿಸಿ ಜನರ ಪ್ರಾಣ ವನ್ನು ಕಾಪಾಡುತ್ತಿರುವ ವೈದ್ಯರಿಗೆ ಹಾಗೂ ಸಿಬ್ಬಂದಿಗೆ ಋಣಿಯಾಗಿರುತ್ತೆನೆ ಎಂದ ಅವರು ಎರಡು ತಿಂಗಳ ಹಿಂದೆ ನಿರ್ಧರಿಸಿದಂತೆ ಕೊವಿಡ್ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವ ವೈದ್ಯಕೀಯ ಸಿಬ್ಬಂದಿಗೆ ಮೂರು ತಿಂಗಳ ಸಂಬಳ ನೀಡಲು ನಿರ್ದಾರವಾಗಿತ್ತು,ಇದೀಗ ಕೊರೋನಾ ಸೊಂಕಿ ತರ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಇನ್ನೂ ಒಂದು ತಿಂಗಳು ವೈದ್ಯಕೀಯ ಸಿಬ್ಬಂದಿ ಸೇವೆ ಮುಂದುವರೆಸಿದರೇ ಮೂರನೇ ತಿಂಗಳಿಗೂ ಸಂಬಳ ನೀಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ನಾಲ್ಕುಜನ ವೈದ್ಯರು ಒಳಗೊಂಡಂತೆ ಇಪ್ಪತೈದು ಮಂದಿಗೆ ಎರಡನೇ ತಿಂಗಳ ವೇತನ ೫ ಲಕ್ಷ ೧೦ ಸಾವಿರ ರೂ ಹಣ ವನ್ನು ನಗದು ರೂಪದಲ್ಲಿ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಸ್ವಾತಿ,ಸರ್ಕಾರಿ ಆಸ್ಪತ್ರೆ ಯ ಆಡಳಿತ ವೈಧ್ಯಾಧಿಕಾರಿ ಡಾ.ಸಂತೋಷ, ನಗರಸಭಾ ಸದಸ್ಯ ಮಂಜುನಾಥ, ಸಾಧೀಕ್, ಜೆಡಿಎಸ್ ತಾಲೂಕು ಉಪಾಧ್ಯಕ್ಷ ದಿನ್ನಮಿಂದ ಹಳ್ಳಿ ಬೈರಾರೆಡ್ಡಿ,ಯುವ ಮುಖಂಡ ಡಾ.ವಿ ಅಮರ್,ಮಾಜಿ ನಗರಸಭಾ ಸದಸ್ಯ ವೆಂಕಟ ರವಣಪ್ಪ,ಆಯಿಷಾ ಸುಲ್ತಾನ,ವಕೀಲ ವಾಸ್ತು ರಮೇಶ್ ಮುಖಂಡರು ಜನಾರ್ದನ್, ಅನಿಲ್, ಸುಧಾಕರ್,ಬದ್ರಿ,ಜೆಕೆ ಜಮೀಲ್,ಎಂಎಲ್ಎ ಮುನಾವರ್,ಮಣಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು