ಎಸೆಸೆಲ್ಸಿ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ ಶಾಸಕರು.

7

ಪೊಷಕರು ಆತಂಕಪಡುವ ಅಗತ್ಯವಿಲ್ಲ ಧೈರ್ಯವಾಗಿ ಪರೀಕ್ಷೆಗೆ ಕಳುಹಿಸಿ : ಜೆಕೆ.ಕೃಷ್ಣಾರೆಡ್ಡಿ.

ಚಿಕ್ಕಬಳ್ಳಾಪುರ/ಚಿಂತಾಮಣಿ:ನಾಳೆ ನಡೆಯ ಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಪೊಷಕರು ಯಾವುದೆ ಕೊರೊನಾದ ಆತಂಕಪಡದೆ ದೈರ್ಯವಾಗಿ ತಮ್ಮ ಮಕ್ಕಳನ್ನು ಪರೀಕ್ಷೆ ಬರೆಯಲು ಕಳುಹಿಸಿ ಅವರ ವಿದ್ಯಾಬ್ಯಾಸಕ್ಕೆ ಪೊತ್ಸಾಹಿಸಿ ಎಂದು ಎಸ್‌ಎಸ್‌ಎಲ್‌ಸಿ ವಿಧ್ಯಾರ್ಥಿಗಳ ಪೊಷಕರಿಗೆ ಕ್ಷೇತ್ರದ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಕರೆ ನೀಡಿದರು. ತಾಲೂಕಿನಾದ್ಯಂತ ನಾಳೆ ನಡೆಯಲಿರುವ ಎಸ್‌ಎಸ್‌ಎಲ್‌ಸಿ ಪರಿಕ್ಷೆಗೆ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಳು ಕೈಗೊಂಡಿರುವ ಸಿದ್ದತೆಗಳನ್ನು ಪರಿಶೀಲನೆ ಮಾಡಿ ನಂತರ ತಾಲೂಕಿನ ಎಲ್ಲಾ ಹತ್ತನೇ ತರಗತಿಯ ಮಕ್ಕಳಿಗೆ ವೈಕ್ತಿಕವಾಗಿ ಬಿಸ್ಕೇಟ್ ಮತ್ತು ನೀರು ವಿತರಣೆ ಮಾಡಲು ಇಳಾಖೆಯವರಿಗೆ ನೀಡಿ ಮಾತನಾಡಿದರ ಅವರು ತಾಲೂಕಿನಾದ್ಯಂತ 18 ಪರೀಕ್ಷಾ ಕೇಂದ್ರಗಳಿದ್ದು ನಗರದಲ್ಲಿ 8 ಗ್ರಾಮೀಣ ಭಾಗದಲ್ಲಿ 10 ಕೇಂದ್ರಗಳಿದ್ದು ಪ್ರತಿಯೊಂದು ಕೇಂದ್ರದಲ್ಲೂ ಚಿಕಿತ್ಸೆ ಕೇಂದ್ರವನ್ನು ಮೀಸಲಿಡಲಾಗಿದೆ ಯಾವುದೆ ವಿದ್ಯಾರ್ಥಿಗೆ ಕೆಮ್ಮು ನಗಡಿಗಳಂತಹ ಕೊರೊನಾ ಸೊಂಕು ಲಕ್ಷಣಗಳು ಕಾಣಿಸಿದರೆ ಅಂತಹವರನ್ನು ಪತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಸಲಾಗುವುದು ಅಷ್ಟೇ ಅಲ್ಲದೆ ಎಲ್ಲಾ ರೀತಿಯ ಕೊರೊನಾ ನಿಯಮಗಳನ್ನು ಪಾಲನೆ ಮಾಡಲು ಹೆಚ್ಚಿನ ಸಿಬ್ಬಂದಿಯನ್ನು ನೇಮಿಸಿದ್ದು ವಿಧ್ಯಾರ್ಥಿಗಳು ಯಾವುದೆ ಆತಂಕ ಪಡುವಂತಿಲ್ಲ ಆದರಿಂದ ಪೊಷಕರು ತಮ್ಮ ಮಕ್ಕಳನ್ನು ಹುಮ್ಮಸ್ಸಿನಿಂದ ಪರೀಕ್ಷೆಗೆ ಕಳುಹಿಸಿ ಶುಭಾಹಾರೈಸಿ ಎಂದು ತಿಳಿಸಿದರು. ಪರೀಕ್ಷೆ ನಡೆಯುತ್ತೊ ಇಲ್ವೊ ಎಂದು ಕಳೆದ ಒಂದು ವರ್ಷದಿಂದ ರಾಜ್ಯದ ವಿದ್ಯಾರ್ಥಿಗಳು ಬಹಳ ಆತಂಕದಲ್ಲಿ ಇದ್ದರು ರಾಜ್ಯ ಸರ್ಕಾರ ನಿಗಧಿಯದಂತೆ 19 ಮತ್ತು 22 ರಂದು ಎರಡು ದಿನಗಳ ಕಾಲ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲು ತೀರ್ಮಾನಿಸಿದ್ದರಿಂದ ತಾಲೂಕಿನ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಸೂಕ್ತ ಕೊರೊನಾ ನಿಯಮಗಳಿ ತಕ್ಕಂತೆ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಿದಂತೆ ತಮ್ಮ ಸೂಚನೆಯಂತೆ ಅಧಿಕಾರಿಗಳು ಪರೀಕ್ಷಾ ಕೇಂದ್ರಗಳಲ್ಲಿ ಒಂದೊಂದು ಐಸುಲೇಷನ್ ಕೊಠಡಿ ರೂಪಿಸಿ ಪ್ರತಿಯೊಬ್ಬರ ವಿದ್ಯಾರ್ಧಿಗೂ ಸ್ಯಾನಿಟೈಸರ್ ಮಾಸ್ಕ್ ನೀಡುವ ವ್ಯವಸ್ಥೆ ಮಾಡಿದ್ದಾರೆ ಇದರಿಂದ ವಿದ್ಯಾರ್ಥಿಗಳು ಯಾವುದೆ ಆತಂಕಪಡುವ ಅಗತ್ಯವಿಲ್ಲವೆಂದ ಅವರು ಗ್ರಾಮೀಣ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಸಾರಿಗೆ ವ್ಯವಸ್ಥೆ ಮಾಡಲು ಸಾರಿಗೆ ಅಧಿಕಾರಿಗಳಿಗೆ ಹಾಗೂ ವಿದ್ಯುತ್ ವ್ಯತ್ಯಾಯ ಆಗದಂತೆ ಬೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದ್ದು ಯಾವುದೆ ಆಡ್ಡಿ ಆತಂಕಗಳಿಲ್ಲದೆ ಪರೀಕ್ಷೆ ನಡೆಯಲಿದೆ ಎಂದರು. ಕೊರೊನ ಸಂಕಷ್ಠದಲ್ಲಿ ಭಯದ ವಾತವರಣ ಮೂಡುವುದು ಸಹಜ ಆದರೆ ವಿದ್ಯಾರ್ಥಿಗಳು ಯಾವುದೆ ರೀತಿಯಲ್ಲಿ ಬಯಪಡುವ ಅಗತ್ಯವಿಲ್ಲ ಪರೀಕ್ಷೆ ಚನ್ನಾಗಿ ಬರೆದು ಮುಂದಿನ ತರಗತಿಗೆ ತೇರ್ಗಡೆಯಾಗಿ ವಿದ್ಯಾಬ್ಯಾಸದಲ್ಲಿ ಉನ್ನತ ಮಟ್ಟಕೇರಲ್ಲಿ ಹಾಗೂ ತಾಲೂಕು ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪಲಿತಾಂಶದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯಲಿ ಎಂದು ವಿದ್ಯಾರ್ಥಿಗಳಿಗೆ ಶುಭಾಹಾರೈಸಿದರು. ಈ ವೇಳೆ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್ ಶಾಸಕರ ಸೂಚನೆಯಂತೆ ಕೊರೊನಾ ನಿಯಂತ್ರ ಕ್ರಮಗಳನ್ನು ಪಾಲನೆ ಮಾಡಿ ಪರಿಕ್ಷೇ ಬರೆಯಲು ತಾಲೂಕಿನಾದ್ಯಂತ 4066 ವಿದ್ಯಾರ್ಥಿಗಳ ಸಿದ್ದರಿದ್ದು 18 ಕೇಂದ್ರಗಳನ್ನು ತಯಾರಿಸಿದ್ದೆವೆ ಹಾಗೂ ಪ್ರತಿಯೊಂದು ಮಗುವುದು ಸಹ ಪರಿಕ್ಷೇಯಲ್ಲಿ ಪಾಲ್ಗೊಳಲು ಸಾರಿಗೆ ವ್ಯವಸ್ಥೆ ಮಾಡಿದ್ದೆವೆ ಅಷ್ಟೇ ಅಲ್ಲದೆ ತೀರ ಪರಿಕ್ಷೆಗೆ ಹಾಜರಾಗಲು ಸಾರಿಗೆ ವ್ಯವಸ್ಥೆ ಕಲ್ಪಿಸಲು ಹಾಗೂ ಅನುಕೂಲವಿಲ್ಲದಿದ್ದರೆ ವಿಶೇಷ ಶಿಕ್ಷಕರು ಅಂತಹ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದು ಪರೀಕ್ಷೆ ಬರಿಸಿದ ನಂತರ ಮನೆಗೆ ವಿದ್ಯಾರ್ಥಿಯನ್ನು ಬಿಡುವ ಕೆಲಸ ವಿಶೇಷ ಶಿಕ್ಷಕರು ಮಾಡಲಿದ್ದಾರೆ ಇದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯು ಪರಿಕ್ಷೆಗೆ ಹಾಜರಾಗಲು ಕೋರಿದೆ ಎನ್ನಲಾಗಿದೆ. ಈ ವೇಳೆ ನಗರಸಭೆ ಸದಸ್ಯರಾದ ಮಂಜುನಾಥ, ಆಗ್ರಹಾರ ಮುರಳಿ, ಮುಖಂಡರಾದ ಜನ, ವಾಸುದೇವಾಚಾರಿ, ಸೇರಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತಿತರರು ಹಾಜರಿದ್ದರು.