ಶಾಸಕ ರಿಂದ ಮೂರು ತಿಂಗಳಲ್ಲಿ ಹಕ್ಕುಪತ್ರ ನೀಡುವ ಬರವಸೆ

9

ಚಿಕ್ಕಬಳ್ಳಾಪುರ/ಚಿಂತಾಮಣಿ:ನಗರಸಭೆ ವ್ಯಾಪ್ತಿ ಯ 18 ಕೊಳಚೆ ಪ್ರದೇಶಗಳ ವಾಸಿಗಳಿಗೆ 3 ತಿಂಗಳ ಒಳಗಾಗಿ ಹಕ್ಕುಪತ್ರ ನೀಡಲಾಗುವುದು ಎಂದು ಶಾಸಕ ಎಂ.ಕೃಷ್ಣಾರೆಡ್ಡಿ ತಿಳಿಸಿದರು. ನಗರದ ತಾಲ್ಲೂಕು ಪಂಚಾಯ್ತಿಯಲ್ಲಿ ಮಂಗಳ ವಾರ ನಡೆದ ಅಧಿಕಾರಿಗಳ ಸಭೆಯ ನಂತರ ಮಾತನಾಡಿದರು. ರಾಜ್ಯ ಕೊಳಚೆಮಂಡಳಿ ಯಿಂದ ಮಾನ್ಯತೆ ಪಡೆ ದಿರುವ 18 ಕೊಳಚೆ ಪ್ರದೇಶಗಳಲ್ಲಿ ಹಲವಾರು ವರ್ಷಗಳಿಂದ ಹಕ್ಕುಪತ್ರಗಳ ನೀಡಿಕೆ ನೆನಗುದಿಗೆ ಬಿದ್ದಿದೆ.ಈಗ ಸರ್ಕಾರ ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ನೀಡುವಂತೆ ಆದೇಶ ನೀಡಲಾಗಿದೆ. ತಹಶೀಲ್ದಾರ್,ಪೌರಾಯುಕ್ತರು ಮತ್ತು ಕೊಳಚೆ ನಿರ್ಮೂಲನಾ ಮಂಡಳಿಯ ಅಧಿಕಾರಿ ಗಳೊಂದಿಗೆಸಭೆಯನ್ನು ನಡೆಸಿ ಅಧಿಕಾರಿಗಳಿಗೆ ಜವಾಬ್ದಾರಿಯನ್ನು ನಿಗದಿಪಡಿಸಲಾಗಿದೆ ಎಂದರು. ಕೊಳಚೆ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿ, ನಕ್ಷೆಯ ಸಮೇತ ವಿವರಗಳನ್ನು ಒಂದು ವಾರದ ಒಳಗೆ ನಗರಸಭೆಯ ಆಯುಕ್ತರಿಗೆ ನೀಡಬೇಕು. ಪೌರಾಯುಕ್ತರು ವರದಿಯನ್ನು ಪರಿಶೀಲಿಸಿ ಜತೆಗೆ ಅಗತ್ಯವಾದ ಎಲ್ಲ ದಾಖಲೆಗಳೊಂದಿಗೆ ಕೊಳಚೆ ನಿರ್ಮೂಲನಾ ಮಂಡಳಿಗೆ ಸಲ್ಲಿಸಬೇಕು. ಮಂಡಳಿಯ ಅಧಿಕಾರಿಗಳು 3 ತಿಂಗಳೊಳಗೆ ಎಲ್ಲ ಪ್ರಕ್ರಿಯೆಗಳನ್ನು ಮುಕ್ತಾಯಗೊಳಿಸಿ ಹಕ್ಕುಪತ್ರಗಳನ್ನು ನಿವಾಸಿಗಳಿಗೆ ನೀಡಲು ಕ್ರಮಕೈಗೊಳ್ಳುತ್ತಾರೆ ಎಂದರು. ನಗರ ಪ್ರದೇಶದಲ್ಲಿ 18 ಕೊಳಚೆ ಪ್ರದೇಶಗಳ ಜತೆಗೆ ಹೊಸದಾಗಿ ಪೌರಕಾರ್ಮಿಕರ ಬಡಾವಣೆ, ಶುದ್ದಕುಂಟೆ, ಹಳೇಕೋಟೆ, ಗಂಗಾನಗರ, ಆಶ್ರಯಬಡಾವಣೆ, ಕೆಂಪಮ್ಮನಗರ, ಬೆಟ್ಟದ ತಪ್ಪಲು ಸೇರಿದಂತೆ ಹೊಸದಾಗಿ 7 ಕೊಳಚೆ ಪ್ರದೇಶಗಳನ್ನು ಘೋಷಣೆ ಮಾಡುವಂತೆ ಕೊಳಚೆ ನಿರ್ಮೂಲನೆ ಮಂಡಳಿಗೆ ಹಾಗೂ ವಸತಿ ಸಚಿವರಿಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದರು. ತಹಶೀಲ್ದಾರ್ ಹನುಮಂತರಾಯಪ್ಪ, ಪೌರಾಯುಕ್ತ ಚೇತನ್ ಎಸ್.ಕೊಳವಿ, ನಗರಸಭೆ ಸದಸ್ಯರಾದ ಅಗ್ರಹಾರ ಮುರಳಿ, ದೇವಳಂಶಂಕರ್, ಕೊಳಚೆ ನಿರ್ಮೂಲನಾ ಮಂಡಳಿಯ ಅಧಿಕಾರಿಗಳು ಭಾಗವಹಿಸಿದ್ದರು.