ಫಲಾನುಭವಿಗಳಿಗೆ ಪಂಪು-ಮೋಟರ್ ವಿತರಣೆ..

12

ಗಂಗಾ ಕಲ್ಯಾಣ ಯೋಜನೆಯಲ್ಲಿ ಫಲಾನುಭವಿ ಗಳ ಕೊಳವೆ ಬಾವಿಗಳಿಗೆ ಪಂಪ್ ಮೋಟರ್ ವಿತರಣೆ ಮಾಡಿದ ಶಾಸಕ.

ಚಿಕ್ಕಬಳ್ಳಾಪುರ/ಚಿಂತಾಮಣಿ:ಡಾ.ಬಿಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ಗಂಗಾ ಕಲ್ಯಾಣ ಯೋಜನೆ 2018-19 ನೇ ಸಾಲಿನ ಅನುದಾನದ ಆಯ್ಕೆಯಾದ ಫಲಾನುಭವಿಗಳಿಗೆ ಕೊರೆದ ಕೊಳವೆ ಬಾವಿಗಳ ಪಂಪ್ ಮೋಟಾರ್ ವಿತರಣೆ ಕಾರ್ಯಕ್ರಮವನ್ನು ನಗರದ ಪಾಲಿಟೆಕ್ನಿಕ್ ಕಾಲೇಜಿನ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕರಾದ ಜೆಕೆ ಕೃಷ್ಣಾರೆಡ್ಡಿ ಭಾಗವಹಿಸಿ ಪಂಪ್ ಮೋಟಾರ್ ಗಳನ್ನು ಫಲಾನುಭವಿಗಳಿಗೆ ವಿತರಿಸಿದರು. ನಂತರ ಮಾತನಾಡಿದ ಅವರು ಡಾ! ಬಿ ಆರ್ ಅಂಬೇಡ್ಕರ್ ನಿಗಮದ ವತಿಯಿಂದ 24 ಫಲಾನುಭವಿಗಳ ಕೊಳವೆ ಬಾವಿಗಳ ಪಂಪ್ ಮೋಟಾರ್ ಗಳನ್ನು ವಿತರಣೆ ಮಾಡಲಾಗಿದ್ದು 2013ರಂದು ಪಂಪ್ ಮೋಟರ್ ಗಳು ಒಂದೂವರೆ ಲಕ್ಷ ಸರ್ಕಾರ ದಿಂದ ನೀಡಲಾಗುತ್ತಿತ್ತು ನಂತರ ಇದನ್ನು ಕುರಿತು ನಾನು ವಿಧಾನಸಭೆಯಲ್ಲಿ ಧ್ವನಿಯೆತ್ತಿದ ಕಾರಣ ಈಗ ಸರ್ಕಾರದಿಂದ ನಾಲ್ಕು ಲಕ್ಷ ನೀಡಲಾಗುತ್ತಿದೆ ಹಿಂದೆ ಒಂದುವರೆ ಲಕ್ಷಕ್ಕೆ ಇದ್ಯಾವುದು ಬರುತ್ತಿರಲಿಲ್ಲ ಮೊದಲು ಜಮೀನನ್ನು ಪತ್ರಗಳನ್ನು ಅಡಮಾನ ಇಡಲಾಗುತ್ತಿತ್ತು . ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಕೂಡಲೇ ಅನುದಾನವನ್ನು ಹೆಚ್ಚಿಸಬೇಕು ಎಂದು ಸರ್ಕಾರದ ಗಮನಕ್ಕೆ ತಂದ ನಂತರ 4 ಲಕ್ಷ ಮಾಡಿರುವ ಕಾರಣ ರೈತರಿಗೆ ಬಹಳ ಅನುಕೂಲವಾಗುತ್ತದೆ ರೈತರು ತಮ್ಮ ಜಮೀನಿನ ಪತ್ರಗಳು ಅಡಮಾನ ಇಟ್ಟುವಂಗಿಲ್ಲ ಎಂದು ಹೇಳಿದರು. ರೈತರು ಇವೆಲ್ಲನ್ನು ಉಪಯೋಗಿಸಿಕೊಂಡು ಆರ್ಥಿಕ ಬೆಳೆಗಳನ್ನುಇಟ್ಟು ಸಮಾಜದ ಮುಖ್ಯವಾಹಿನಿ ಗೆ ಬರಬೇಕೆಂದರು. ಈ ಸಂಧರ್ಭದಲ್ಲಿ ದೊಡ್ಡಬೊಮ್ಮಹಳ್ಳಿ ವೆಂಕಟರೆಡ್ಡಿ, ಗುಡ್ಡೆ ಶ್ರೀನಿವಾಸ್, ಅಬುಗುಂಡ ಶ್ರೀನಿವಾಸ್ ರೆಡ್ಡಿ , ಟಿ.ಪಿ.ಎಸ್ ರಾಜಣ್ಣ, ಅಂಬೇಡ್ಕರ್ ನಿಗಮದ ಅಧಿಕಾರಿ ರಾಜಶೇಖರ್, ದಿನ್ನಮಿಂದಹಳ್ಳಿ ಬೈರೆಡ್ಡಿ ,ರಾದರಮಣ, ಕೊರ್ಲಪರ್ತಿ ಬಾಬು,ಟೀಪು ನಗರ ಸುಧಾಕರ್,ಮುನಗನಹಳ್ಳಿ ಶ್ರೀನಿವಾಸ,ಕೈವಾರ ಸುಬ್ಬ ರೆಡ್ಡಿ,ರಾಜುಗೌಡ , ಮೈಲಾಂಡ್ಲಹಳ್ಳಿ ಮುದ್ದಸ್ಸಿರ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.