ವಾರಿಯರ್ಸ್ ಗೆ ದಿನಸಿ ಕಿಟ್ ವಿತರಣೆ.

31

ಕೊರೋನಾ ವಾರಿಯರ್ಸ್ ಗೆ ದಿನಸಿ ಕಿಟ್ ವಿತರಿಸಿದ ಬಿ ಜೆ ಪಿ ಜಿಲ್ಲಾ ಉಪಾಧ್ಯಕ್ಷರಾದ ಅರುಣ್ ಬಾಬು.

ಚಿಂತಾಮಣಿ :ಬಿ ಜೆ ಪಿ ಜಿಲ್ಲಾ ಉಪಾಧ್ಯಕ್ಷರಾದ ಅರುಣ್ ಬಾಬು ರವರು ಕುರುಬೂರು ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುವ ಆಶಾ ಕಾರ್ಯಕರ್ತೆಯರಿಗೆ ಆಹಾರ ಸಾಮಗ್ರಿಗಳ ಕಿಟ್ ಅನ್ನು ವಿತರಣೆ ಮಾಡಿದರು. ನಂತರ ಮಾತನಾಡಿದ ಅವರು ಬಡವರ ಕಷ್ಟಕ್ಕೆ ನೆರವಾದರೆ ಮನುಷ್ಯ ತನ್ನ ಜೀವನದಲ್ಲಿನೆಮ್ಮದಿ ಕಾಣಬಹುದಾಗಿದೆ ಕೊರೊನಾ ಲಾಕ್‌ಡೌನ್‌ನಿಂದ ಜನಸಾಮಾನ್ಯರು ಕಷ್ಟದ ಜೀವನಸಾಗಿಸುತ್ತಿದ್ದು, ಆಶಾ ಕಾರ್ಯಕರ್ತೆ ಯರು ಇದಕ್ಕಿಂತ ಬಹಳ ಭಿನ್ನವಾಗಿದ್ದಾರೆ. ಅಂತಹ ಕುಟುಂಬದವರಿಗೆ ಸಹಾಯ ಮಾಡುವುದು ದೇವರಿಗೆ ಋಣ ತೀರಿಸಿ ದಂತಾಗಿದ್ದು,ಇಂತಹ ಆಶಾ ಕಾರ್ಯಕರ್ತೆ ಯರಿಗೆ ನೆರವಾಗಲು ಜನಮುಂದೆ ಬರಬೇಕು ಎಂದು ಹೇಳಿದರು. ಬಹಳಷ್ಟು ಜನರ ಬಳಿ ದುಡ್ಡು ಇರುತ್ತದೆ. ಆದರೆ, ಸಹಾಯ ಮಾಡಲುಮುಂದೆ ಬರುವುದಿಲ್ಲ. ಒಮ್ಮೆ ಸಹಾಯಮಾಡಿದರೆ ಅದರಲ್ಲಿ ಸಿಗುವಂತಹ ತೃಪ್ತಿಬೇರ್ಯಾವು ದರಲ್ಲೂ ಸಿಗುವುದಿಲ್ಲ ಎಂದರು. ಕೊರೊನಾದಿಂದ ಲಕ್ಷಾಂತರ ಜನರಬದುಕು ಅತಂತ್ರವಾಗಿದ್ದು, ಇಂತಹಸಮಯದಲ್ಲಿ ಸಣ್ಣ ಸಹಾಯ ಮಾಡಿದರೂಜೀವನ ಪರ್ಯಂತ ನೆನೆಸಿಕೊಳ್ಳುತ್ತಾರೆ ಎಂದರು. ಈ ವೇಳೆ ಬಿಜೆಪಿ ಕಾರ್ಯಕಾರಣಿ ಸದಸ್ಯರಾದ ಸತ್ಯನಾರಾಯಣ ಮಹೇಶ್ ರವರು ಸಹ ಮಾತ ನಾಡಿದರು. ಈ ಕಾರ್ಯಕ್ರಮದಲ್ಲಿ ಬಿಜೆಪಿ ನಗರ ಅಧ್ಯಕ್ಷ ಮಹೇಶ್ ಬೈ ,ಕುರುಬೂರು ರಾಜಣ್ಣ, ದಿಲೀಪ್, ವಾಸುದೇವ, ಅಶ್ವಥ್ ರೆಡ್ಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.