ರೌಡಿ ಶೀಟರ್ ಗಳ ಪರೇಡ್,ಬಾಲ ಬಿಚ್ಚದಂತೆ ಖಡಕ್ ಎಚ್ಚರಿಕೆ.

43

ಬೆಂಗಳೂರು ಗ್ರಾಮಾಂತರ/ ದೊಡ್ಡಬಳ್ಳಾಪುರ; ನಗರದಲ್ಲಿ ಪೊಲೀಸ್ ಉಪ ವಿಭಾಗ ವ್ಯಾಪ್ತಿಯ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್​ ಇಲಾಖೆ ವತಿಯಿಂದ ಬೆಳ್ಳಂಬೆಳಗ್ಗೆ ರೌಡಿಗಳ ಪರೇಡ್ ನಡೆಸಿ ಕಾನೂನು ಬಾಹಿರ ಚಟುವಟಿಕೆ ನಡೆಸದಂತೆ ಖಡಕ್ ಎಚ್ಚರಿಕೆ ನೀಡಲಾಯಿತುಹಲವಾರು ಕ್ರಿಮಿನಲ್‌ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಸೇರಿ ಹೊರ ಬಂದಿದ್ದೀರಿ. ಇನ್ನಾದರೂ ಸಮಾಜಘಾತುಕ ಕೃತ್ಯದಲ್ಲಿ ತೊಡಗದೆ ನಿಮ್ಮ ಜೀವನವನ್ನು ಒಳ್ಳೆಯ ರೀತಿಯಲ್ಲಿ ಸಾಗಿಸಿ. ಮತ್ತೆ ಏನಾದರೂ ಅಪರಾಧ ಪ್ರಕರಣದಲ್ಲಿ ಕಂಡು ಬಂದದ್ದೇ ಆದರೆ ಕೇಸು ದಾಖಲಿಸಲಾಗುವುದು ಮಾತ್ರ ವಲ್ಲ ಗಡಿಪಾರು ಮಾಡಬೇಕಾಗಬಹುದು ಎಂದು ಡಿ.ವೈ ಎಸ್.ಪಿ ಟಿ.ರಂಗಪ್ಪ ಎಚ್ಚರಿಕೆ ನೀಡಿದರುಕಾನೂನು ಸುವ್ಯವಸ್ಥೆ ಕಾಪಾಡುವುದು ಎಲ್ಲರ ಹೊಣೆಯಾಗಿದೆ. ಅಪರಾಧ ಕೃತ್ಯದಲ್ಲಿ ಭಾಗಿಯಾಗಿ ಶಿಕ್ಷೆ ನಂತರ ಉತ್ತಮ ಜೀವನ‌ ನಡೆಸುತ್ತಿರುವ 66 ಮಂದಿ ಯನ್ನು ರೌಡಿ ಶೀಟ್ ನಿಂದ ಕೈ ಬಿಡಲು ಶಿಪಾರಸ್ಸು ಮಾಡಲಾಗಿದೆ ಈ ನಿಟ್ಟಿನಲ್ಲಿ ತಾವು ಸಹ ಉತ್ತಮ ಜೀವನ ರೂಪಿಸಿಕೊಳ್ಳಬೇಕು. ಎಂದರು, ಕೆಲವೆ ದಿನಗಳಲ್ಲಿ ಜಿಲ್ಲಾಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಎದುರಾಗಲಿದ್ದು, ಆ ವೇಳೆ ಏನಾದ್ರೂ ಕಾನೂನು ಸುವ್ಯವಸ್ಥೆಗೆ ಭಂಗತರಲು‌ ಮುಂದಾದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗು ವುದೆಂದರು.ದೊಡ್ಡಬಳ್ಳಾಪುರನಗರ, ಗ್ರಾಮಾಂತರ, ರಾಜಾನುಕುಂಟೆ, ದೊಡ್ಡಬೆಳ ವಂಗಲ, ವಿಶ್ವನಾಥಪುರ, ಹೊಸಹಳ್ಳಿ ಠಾಣೆ, ಚನ್ನರಾಯ ಪಟ್ಟಣ ಹಾಗೂ ವಿಜಯಪುರ ಸೇರಿದಂತೆ ಎಂಟು ಪೊಲೀಸ್ ಠಾಣೆ ವ್ಯಾಪ್ತಿಯ 102 ಮಂದಿ ರೌಡಿ ಶೀಟರ್ ಗಳ ಪರೇಡ್ ನಡೆಸಿ ಎಚ್ಚರಿಕೆ ನೀಡಲಾಯಿತು. ಬೈಟ್: ಟಿ.ರಂಗಪ್ಪ ಡಿವೈಎಸ್ಪಿ ದೊಡ್ಡಬಳ್ಳಾಪುರ