ಅಧ್ಯಕ್ಷೆ,ಸದಸ್ಯನ ವಾಗ್ವಾದ;ಏಕಚನ ಪ್ರಯೋಗದ ಆರೋಪ.!?

113

ನಗರಸಭೆ ಅಧ್ಯಕ್ಷೆ ಮತ್ತು ಸದಸ್ಯನ ವಾಗ್ವಾದ; ಏಕಚನ ಪ್ರಯೋಗದ ಆರೋಪ.

ಚಿಕ್ಕಬಳ್ಳಾಪುರ/ಚಿಂತಾಮಣಿ:ನಗರಸಭೆ ಅಧ್ಯಕ್ಷೆ ರೇಖಾಉಮೇಶ್ ಜತೆ ಸದಸ್ಯ ನಟರಾಜ್ ಏಕಚನ ಪ್ರಯೋಗಿಸಿ ಅಸಭ್ಯವಾಗಿ ಮಾತ ನಾಡಿದ್ದಾರೆ ಎಂದು ಆರೋಪಿಸಲಾಗಿದೆ. ನಗರಸಭೆಯ ಅಧಿಕಾರಿಗಳು ನಾಗರಿಕರ ಸಮಸ್ಯೆ ಗಳಿಗೆ ಸ್ಪಂದಿಸುತ್ತಿಲ್ಲ ಎಂಬ ಆರೋಪ ಗಳನ್ನುಗಂಭೀರವಾಗಿ ತೆಗೆದುಕೊಂಡ ಅಧ್ಯಕ್ಷೆ  ಶುಕ್ರವಾರ ಅಧಿಕಾರಿಗಳನ್ನು ಒಟ್ಟಿಗೆ ಒಂದೇ ಕಡೆ ಕುಳಿತು ಇ.ಖಾತೆಗಳನ್ನು ಮಾಡುವಂತೆ ಖಾತಾ ಆಂದೋಲನ ಆಯೋಜಿಸಿದ್ದರು.1 ರಿಂದ 15 ನೇವಾರ್ಡ್ ವರೆಗೆ ಒಂದು ವಾರ ನಂತರ 16 ರಿಂದ 31 ರವರೆಗೆ ಒಂದುವಾರ ಇ.ಖಾತೆ ಅಗತ್ಯವಿರುವವರಿಗೆ ಸ್ಥಳದಲ್ಲೇ ದಾಖಲೆಗಳನ್ನು ಪಡೆದು ಖಾತೆಗಳನ್ನು ಮಾಡಲು ಸೂಚಿಸಿದ್ದರು. ಪೌರಾಯುಕ್ತರು ಸೇರಿ ಸಂಬಂಧಪಟ್ಟ ಅಧಿಕಾರಿ ಗಳು ಒಟ್ಟಿಗೆ ಕುಳಿತು ಕೆಲಸ ಮಾಡುವುದರಿಂದ ಅವ್ಯವಹಾರಗಳಿಗೆ ಅವಕಾಶವಿಲ್ಲ.ಜೊತೆಗೆ ಶೀಘ್ರವಾಗಿ ಖಾತೆ ಬದಲಾವಣೆ, ಇ ಸ್ವತ್ತು ಖಾತೆ ಮಾಡಿಕೊಡಲು ಅನುಕೂಲವಾಗುತ್ತದೆ ಎಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಎಂದು ಅಧ್ಯಕ್ಷೆ ಶ್ರೀಮತಿ ರೇಖಾಉಮೇಶ್ ತಿಳಿಸಿದರು. ನಗರಸಭೆಯ ಎಲ್ಲ ಸದಸ್ಯರ ಗಮನಕ್ಕೂ ತರಲಾಗಿತ್ತು.ಆಗಮಿಸುವ ನಗರಸಭೆ ಸದಸ್ಯರಿ ಗಾಗಿವಿಶೇಷ ಆಸನ ವ್ಯವಸ್ಥೆಯನ್ನು ಮಾಡ ಲಾಗಿತ್ತು. ಬೆಳಿಗ್ಗೆ ಸದಸ್ಯ ನಟರಾಜ್ ಅಧಿಕಾರಿ ಗಳ ಬಳಿ ಕುಳಿತು ಇದನ್ನು ಮಾಡು, ಅದನ್ನು ಮಾಡು ಎಂದು ಒತ್ತಡ ಹೇರುತ್ತಿದ್ದರು. ಅಧಿಕಾರಿಗಳಿಗೆ ಕೆಲಸ ಮಾಡಲು ಬಿಡಿ. ನಿಮ್ಮ ವಾರ್ಡ್ ಗಳ ಅರ್ಜಿಗಳು ಇದ್ದರೂ ಕೊಡಿ ಮಾಡುತ್ತಾರೆ. ಸದಸ್ಯರು ಅಧಿಕಾರಿಗಳ ಬಳಿಗೆ ತೆರಳಿ ಒತ್ತಡ ಹೇರುವುದರಿಂದ ಕೆಲಸಕ್ಕೆ ತೊಂದರೆ ಯಾಗುತ್ತದೆ ಎಂದು ಅಧ್ಯಕ್ಷೆಯಾಗಿ ಅವರಿಗೆ ಗೌರವಯುತವಾಗಿ ತಿಳಿಸಿದೆ ಎಂದರು. ನೀನ್ಯಾರು ಕೇಳುವುದಕ್ಕೆ ಎಂದು ಏಕ ವಚನ ದಲ್ಲಿ ಕೂಗಾಡಿದರು. ಮಹಿಳೆ ಎಂಬುದನ್ನು ಗಮನಿಸದೆ ಸಾರ್ವಜನಿಕರ ಸಮ್ಮುಖದಲ್ಲೇ ಬಾಯಿಗೆ ಬಂದಂತೆ ಮಾತನಾಡಿದರು. ಅವರ ಮನೆಯಲ್ಲೂ ಮಹಿಳೆಯರು ಇರುವುದಿಲ್ಲವೆ? ನಗರಸಭೆಯಲ್ಲಿ ಅಧ್ಯಕ್ಷೆಯೊಂದಿಗೆ ಈ ರೀತಿ ನಡೆದುಕೊಂಡರೆ ವಾರ್ಡ್ ನಲ್ಲಿ ಮಹಿಳೆಯ ರೊಂದಿಗೆ ಹೇಗೆ ವರ್ತಿಸುತ್ತಾರೆ ಎಂದು ನೊಂದು ನುಡಿದರು.ನಗರದ ನಾಗರಿಕರಿಗೆ ಅನುಕೂಲವಾಗಲಿ ಎಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಾಧ್ಯವಾದರೆ ಸಹಕಾರ ನೀಡಲಿ. ಇಲ್ಲದಿದ್ದರೆ ಸುಮ್ಮನಿರಲಿ, ಅಡಚಣೆ ಉಂಟು ಮಾಡುವುದು ಬೇಡ. ಸದಸ್ಯರು ವಾರ್ಡ್ ಗಳಲ್ಲಿ ಕೆಲಸ ಮಾಡಲಿ. ಅಧಿಕಾರಿಗಳ ಕೆಲಸ ಮಾಡಲು ಫೈಲ್ ಗಳನ್ನು ಹಿಡಿದು ಬರುವುದು ಸರಿಯಲ್ಲ ಎಂದು ಸದಸ್ಯ ಮಹ್ಮದ್ ಶಫೀಕ್ ಅಭಿಪ್ರಾಯಪಟ್ಟರು.