ಪಾರಿವಾಳ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ

10

ಪಾರಿವಾಳ ಹಾರಾಟ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಿದ ಶಾಸಕ ಜೆಕೆ ಕೃಷ್ಣಾರೆಡ್ಡಿ. ಚಿಕ್ಕಬಳ್ಳಾಪುರ/ ಚಿಂತಾಮಣಿ:ಪಾರಿವಾಳ ಹಾರಾಟ ಮಾಡುವ ಸ್ಪರ್ಧೆಯನ್ನು ಎರಡು ತಿಂಗಳ ಕಾಲ ತರಬೇತಿ ನಡೆದಿದ್ದು ಸ್ವತಂತ್ರ ದಿನಾಚರಣೆಯ ಅಂಗವಾಗಿ ಪಾರಿವಾಳವನ್ನು ಸುಮಾರು 9 ಘಂಟೆಗಳ ಕಾಲ ಹಾರಾಟ ಮಾಡಿ ದಾಖಲೆ ಪಡೆದ ಕಾರಣ ಕ್ಷೇತ್ರದ ಶಾಸಕರದ ಜೆ ಕೆ ಕೃಷ್ಣಾ ರೆಡ್ಡಿ ರವರು ಅವರಿಗೆ ಬಹುಮಾನ ನೀಡಿ ಸನ್ಮಾನಿಸಲಾಯಿತು. ಈ ವೇಳೆ ಮಾತನಾಡಿದ ಶಾಸಕ ಜೆಕೆ ಕೃಷ್ಣಾ ರೆಡ್ಡಿ ರವರು ಈ ಕಾಲದಲ್ಲಿ ಹೇಳಿದ ಮಾತು ಯಾರೂ ಕೇಳುವುದಿಲ್ಲ ಪಾರಿವಾಳಗಳನ್ನು ತರಬೇತಿ ನೀಡಿ ಆಕಾಶದಲ್ಲಿ ಹಾರಾಟ ತರಬೇತಿ ನೀಡುತ್ತಿರುವುದು ನಾನು ಮೊದಲು ಕೇಳುತ್ತಿದ್ದೇನೆ ಇಂತಹ ಸ್ಪರ್ಧೆಗಳಲ್ಲಿ ಮುಂದಿನ ದಿನಗಳಲ್ಲಿ ಎಲ್ಲರೂ ಭಾಗವಹಿಸಿ ರಾಜ್ಯಮಟ್ಟ ದಲ್ಲಿ ಬರಬೇಕು ಎಂದು ಹೇಳಿದರು. ನಗರದ ಶಾಂತಿನಗರದಲ್ಲಿ ಎರಡು ತಿಂಗಳಿನಿಂದ ಗಿರೇಬಾಜ್ ಪಾರಿವಾಳ ಹಾರಾಟ ಸ್ಪರ್ಧೆ ಯನ್ನು ವ್ಯವಸ್ಥಾಪಕರಾದ ಮತ್ತು ತೀರ್ಪುಗಾರ ರಾದ ಜಹೇರ್, ಅಯೂಬ್, ಅರುಣ್ ಇವರ ಸಮ್ಮುಖದಲ್ಲಿ ಹಮ್ಮಿಕೊಳ್ಳಲಾಗಿತ್ತು. ಪಾರಿವಾಳ ಹಾರಾಟ ಸ್ಪರ್ಧೆಯಲ್ಲಿ ಹದಿನಾಲ್ಕು ಮಂದಿ ಭಾಗವಹಿಸಿದ್ದು. ಇದರಲ್ಲಿ ಪ್ರಥಮ ಸ್ಥಾನ ರಘುನಾಥ್ ಸಿಂಗ್ ಇವರ ಪಾರಿವಾಳ 9 ಘಂಟೆ ಹಾರಾಟ ಮಾಡಿದೆ, ದ್ವಿತೀಯ ಸ್ಥಾನ ಅಫ್ರೋಜ್ ಖಾನ್ ಅಲಿಯಾಸ್ ಬಟ್ಟು ಅವರ ಪಾರಿವಾಳ 6 ಘಂಟೆ ಹಾರಾಟ ಮಾಡಿದೆ , ಮೂರನೇ ಸ್ಥಾನ ಅರುಣ್ ಅವರ ಪಾರಿವಾಳ 4 ಘಂಟೆ ಮತ್ತು ನಾಲ್ಕನೆಯ ಸ್ಥಾನವನ್ನು ವಸೀಂ ಅವರ ಪಾರಿವಾಳ 3 ಘಂಟೆಗಳ ಕಾಲ ಆಕಾಶದಲ್ಲಿ ಹಾರಾಟ ಮಾಡಿ ಕೆಳಗೆ ಬಂದ ಪಾರಿವಾಳದ ಮಾಲಿಕರಿಗೆ ವಿಜೇತರಿಗೆ ಬಹುಮಾನವನ್ನು ವಿತರಿಸಿದರು. ಇನ್ನೂ ಕೆಲ ಮಂದಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಸಲೀಂ ಪಾಷಾ ಅಲಿಯಾಸ್ ಅಲ್ಲು, ಮುರಳಿ, ಕೃಷ್ಣಮೂರ್ತಿ, ಸೇರಿದಂತೆ ಭಾನುಪ್ರಕಾಶ್ ವೆಂಕಟೇಶಪ್ಪ ಉಪಸ್ಥಿತಿ ಇದ್ದರು.