ಸರಳವಾಗಿ 75 ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆ

7

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ 75 ನೇ ಸ್ವಾತಂತ್ರ್ಯ ದಿನಾಚರಣೆ ಸರಳವಾಗಿ ಆಚರಣೆ. ಚಿಕ್ಕಬಳ್ಳಾಪುರ / ಚಿಂತಾಮಣಿ : ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದಿದೆ ಆದರೂ ಸಮಾಜ ದಲ್ಲಿ ಇರುವ ಅಸ್ಪೃಶ್ಯತೆ , ಭ್ರಷ್ಟಾಚಾರ ದೇಶದ ಸರ್ವತೋಮುಖ ಅಭಿವೃದ್ಧಿಗೆ ಅಡ್ಡಿಯಾಗಿದೆ ಎಂದು ಕ್ಷೇತ್ರದ ಶಾಸಕರಾದ ಜೆ.ಕೆ ಕೃಷ್ಣಾ ರೆಡ್ಡಿ ಅಭಿಪ್ರಾಯಪಟ್ಟರು . ನಗರದ ಝಾನ್ಸಿ ರಾಣಿ ಕ್ರೀಡಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ 75 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಅವರು ಮಾತನಾಡಿದರು ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬರಬೇಕಾದರೆ ಅನೇಕ ನಾಯಕರು ತ್ಯಾಗ ಬಲಿದಾನವನ್ನು ಮಾಡಿದ್ದಾರೆ ನಾಯಕ ಮಹಾನ್ ನಾಯಕರ ತ್ಯಾಗ , ಬಲಿದಾನ ವನ್ನು ಮಾಡಿದ್ದಾರೆ.ಅಂತಹ ಮಹಾನ್ ನಾಯಕರನ್ನು ನಾವು ಇಂದು ನೆನೆಯಬೇಕಾಗಿದೆ . ಅವರ ತತ್ವಸಿದ್ಧಾಂತ ಆದರ್ಶಗಳನ್ನು ಮೈಗೂಡಿಸಿ ಕೊಂಡು ಅಸಮಾನತೆ ಹಸಿವು ಬಡತನವನ್ನು ಹೋಗಲಾಡಿಸಿ ಪ್ರತಿಯೊಬ್ಬರು ಸಮಾನತೆಯಿಂದ ಕೂಡಿದ ಬಾಳಿದಾಗ ಸಮಾಜ ಕಾಣಲು ಸಾಧ್ಯ ಎಂದರು . ಮಹಿಳೆಯರ ರಕ್ಷಣೆಗೆ ಸರ್ಕಾರಗಳು ಸೂಕ್ತ ಕಾನೂನು ರಚನೆ ಮಾಡಬೇಕು. ಮಹಿಳೆಯರ ಮೇಲೆ ಬಹಳಷ್ಟು ದೌರ್ಜನ್ಯ ಗಳು ನಡೆಯುತ್ತಿದ್ದು ಮಹಿಳೆಯರ ದೌರ್ಜನ್ಯ ಗಳನ್ನು ತಡೆಯಲು ಕಠಿಣ ಕ್ರಮಗಳನ್ನು ಜಾರಿ ಮಾಡಬೇಕು ಎಂದು ನಗರಸಭೆ ಅಧ್ಯಕ್ಷೆ ರೇಖಾ ಅಭಿಪ್ರಾಯಪಟ್ಟರು. ಕೊರೊನಾ ಸಂಕಷ್ಟದಿಂದ ಶಾಲಾ‌ಕಾಲೇಜುಗಳು ಇಲ್ಲದೆ ಮಕ್ಕಳಿಗೆ ರಾಷ್ಟ್ರಿಯ ಹಬ್ಬಗಳ ಬಗ್ಗೆ ಅರಿವು ಇಲ್ಲದಂತಾಗಿದೆ ಆದರಿಂದ ಆದಷ್ಟು ಬೇಗ ಕೊರೊನಾವನ್ನು ತೊಳಗಿಸಿ ಸಹಜ ಸ್ಥಿಯಲ್ಲಿ‌ ಈ ಹಿಂದೆ ರಾಷ್ಟ್ರಿಯ ಹಬ್ಬಗಳ ಆಚರಣೆಯಂತೆ ಮುಂದೆ ಆಚರಿಸುವಂತಾಗಬೇಕು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಕೋವಿಡ್ ನಿಂದ ಗೆದ್ದ ಬಂದವರ ಮೂರು ಹಿರಿಯ ನಾಗರಿಕರಿಗೆ, ಕೋವಿಡ್ ನಿಂದ ಮೃತಪಟ್ಟ ಅವರಿಗೆ ಅಂತ್ಯಸಂಸ್ಕಾರ ಮಾಡಿದ ಪಿಎಫ್ಐ ಸಂಘಟನೆಯ ಅಧ್ಯಕ್ಷರಾದ ಅನ್ಸರ್ ಪಾಷ, ಪಂಡಿತ್ ದೀನ್ ದಯಾಳ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಮಂಜುನಾಥ್ , ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಒಬ್ಬ ಟಾಪರ್ ವಿದ್ಯಾರ್ಥಿಗೆ ಹಾಗೂ ರಾಜ್ಯ ಪ್ರಶಸ್ತಿ ಹೊಂದಿರುವ ಐದು ರೈತರನ್ನು ಮತ್ತು ವಯೋ ವೃತ್ತಿ ಹೋಂದಿರುವ ಚಂದ್ರಶೇಖರ ಇವರಿಗೆ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪ್ರಶಂಸನಾ ಪತ್ರ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತರು, ಕಾರ್ಯನಿರ್ವಹಣಾಧಿಕಾರಿ, ತಾಲೂಕು ವೈದ್ಯಾಧಿಕಾರಿ ಪೊಲೀಸ್ ಇಲಾಖೆ, ತಾಲೂಕಿನ ತಹಸೀಲ್ದಾರ್‌ , ಕ್ಷೇತ್ರ ಶಿಕ್ಷಣಾಧಿಕಾರಿ, ಶಿಕ್ಷಕರು , ಅಂಗನವಾಡಿ ಶಿಕ್ಷಕಿ, ನಗರಸಭೆ ಸದಸ್ಯರು ಸೇರಿದಂತೆ ಹಲವಾರು ಅಧಿಕಾರಿಗಳು ಉಪಸ್ಥಿತಿ ಇದ್ದರು .