ಗೃಹರಕ್ಷಕ ದಳದ ಸೇವೆ ಶ್ಲಾಘನೀಯ: ಡಿವೈಎಸ್ಪಿ.ಲಕ್ಷ್ಮಯ್ಯ

11

ಚಿಕ್ಕಬಳ್ಳಾಪುರ/ ಚಿಂತಾಮಣಿ:ಕೊರೋನಾ ಸಂದರ್ಭದಲ್ಲಿ ತಮ್ಮ ಪ್ರಾಣ ಅಡವಿಟ್ಟು ಆಸ್ಪತ್ರೆ ಮತ್ತು ಜನರ ಮಧ್ಯೆ ಸೇವೆಸಲ್ಲಿಸಿದ ಚಿಂತಾ ಮಣಿ ಘಟಕದ ಗೃಹರಕ್ಷಕದಳದ ಅವರಿಗೆ ಡಿವೈಎಸ್ಪಿ ಲಕ್ಷ್ಮಯ್ಯ ಅವರು ತಮ್ಮ ಸೇವೆಯಲ್ಲಿ ಉತ್ತಮ ಕೆಲಸ ನಿರ್ವಹಿಸಿದ್ದಾರೆ ಎಂದು ಶ್ಲಾಘಿಸಿದರು. ಚಿಂತಾಮಣಿ ತಾಲೂಕು ಅಲ್ಲದೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಗೃಹರಕ್ಷಕದಳದ ಘಟಕದ ಅಧಿಕಾರಿಗಳು ಮತ್ತು ಸಿಬ್ಬಂದಿ ಅವರು ಹೆಸರು ಪಡೆದುಕೊಂಡಿದ್ದು ನಿಮಗೆ ಜಿಲ್ಲಾ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಮತ್ತು ಪೊಲೀಸ್ ಇಲಾಖೆಯಿಂದ ಅಭಿನಂದನೆ ಸಲ್ಲಿಸಿದರು. ಕವಿತ ಮತ್ತು ಸಂತೇಕಲ್ಲಹಳ್ಳಿಯ ಸಮಾಜ ಸೇವಕ ಕೆ.ಆರ್ ಚಂದ್ರಶೇಖರ್ ದಂಪತಿಯಿಂದ ಇಂದು ಗೃಹರಕ್ಷಕದಳದ ಘಟಕದವರಿಗೆ ಬ್ಯಾಗ್ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಸಮಾಜಸೇವಕ ಕೆ.ಆರ್ ಚಂದ್ರಶೇಖರ್ ರವರು ಪ್ರತಿವರ್ಷ ತರಹ ಈ ವರ್ಷವೂ ತಾಲೂಕುದ್ಯಂತ ಪೊಲೀಸರಿಗೆ, ಗೃಹರಕ್ಷಕದಳ, ಅಗ್ನಿಶಾಮಕದಳ, ಜೈಲಿನಲ್ಲಿ ಇರುವ ಸಿಬ್ಬಂದಿಗೆ ನಮ್ಮ ಕೈಯಲ್ಲಾದಷ್ಟು ಕಿರು ಕಾಣಿಕೆ ನೀಡುತ್ತಿದ್ದೇನೆ, ಎರಡು ವರ್ಷಗಳಿಂದ ಕೊರೋನಾ ಸಂದರ್ಭದಲ್ಲಿ ಜನರ ಮಧ್ಯೆ ಇದ್ದು ತಮ್ಮ ಪ್ರಾಣವನ್ನು ಅಡವಿಟ್ಟು ಮತ್ತು ತಮ್ಮ ಹೆಂಡತಿ ಮಕ್ಕಳನ್ನು ಸಹಾ ಬಿಟ್ಟು ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ ಈ ಸೇವೆಗೆ ಶ್ಲಾಘನೀಯ ಮಾಡುತ್ತಿದ್ದನೆ. ಕೊರೋನಾ ಬಂದು ಪೇಷಂಟ್ ಗಳು ಓಡೋಗಿ ತಿದ್ದುತ್ತಿದ್ದರು 24 ಗಂಟೆ ಕೊರೋನಾ ಜೊತೆಯಲ್ಲಿ ಹೋರಾಟ ಮಾಡಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಪೇಷಂಟ್ ಗಳನ್ನು ರಕ್ಷಿಸಿ ಅವರ ಜೊತೆ ಕಷ್ಟ-ಸುಖಗಳನ್ನು ಹಂಚಿಕೊಂಡು ಕೊರೋನಾ ಬಂದಿರುವುದನ್ನು ತಡೆಗಟ್ಟಲು ತಮ್ಮ ಸಹಕಾರ ಅಗತ್ಯವಿದೆ ಹಾಗೂ ಕೊರೋನಾ ಓಡಿಸಲು ಪೇಷಂಟ್ ಗಳಿಗೆ ಧೈರ್ಯ ತುಂಬಿ ಒಳ್ಳೆಯ ಕೆಲಸ ನಿರ್ವಹಿಸಿದ್ದಾರೆ ಎಂದರು. ಇದೇ ವೇಳೆ ಮಾತನಾಡಿದ ಸಮಾಜಸೇವಕ ಚಿಂತಾಮಣಿ ವೇಣುಗೋಪಾಲ್ ಅವರು ಮಹಾಮಾರಿ ಎರಡನೇ ಅಲೆ ಹೋಗಿ ಮೂರನೇ ಅಲೆ ಸೃಷ್ಟಿಯಾಗುತ್ತಿದೆ ಸೃಷ್ಟಿಯಾಗುವುದರಿಂದ ಯಾವ ಯಾವ ರೀತಿ ಅನಾಹುತಗಳ ಆಗುತ್ತದೆ,ತಮ್ಮ ಜೀವ ಅಂಗ ತೊರೆದು 24ಗಂಟೆಯೂ ರಸ್ತೆಯಲ್ಲಿ ನಿಂತು ಕೆಲಸ ನಿರ್ವಹಿಸುತ್ತಿರುವ ಗೃಹರಕ್ಷಕದಳ ಮತ್ತು ಪೊಲೀಸ್ ಇಲಾಖೆಗೆ ಅಭಿನಂದನೆಗಳು ಎಂದು ಸಲ್ಲಿಸಿದರು. ನಂತರ ಸಂತೇಕಲ್ಲಹಳ್ಳಿ ಧರ್ಮಪತ್ನಿರಾಧ, ಕವಿತಾ ಚಂದ್ರಶೇಖರ್ ರವರು ಬ್ಯಾಗ್ ಮತ್ತು ಚಿಂತಾಮಣಿ ವೇಣುಗೋಪಾಲ್ ಅಲಿಯಾಸ್ ಗೋಪಿ ಅವರು ಗೃಹರಕ್ಷಕ ದಳದ ಅಧಿಕಾರಿ ಗಳಿಗೆ ಮತ್ತು ಸಿಬ್ಬಂದಿಗೆ ಆಹಾರ ವಿತರಣೆ ಮಾಡಿದರು . ಈ ಸಂದರ್ಭದಲ್ಲಿ ಚಿಂತಾಮಣಿ ಗೃಹರಕ್ಷಕ ದಳ ಘಟಕದ ಅಧಿಕಾರಿ ಅಶ್ವತಪ್ಪ,ಎನ್.ಹೆಚ್ ನಾರಾಯಣಸ್ವಾಮಿ,ಎಲ್.ಆಂಜನಪ್ಪ, ಶ್ರೀನಿವಾಸ್ ಹಾಗೂ ಎಲ್ಲಾ ಸಿಬ್ಬಂದಿ ವರ್ಗ, ಮತ್ತು ರಾಜಶೇಖರ್ ರೆಡ್ಡಿ, ಸಂತೇಕಲ್ಲಹಳ್ಳಿ ಮಹೇಶ್, ನಿವೃತ್ತ ರಕ್ಷಕದಳದ ನರಸಿಂಹ ಸೇರಿ ದಂತೆ ಮತ್ತಿತರರು ಉಪಸ್ಥಿತರಿದ್ದರು.