ಗ್ರಾಮ ಪಂಚಾಯತಿ ನೂತನ ಕಟ್ಟಡ ಗುದ್ದಲಿ ಪೂಜೆ.

11

ಒಂದು ಕೋಟಿ ವೆಚ್ಚದಲ್ಲಿ ಕೈವಾರ ಗ್ರಾಮ ಪಂಚಾಯತಿ ನೂತನ ಕಟ್ಟಡ ಗುದ್ದಲಿ ಪೂಜೆ.

ಚಿಕ್ಕಬಳ್ಳಾಪುರ/ ಚಿಂತಾಮಣಿ :-ತಾಲ್ಲೂಕಿನ ಕೈವಾರ ಗ್ರಾಮದಲ್ಲಿ ಸುಮಾರು ಒಂದು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನೂತನ ಗ್ರಾಮ ಪಂಚಾಯಿತಿ ಕಟ್ಟಡದ ಗುದ್ದಲಿ ಪೂಜೆ ಕಾರ್ಯಕ್ರಮವನ್ನು ಶುಕ್ರವಾರ ದಿನದಂದು ಹಮ್ಮಿಕೊಳ್ಳಲಾಗಿತ್ತು . ಗುದ್ದಲಿ ಪೂಜೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಕೆ ಎಂ ಮಂಜುನಾಥ್ ಸೇರಿದಂತೆ ಎಲ್ಲಾ ಸದಸ್ಯರು ನೆರವೇರಿಸಿದರು. ನಂತರ ಮಾತನಾಡಿದ ಕೆ ಎಂ ಮಂಜುನಾಥ್ ಕಳೆದ ಕೆಲ ದಿನಗಳ ಹಿಂದೆ ಗ್ರಾಮ ಪಂಚಾಯ್ತಿಯ ಎಲ್ಲಾ ಸದಸ್ಯರು ಸಿಬ್ಬಂದಿ ಒಟ್ಟು ಗೂಡಿ ಸಾಮಾನ್ಯ ಸಭೆಯನ್ನು ಏರ್ಪಡಿಸಿ ಅದರಲ್ಲಿ ನೂತನ ಗ್ರಾಮ ಪಂಚಾಯಿತಿ ಕಟ್ಟಡದ ಗುದ್ದಲಿ ಪೂಜೆಯನ್ನು ಮಾಡಬೇಕೆಂದು ನಿರ್ಣಯ ತೆಗೆದುಕೊಂಡಿದ್ದು ಅದರಂತೆ ಇಂದು ನಾಗ ಪಂಚಮಿ ಒಳ್ಳೆಯ ದಿನವೆಂದು ಸರಳವಾಗಿ ಗುದ್ದಲಿ ಪೂಜೆ ಕಾರ್ಯಕ್ರಮವನ್ನು ನೆರವೇರಿಸಿದ್ದೇವೆ ಕಟ್ಟಡ ಕಾಮಗಾರಿ ಪೂರ್ಣ ಗೊಂಡ ನಂತರ ಸ್ಥಳೀಯ ಶಾಸಕರನ್ನು ಹಾಗೂ ಲೋಕಸಭಾ ಸದಸ್ಯರನ್ನು ಆಹ್ವಾನಿಸಿ ಗ್ರಾಮ ಪಂಚಾಯ್ತಿ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮವನ್ನು ಅದ್ಧೂರಿ ಯಾಗಿ ಹಮ್ಮಿಕೊಳ್ಳುತ್ತೇವೆ ಎಂದ ಅವರು ಸ್ಥಳೀಯ ಶಾಸಕರು ಗ್ರಾಮ ಪಂಚಾಯ್ತಿ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡುವ ಭರವಸೆ ಕೂಡ ನೀಡಿದ್ದಾರೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ವಿ ಉಮಾದೇವಿ,ಗ್ರಾಮ ಪಂಚಾಯತಿ ಸದಸ್ಯರಾದ ನಾರಾಯಣಪ್ಪ, ಎನ್ ಮಂಜುನಾಥ ರೆಡ್ಡಿ ,ಎಸ್ ಶಾರದಾ’ ಕೆ ಎನ್ ಬಾಬು,ಆರ್ ಅಂಬರೀಶ್, ನಾಗರಾಜು, ಶೇಖ್ ಮೌಲಾ’ ಆರ್ ವಿಜಯಲಕ್ಷ್ಮಿ ,ನೂರೈನ್ ಉಮ್ರಾಜಾ,ಯಾಸ್ಮಿನ್ ತಾಜ್,ಪಿ ಚಂದ್ರಪ್ಪ, ಪದ್ಮಾವತಮ್ಮ,ಎಸ್ ಸುಧಾರಾಣಿ,ಕೆಬಿ ಹೇಮಾ ವತಿ,ಎಂ ಭಾಗ್ಯಲಕ್ಷ್ಮಿ,ಟಿ ಪ್ರದೀಪ್,ಪಿಡಿಓಎಂಕೆ ಕರಿಬಸಪ್ಪ,ಕಾರ್ಯದರ್ಶಿ ಎಂ.ಕೃಷ್ಣಪ್ಪ, ಮುಖಂಡ ರಾದ ರಿಯಾಜ್ ಪಾಷಾ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.