ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ.

11

ಸಂಘಟನೆ ಬಲಪಡಿಸಲು ಪದಾಧಿಕಾರಿಗಳ ಆಯ್ಕೆ ಮುಖ್ಯ. ಚಿಕ್ಕಬಳ್ಳಾಪುರ/ಚಿಂತಾಮಣಿ:ಕನ್ನಡ ಪರ ಸಂಘಟನೆಗಳನ್ನು ಸ್ವಾರ್ಥಕಾಗಿ ಕಟ್ಟಿಕೊಳ್ಳದೇ, ಕನ್ನಡ ನಾಡು ನುಡಿ, ಭಾಷೆಯನ್ನು ಉಳಿಸಿ ಬೆಳೆಸಿಕೊಳ್ಳಲು ಕನ್ನಡ ಪರ ಸಂಘಟನೆಗಳನ್ನು ಕಟ್ಟಿ ಕನ್ನಡ ನಾಡು ನುಡಿ ಭಾಷೆ, ಸಂಸ್ಕೃತಿ ಪರಂಪರೆಯ ಉಳಿವಿ ಗಾಗಿ ದುಡಿಯಬೇಕೆಂದು ಚಿಂತಾಮಣಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣರವರು ಜೈ ಕರ್ನಾಟಕ ಸಂಘಟನೆಯ ನೂತನ ಪದಾದಿಕಾರಿಗಳಿಗೆ ಕರೆ ನೀಡಿದರು. ಚಿಂತಾಮಣಿ ನಗರದ ಪ್ರವಾಸಿ ಮಂದಿರದಲ್ಲಿ ಚಿಂತಾಮಣಿ ತಾಲೂಕು ಜಯ ಕರ್ನಾಟಕ ಸಂಘಟನೆಗೆ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮ ದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ರವರು ಭಾಗವಹಿಸಿ 1980 ರ ದಶಕದಲ್ಲಿ ಮೊಟ್ಟಮೊದಲಬಾರಿಗೆ ಚಿಂತಾಮಣಿ ನಗರದ ತಾಲೂಕು ಕಛೇರಿ ವೃತ್ತದಲ್ಲಿ ಕನ್ನಡದ ದ್ಜಜ ಸ್ಥಂಭವನ್ನು ಸ್ಥಾಪಿಸಿ ಕನ್ನಡದ ಬಾವುಟವನ್ನು ದ್ಜಜಾರೋಹಣ ಮಾಡಲಾಯಿತು, ಆದರೆ ಇತ್ತಿಚಿಗೆ ಸ್ವಾಥಕ್ಕಾಗಿ ಗಲ್ಲಿಗೊಂದು, ಬೀದಿಗೊಂದು ಕನ್ನಡ ಪರ ಸಂಘಟನೆಗಳು ಹುಟ್ಟಿಕೊಂಡು ತಮ್ಮ ಸ್ವಾರ್ಥಕ್ಕಾಗಿ ಸಂಘಟನೆಗಳನ್ನು ಬಳಕೆ ಮಾಡಿಕೊಳ್ಳುತ್ತಿ ರುವುದು ಬೇಸರದ ಸಂಗತಿ ಎಂದ ಅವರು ಜೈ ಕರ್ನಾಟಕ ಸಂಘಟನೆಗೆ ನೂತನವಾಗಿ ಆಯ್ಕೆಯಾಗಿರುವ ಪದಾಧಿಕಾರಿ ಗಳು ಕನ್ನಡ ನಾಡು ನುಡಿ, ಭಾಷೆ ಹಾಗೂ ಸಂಸ್ಕೃತಿಯ ಪರಂಪರೆಗೆ ದಕ್ಕೆ ಬಂದಾಗ ಹೋರಾಟ ಗಳನ್ನು ಮಾಡಲು ಮುಂದಾಗ ಬೇಕೆಂದರು. ಇನ್ನೂ ಇದೇ ಸಂದರ್ಭದಲ್ಲಿ ಪತ್ರಕರ್ತರು ಸೇರಿ ದಂತೆ ಕನ್ನಡ ನಾಡು ನುಡಿ ಭಾಷೆಯ ರಕ್ಷಣೆಗಾಗಿ ದುಡಿದಂತಹ ಹಲವರನ್ನು ಸಂಘಟನೆ ಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಶ್ರೀನಿವಾಸ್, ಜಿಲ್ಲಾ ಕಾರ್ಯದರ್ಶಿ ಕೃಷ್ಣಾರೆಡ್ಡಿ, ಜಿಲ್ಲಾಉಪಾಧ್ಯಕ್ಷ ತಿನಕಲ್ಲು ವೆಂಕಟೇಶ್, ತಾಲೂಕು ಅಧ್ಯಕ್ಷ ಮಹೇಶ್ ಬಾಬು,ತಾ. ಕಾರ್ಯಾಧ್ಯಕ್ಷ ಸತ್ಯನಾರಾಯಣಸಿಂಗ್, ಉಪಾಧ್ಯಕ್ಷ ಮುನಿರೆಡ್ಡಿ,ಆಕ್ರಮ್,ಚರಣ್ ಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಪಾರ್ವತಮ್ಮ,ಮಾದ್ಯಮ ಘಟಕದ ಅಧ್ಯಕ್ಷ ನಾಗರಾಜ್, ಬುರುಡಗುಂಟೆ ಈಶ್ವರರೆಡ್ದಿ,ಊಲ ವಾಡಿ ರೆಡ್ಡಿ,