ದೇಶಭಕ್ತರ ಬಲಿದಾನದ ಫಲವೇ ಸ್ವಾತಂತ್ರ

13

ದೇಶಭಕ್ತರ ಬಲಿದಾನದ ಫಲವೇ ಸ್ವಾತಂತ್ರ: ಸಮಾಜಸೇವಕ ಚಂದ್ರಶೇಖರ್ ಚಿಕ್ಕಬಳ್ಳಾಪುರ/ ಚಿಂತಾಮಣಿ :ಸ್ವಾತಂತ್ರ ಸುಖದ ಸುಪ್ಪತ್ತಿಗೆಯಲ್ಲ ಬದಲಾಗಿ ಸಾವಿರಾರು ದೇಶಭಕ್ತರ ಫಲವಾಗಿದೆ ಎಂದು ಸಮಾಜ ಸೇವಕ ಸಂತೇಕಲ್ಲಹಳ್ಳಿ ಚಂದ್ರಶೇಖರ್ ರವರು ತಿಳಿಸಿದರು. ನಗರದ ಉಪ ಕಾರಾಗೃಹದಲ್ಲಿ 75 ನೇ ಸ್ವಾತಂತ್ರ ದಿನಾಚರಣೆ ಸಮಾರಂಭವನ್ನು ಆಯೋಜಿಸಲಾಗಿದ್ದು ಧ್ವಜಾರೋಹಣವನ್ನು ನೆರವೇರಿಸಿದ ನಂತರ ಮಾತನಾಡಿದ ಅವರು ವ್ಯಾಪಾರಕ್ಕೆಂದು ಬಂದ ಬ್ರಿಟಿಷರು ನಮ್ಮಲ್ಲಿರುವ ಬಡಕುಗಳನ್ನು ಉಪಯೋಗಿಸಿಕೊಂಡು ಇನ್ನೂರು ವರ್ಷಗಳ ಕಾಲ ಆಳಿದ್ದು ಮತ್ತೆ ಭಾರತಕ್ಕೆ ಸ್ವತಂತ್ರ ಬರಲು ಎಲ್ಲಾ ವರ್ಗದವರು ಹೋರಾಟ ಮಾಡಿ ಬಲಿದಾನ ಮಾಡಿದ ಪ್ರತಿಫಲ ನಮಗೆ ಸ್ವಾತಂತ್ರ ಸಿಕ್ಕಿದೆ ಎಂದರು. ಕಾರಾಗೃಹದಲ್ಲಿ ಇದರುವ ಅಪರಾಧಿಗಳು ನಿರಪರಾಧಿಯಾಗಿ ಮುಂದಿನ ದಿನಗಳಲ್ಲಿ ಯಾವುದೇ ಅಪರಾಧಗಳನ್ನು ಮಾಡದೆ ತಮ್ಮ ಹೆಂಡತಿ ಮಕ್ಕಳ ಜೊತೆ ಸುಖ ಸಂಸಾರ ಮಾಡಿ ಎಂದು ಸಮಾಜ ಸೇವಕ ಚಂದ್ರಶೇಖರ್ ಅವರು ಕಿವಿಮಾತು ಹೇಳಿದರು. ಕೋವಿಡ-19 ನಿಂದಾಗಿ ದೇಶ ಇಂದು ಅಪಾಯದಲ್ಲಿದ್ದು ಎಲ್ಲರೂ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವದರಿಂದ ಮಾತ್ರ ಕೋವಿಡ ಸರಪಳಿಯನ್ನು ಮುರಿಯಲು ಸಾಧ್ಯವೆಂದರು. ಪ್ರತಿವರ್ಷದಂತೆ ಈ ವರ್ಷವೂ ಸ್ವತಂತ್ರ ದಿನಾಚರಣೆಯ ಅಂಗವಾಗಿ ಸಮಾಜಸೇವಕರಾದ ಕವಿತಾ ಚಂದ್ರಶೇಖರ್ ದಂಪತಿಗಳಿಂದ ಉಪ ಕಾರಾಗೃಹದ ಸಿಬ್ಬಂದಿಗೆ ಬ್ಯಾಗ್ ಮತ್ತು ಮಹಿಳಾ ಅಪರಾಧಿಗಳಿಗೆ ಸೀರೆಗಳನ್ನು ವಿತರಣೆ ಮಾಡಿದರು. ಕಾರ್ಯಕ್ರಮದಲ್ಲಿ ಕಾರಾಗೃಹದ ಜೈಲರ್ ಸೋಮ್ ಸಿಂಗ್ ಲಂಬಾಣಿ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.