ಸಿಬ್ಬಂದಿಗೆ ಗೌರವಧನ ನೀಡಿದ ಶಾಸಕರು

87

ಚಿಕ್ಕಬಳ್ಳಾಪುರ/ಚಿಂತಾಮಣಿ:ನಗರದ ಸರ್ಕಾರಿ ಆಸ್ಪತ್ರೆಯಲ್ಲಿ  ಕೋವಿಡ್ ಸಂದರ್ಭದಲ್ಲಿ ಸ್ವಯಂ ಪ್ರೇರಣೆಯಿಂದ ಕೆಲಸ ನಿರ್ವಹಿದ್ದು ಸಿಬ್ಬಂದಿಗೆ 3 ನೇ ತಿಂಗಳ ಗೌರವದನ 1.8ಲಕ್ಷ ರೂ ಸ್ವಂತ ಹಣವನ್ನು ವಿತರಣೆ ಮಾಡಿದರು. ಕೋವಿಡ್ ಸೋಂಕಿತರ ಹತ್ತಿರ ಸುಳಿಯಲು ಹಾಗೂ ಮುಟ್ಟಲು ಭಯಪಡುತ್ತಿದ್ದ ಸಂದರ್ಭ ದಲ್ಲಿ ತಮ್ಮ ಪ್ರಾಣವನ್ನು ಪಣಕ್ಕೆ ಇಟ್ಟು ಸ್ವಯಂಪ್ರೇರೆಯಿಂದ ಕೆಲಸ ನಿರ್ವಹಿಸಿದ್ದ ವೈದ್ಯರು ಹಾಗೂ ಸಿಬ್ಬಂದಿಯ ಸೇವೆ ವರ್ಣಿ ಸಲು ಸಾಧ್ಯವಿಲ್ಲ. ಖಾಯಂ ನೌಕರರ ಜತೆಗೆ ಸ್ವಯಂ ಪ್ರೇರಣೆಯಿಂದ ಕೆಲಸ ನಿರ್ವಹಿಸಿ ರುವುದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ.ಅವರಿಗೆ ಗೌರವ ಸೂಚಿಸುವ ಸಲುವಾಗಿ ಗೌರವದನ ವನ್ನು ನೀಡುತ್ತಿರುವುದಾಗಿ ತಿಳಿಸಿದರು. ಇಡೀ ವಿಶ್ವವನ್ನೇ ಕಾಡಿದ ಸೋಂಕನ್ನು ನಿಯಂತ್ರಿ ಸಲು ಹಾಗೂ ವೈದ್ಯರ ಮತ್ತು ಸಿಬ್ಬಂದಿಯ ಕೊರತೆಯ ಸಮಯದಲ್ಲಿ 3 ತಿಂಗಳವರೆಗೆ ಸ್ವಯಂಪ್ರೇರಣೆಯಿಂದ ಬಂದವರನ್ನು ನೇಮಕ ಮಾಡಿಕೊಳ್ಳಲಾಗಿತ್ತು. 3 ತಿಂಗಳು ಸ್ವಂತ ಹಣ ದಿಂದ ಗೌರವದನವನ್ನು ನೀಡುವುದಾಗಿ ಭರವಸೆ ನೀಡಿದ್ದೆ.ಅದರಂತೆ ಮೂರನೇ ತಿಂಗಳ ವೇತನವನ್ನು ನೀಡಲಾಗಿದೆ. ಕೊರೊನಾ ಸೋಂಕು ಕಡಿಮೆಯಾಗಿದೆ ಎಂದು ಜನರು ಮೈಮರೆಯಬಾರದು. ಯಾವುದೇ ಹಿಂಜರಿಕೆ ಇಲ್ಲದೆ ಲಸಿಕೆಯನ್ನು ಪಡೆದುಕೊಳ್ಳ ಬೇಕು. ಲಸಿಕೆ ಪಡೆದವರು ಸಹ ಮಾಸ್ಕ್ ಧರಿ ಸುವುದು,ಸ್ಯಾನಿಟೈಸರ್ ಬಳಸುವುದು, ದೈಹಿಕ ಅಂತರ ಕಾಪಾಡುವುದನ್ನು ಕಡ್ಡಾಯವಾಗಿ ಮಾಡಬೇಕು.ಸಭೆ ಸಮಾರಂಭಗಳಿಗೆ ಹಾಗೂ ಪ್ರವಾಸಿ ಕೇಂದ್ರಗಳಿಗೆ ಹೋಗಬಾರದು ಎಂದು ಸಲಹೆ ನೀಡಿದರು.ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸ್ವಾತಿ ಮಾತನಾಡಿ ಕೊರೊನಾ ಕಡಿಮೆ ಯಾಗಿದ್ದು ನಿಯಂತ್ರಣದಲ್ಲಿದೆ. ಕೊರೊನಾ ನಿಯಂತ್ರಣಕ್ಕಾಗಿ ಸಾರ್ವಜನಿಕರು ನೀಡಿದ ಸಹಕಾರವನ್ನು ಸ್ಮರಿಸಿದರು.ಆಡಳಿತ ವೈದ್ಯಾಧಿಕಾರಿ ಡಾ.ಸಂತೋಷ್,ನಗರಸಭೆ ಸದಸ್ಯ ಮಂಜುನಾಥ್,ವಕೀಲ ವಾಸ್ತುರಮೇಶ್, ಮುಖಂಡರಾದ ವಿ.ಅಮರ್, ವೆಂಕಟರವಣಪ್ಪ, ಸಾಧಿಕ್,ಕೃಷ್ಣಮೂರ್ತಿ,ವೆಂಕಟರವಣ,ಆಯಿಷಾ ಸುಲ್ತಾನಾ, ಜನಾರ್ಧನ್, ಅನಿಲ್ ಮತ್ತಿತರರು ಇದ್ದರು.