ಕಾಂಗ್ರೆಸ್ -ಬಿಜೆಪಿಗರ ಆರೋಪ,ಪ್ರತ್ಯಾರೋಪ…!?

11

ದೊಡ್ಡಬಳ್ಳಾಪುರ: ಸೆಪ್ಟಂಬರ್ 3 ರಂದು ನಡೆಯಲಿರುವ ನಗರಸಭೆ ಚುನಾವಣೆಗೆ ನಾಮಿನೇಷನ್ ಪ್ರಕ್ರಿಯೆ ಮುಕ್ತಾಯಗೊಂಡ ಬನ್ನಲ್ಲೇ ಕಾಂಗ್ರೆಸ್ ಮತ್ತು ಬಿಜೆಪಿಗರ ಪರಸ್ಪರ ಆರೋಪ ಪ್ರತ್ಯಾರೋಪಗಳು ಭುಗಿಳೆದ್ದಿವೆ. ಬಿಜೆಪಿ ನಗರ ಘಟಕದ ಅಧ್ಯಕ್ಷ ಹಾಗೂ 19ನೇ ವಾರ್ಡ್‌ನ ಅಭ್ಯರ್ಥಿ ಹೆಚ್.ಎಸ್‌ ಶಿವಶಂಕರ್‌ (ಶಂಕ್ರಿ) ತಮ್ಮ ಚುನಾವಣಾ ಅಫಿಡವಿಟ್‌ ನಲ್ಲಿ ಆತನ ವಿರುದ್ಧ ನ್ಯಾಯಾಲಯ ದಲ್ಲಿ ವಿಚಾರಣೆ ಹಂತದಲ್ಲಿ ರುವ ಕ್ರಿಮಿನಲ್‌ ಪ್ರಕರಣದ ವಿಚಾರ ಮುಚ್ಚಿಟ್ಟು ನಾಮಪತ್ರ ಸಲ್ಲಿಸಿದ್ದಾರೆ ಎಂದು,ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಗಂಭೀರ ಆರೋಪ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ ಕಚೇರಿಯಲ್ಲಿ ಪತ್ರಿಕಾ‌ಗೋಷ್ಟಿ ನಡೆಸಿದ ಕೆಪಿಸಿಸಿ ಸದಸ್ಯ,ಪಕ್ಷದ ವಕ್ತಾರರು ಆದ ಜಿ.ಲಕ್ಷ್ಮೀಪತಿ,ನಗರದ19ನೇ ವಾರ್ಡ್‌ ದೇವ ರಾಜನಗರದ ಬಿಜೆಪಿ ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಸಿರುವ ಹೆಚ್.‌ಎಸ್‌ ಶಿವ ವಶಂಕರ್‌ ಅವರ ಮೇಲರ ನ್ಯಾಯಾಲಯ ದಲ್ಲಿ ಬಾಕಿ ಇರುವ ಕ್ರಿಮಿನಲ್‌ ಪ್ರಕರಣ ಮರೆ ಮಾಚಿ ಚುನಾವಣಾ ಅಧಿಕಾರಿಗಳಿಗೆ ನಾಮ ಪತ್ರ ಸಲ್ಲಿಸಿದ್ದಾರೆ.ಈ ರೀತಿ ತಪ್ಪು ಮಾಹಿತಿ ನೀಡಿ ರುವ ಶಿವಶಂಕರ್‌ ಅವರ ನಾಮಪತ್ರ ವನ್ನು ತಿರಸ್ಕರಿಸುವಂತೆ ಕೋರಿ ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ. 2012ರಲ್ಲಿ ಶಿವಶಂಕರ್‌ ಅವರ ವಿರುದ್ಧ ದೊಡ್ಡ ಬಳ್ಳಾಪುರ ನಗರ ಠಾಣೆಯಲ್ಲಿ ವಂಚನೆ, ಕ್ರಿಮಿ ನಲ್‌ ಒಳಸಂಚು,ನಕಲಿ ದಾಖಲೆಗಳ ಸೃಷ್ಟಿ ಸೇರಿ ಮತ್ತಿತರ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು.ಈ ಪ್ರಕರಣ ಸದ್ಯ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಿಚಾರಣಾ ಪ್ರಕ್ರಿಯೆಯಲ್ಲಿದೆ.ಈ ಮಾಹಿತಿಯನ್ನು ಮರೆ ಮಾಚಿ ಶಿವಶಂಕರ್‌ ಅವರು ಚುನಾವಣಾ ಅಫಿಡೆವಿಟ್‌ ಸಲ್ಲಿಸಿದ್ದಾರೆ ಎಂದು ಲಕ್ಷ್ಮೀಪತಿ ಆರೋಪಿಸಿದ್ದಾರೆ. ಆರೋಪಕ್ಕೆ ಸ್ಪಷ್ಟೀಕರಣ ನೀಡಿರುವ ಬಿಜೆಪಿ ಪಕ್ಷದ ಅಭ್ಯರ್ಥಿ ಹೆಚ್.ಎಸ್.ಶಿವಶಂಕರ್ ನನ್ನ ಮೇಲಿನ,ಕಾಂಗ್ರೆಸ್ಸಿಗರ ಆರೋಪ ಸತ್ಯಕ್ಕೆ ದೂರ ವಾದ್ದು,ನನ್ನ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ನಾಗೇಶ್ ಸೋಲುವ ಭೀತಿಯಿಂದ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ ನನ್ನ ತೇಜೋವಧೆ ಮಾಡಲು ವಾಮಮಾರ್ಗ ಹಿಡಿ ದಿದ್ದಾರೆ ಹೊರೆತು,ಆವರ ಆರೋಪದಲ್ಲಿ ಹುರುಳಿಲ್ಲ.ಅವರೇ ದೂರಿದಂತೆ ಪ್ರಕರಣ ಒಂದರಲ್ಲಿ ನಾನು ಒಬ್ಬ ಸಾಕ್ಷಿದಾರ ಅಷ್ಟೇ ವಿನಹಾ ನಾನು ಆರೋಪಿಯೂ ಅಲ್ಲ ಅಪರಾಧಿಯೂ ಅಲ್ಲ ಎಂದು ತಮ್ಮ ಮೇಲಿನ ಆರೋಪ ವನ್ನು ತಳ್ಳಿ ಹಾಕಿದ್ದಾರೆ. ಹತ್ತಾರು ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿ,ನಮ್ಮವಾರ್ಡಿನಲ್ಲಿ ಈಗಾಗಲೇ ಎರಡು ಬಾರಿ ನನಗೆ ಆಶೀರ್ವಾದ ಮಾಡಿ ನನ್ನನ್ನು ಗೆಲ್ಲಿಸಿದ ಜನತೆಗೆ ಸೇವೆ ಸಲ್ಲಿ ಸುತ್ತಾ ಬಂದಿದ್ದೇನೆ.ಈ ಬಾರಿಯೂ ನಾನು ಸ್ಪರ್ಧೆಯಲ್ಲಿದ್ದೇನೆ ಅದನ್ನು ಸಹಿಸಲಾರದವರು ನನ್ನ ವಿರುದ್ಧ ಈರೀತಿಯ ಇಲ್ಲಸಲ್ಲದ ಆರೋಪ ಗಳನ್ನು ಮಾಡುತ್ತಾ ಮತದಾರಲ್ಲಿ ತಮ್ಮಸಣ್ಣ ತನವನ್ನು ತಾವೇ ಪ್ರದರ್ಶಿಸಿ ಕೊಳ್ಳುತ್ತಿರುವುದ ರಿಂದ ನನಗೆ ಹೆಚ್ಚಿನ ಲಾಭ ಎಂದು ತಿರುಗೇಟು ನೀಡಿದ್ದಾರೆ.