ನಗರಸಭೆ ಸದಸ್ಯ ಸ್ಥಾನ 35 ಲಕ್ಷಕ್ಕೆ ಹರಾಜಾ…!?

45

ದೇವಸ್ಥಾನದ ಜೀರ್ಣೊದ್ದರಕ್ಕೆ ನಗರಸಭೆ ಸದಸ್ಯ ಸ್ಥಾನ 35 ಲಕ್ಷಕ್ಕೆ ಹರಾಜು..!? ಚುನಾವಣೆ ನಡೆಯಲೇ ಬೇಕು ಎಂದು ಯುವಕರ ಒತ್ತಾಯ.

ಬೆಂಗಳೂರು ಗ್ರಾಮಾಂತರ/ ದೊಡ್ಡಬಳ್ಳಾಪುರ: ನಗರ ಸಭೆ ಚುನಾವಣೆ ಸೆಪ್ಟೆಂಬರ್‌ 3 ರಂದು ನಡೆಯಲ್ಲಿದ್ದು,ವಾರ್ಡ್.3 ರ ಮುತ್ಸಂದ್ರ ಸದಸ್ಯ ಸ್ಥಾನವನ್ನು 35 ಲಕ್ಷಕ್ಕೆ ಹರಾಜು ಪ್ರಕ್ರಿಯೆ ನಿನ್ನೆ ರಾತ್ರಿ ನಡೆದಿದೆ ಎನ್ನಲಾಗಿದೆ.ಆದರೆ ಈ ವಾರ್ಡಿನ ಯುವಕರು ಚುನಾವಣೆ ನಡೆಸುವಂತೆ ಆಕ್ರೊಶ ವ್ಯಕ್ತಪಡಿಸಿದ್ದಾರೆ. ದೊಡ್ಡಬಳ್ಳಾಪುರ ನಗರದ ಮುತ್ಸಂದ್ರ ವಾರ್ಡ್ -3 ರಲ್ಲಿ ನಗರಸಭೆ ಚುನಾವಣೆ ಕಾವು ರಂಗೇರುತ್ತಿದ್ದು,ಕಣದಲ್ಲಿ ಕಾಂಗ್ರೆಸ್ ನಿಂದ ದೀಪಾ ಕೃಷ್ಣಮೂರ್ತಿ.ಬಿಜೆಪಿಯಿಂದ ಸುಮಿತ್ರಾ ಆನಂದ್ ಪಕ್ಷೇತರಾಗಿ ವಿಆರ್.ಶೋಭಾ ಶಶಿ ಧರ್ ಸ್ಪರ್ದೆ ಮಾಡುತ್ತಿದ್ದಾರೆ.ಆದರೆ ವಾರ್ಡ್ ನಲ್ಲಿರುವ ಆಂಜನೇಯಸ್ವಾಮಿ ದೇವಸ್ಥಾನದ ಜೀರ್ಣೊದ್ದರಕ್ಕೆ ಸ್ಪರ್ಧೆಯಲ್ಲಿರುವ ಆಕಾಂಕ್ಷಿ ಅತಿ ಹೆಚ್ಚು ಹಣವನ್ನು ಕೊಡುತ್ತಾರೋ ಅವರನ್ನು ವಾರ್ಡ್ ಸದಸ್ಯನಾಗಿ ಆಯ್ಕೆ ಮಾಡುವ ತೀರ್ಮಾನವನ್ನು ವಾರ್ಡ್ ನ ಕೆಲವು ಮುಖಂಡರು ನಿನ್ನೆ ರಾತ್ರಿ ತೀರ್ಮಾನ ಮಾಡಿ ಕೊಂಡಿದ್ದರು ಎನ್ನಲಾಗಿದೆ,ಅದರಂತೆ ಒಬ್ಬ ಅಭ್ಯರ್ಥಿ ದೇವಸ್ಥಾನಕ್ಕೆ 35 ಲಕ್ಷ ಹಣ ಕೊಡುವುದಾಗಿ ಹೇಳಿ, ಮುಖಂಡವಾಗಿ 20 ಲಕ್ಷ ಹಣ ಮತ್ತು ಚುನಾವಣೆಯ ನಂತರ ಉಳಿದ ಹಣ ಕೊಡುವುದಾಗಿ ಹೇಳಿದ್ದರಂತೆ.ಸ್ವರ್ಧೆ ಯಲ್ಲಿರುವ ಉಳಿದ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಹಿಂದೆಗೆದುಕೊಂಡು,ದೇವಸ್ಥಾನಕ್ಕೆ ಹಣ ನೀಡಿದ ಅಭ್ಯರ್ಥಿಯನ್ನ ವಾರ್ಡ್ ಸದಸ್ಯ ನನ್ನಾಗಿ ಅವಿರೋಧವಾಗಿ ಆಯ್ಕೆ ಮಾಡುವುದಾಗಿ ತೀರ್ಮಾನ ಮಾಡಲಾಗಿದೆ. ಚುನಾವಣೆ ನಡಸದೆ ಅಭ್ಯರ್ಥಿಯನ್ನ ಆಯ್ಕೆ ಮಾಡುವುದು ವಾರ್ಡ್ ಯುವಕರ ಅಕ್ರೋಶಕ್ಕೆ ಕಾರಣವಾಗಿದ್ದು ಸ್ವರ್ದೆಯಿಂದ ಹಿಂದೆ ಸರಿಯ ದಂತೆ ಕಾಂಗ್ರೆಸ್ ಅಭ್ಯರ್ಥಿ ದೀಪಾಕೃಷ್ಣಮೂರ್ತಿ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.8 ವರ್ಷ ಗಳಿಂದ ದೇವಾಸ್ಥಾನದ ಕಾಮಾಗಾರಿ ನಡೆಯದೆ ನೆನೆಗುದಿಗೆ ಬಿದ್ದಿದೆ, ಚುನಾವಣೆ ಸಮಯದಲ್ಲಿ ಅಭ್ಯರ್ಥಿ ಕೊಡುವ ಹಣದಿಂದ ದೇವಸ್ಥಾನ ಜೀರ್ಣೊದ್ದಾರ ಮಾಡುವುದು ಸರಿಯಲ್ಲ, ಜೀರ್ಣೊದ್ದರಕ್ಕೆ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸೋಣ ಎಂಬುದು ಯುವಕರ ವಾದ ವಾಗಿದೆ,ಸಂವಿಧಾನ ಬದ್ಧ ಪ್ರಜಾಪ್ರಭುತ್ವದ, ಚುನಾವಣೆ ನಡೆಸಲೇ ಬೇಕೆಂದು ಆಗ್ರಹಿಸಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಚುನಾವಣೆ ವಿಕ್ಷಕರು ಸದಸ್ಯ ಸ್ಥಾನವನ್ನು ಹರಾಜು ಮಾಡುವುದು ಚುನಾವಣಾ ನೀತಿ ಸಂಹಿತೆಯ ವಿರುದ್ಧ ಮತ್ತು ಕಾನೂನು ಬಾಹಿರವಾಗಿದೆ ಎಂದು ಅಭ್ಯರ್ಥಿಗಳಿಗೆ ಎಚ್ಚರಿಕೆ ನೀಡಿದ್ದಾರೆ.