ಮತದಾನದ ಹಕ್ಕನ್ನು ನೀಡಿ, ಇಲ್ಲವೇ ಚುನಾವಣೆ ರದ್ದುಪಡೆಸಿ..‌!?

6

ಬೆಂಗಳೂರು ಗ್ರಾಮಾಂತರ/ ದೊಡ್ಡಬಳ್ಳಾಪುರ: ತಾಲೂಕಿನ ನಗರಸಭೆ ಸೇರುವಂತಹ ಕರೆನಹಳ್ಳಿ ವಾರ್ಡಿನ ಜನರ ಕಷ್ಟ ಕೇಳಲಾಗದು ನಗರ ಸಭಾ ಚುನಾವಣೆಯ ಈ ಸಂದರ್ಭದಲ್ಲಿ ಮತ ದಾರರು ತಮ್ಮ ಮತ ಚಲಾಯಿಸಲು ಪರದಾಡು ವಂತಾಗಿದೆ ಈ ಹಿನ್ನೆಲೆಯಲ್ಲಿ ಕರೆನಹಳ್ಳಿ ಹಿತ ರಕ್ಷಣಾ ಸಮಿತಿ ಯ ವತಿಯಿಂದ ಇಂದು ಸಾಂಕೇತಿಕ ಪ್ರತಿಭಟನೆ ಯನ್ನು ಹಮ್ಮಿಕೊಳ್ಳ ಲಾಗಿತ್ತು ವಾರ್ಡಿನ ಸರಿಸುಮಾರು ಸಾವಿರದ ಐನೂರ ಕ್ಕೂ ಹೆಚ್ಚು ಮತದಾರರನ್ನು ಕರೆನಹಳ್ಳಿ ವಾರ್ಡ್ ನಿಂದ ಬೇರ್ಪಡಿಸಿದ್ದು ಪ್ರಜಾಪ್ರಭುತ್ವ ದಲ್ಲಿ ಮತದಾನ ಮಾಡುವುದು ಪ್ರತಿಯೊಬ್ಬರ ಹಕ್ಕಾಗಿದೆ ದೊಡ್ಡಬಳ್ಳಾಪುರ ನಗರಸಭೆ ಅಧಿಕಾರಿಗಳು ಈ ಒಂದು ಹಕ್ಕನ್ನು ನಮ್ಮಿಂದ ಕಸಿದುಕೊಂಡಿದ್ದಾರೆ ನಮಗೆ ನ್ಯಾಯ ಬೇಕು ಇಲ್ಲವಾದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಯ ಮುಂಭಾಗದಲ್ಲಿ ಮುಂದಿನ ದಿನಗಳಲ್ಲಿ ಅವರ ಪ್ರತಿಭಟನೆ ಮಾಡುವುದಾಗಿ ಕರೇನ ಹಳ್ಳಿಯ ಸರ್ವಜನಿಕರು ಎಚ್ಚರಿಕೆ ನೀಡಿದ್ದಾರೆ. ತಮ್ಮಮತದಾನದ ಹಕ್ಕನ್ನು ಹಿಂದಿರುಗಿ ಸುವಂತೆ ಮಾಧ್ಯಮಗಳ ಮುಖಾಂತರ ಅಧಿಕಾರಿ ಗಳಿಗೆ ಮನವಿ ಮಾಡಿದರು.