ಗುರುವಂದನಾ ಕಾರ್ಯಕ್ರಮ

307

ಬೆಂಗಳೂರು/ ಮಹದೇವಪುರ:ಇತ್ತೀಚಿನ ದಿನಗಳಲ್ಲಿ ವಿದ್ಯಾವಂತವರೇ ಮಾನಸಿಕ ಖಿನ್ನತೆಯಿಂದ ಅತ್ಮಹತ್ಯೆಯಂತಹ ಕೃತ್ಯಗಳಿಗೆ ಒಳಗಾಗುತ್ತಿರುವುದು ದೇಶದ ಬೆಳವಣಿಗೆಗೆ ಮಾರಕವಾಗಿದೆ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಮಹಾಸ್ವಾಮಿಗಳು ಬೇಸರ ವ್ಯಕ್ತಪಡಿಸಿದರು.ಮಹದೇವಪುರ ಕ್ಷೇತ್ರದ ಚನ್ನಸಂದ್ರದಲಿರುವ ಬ್ಲೂಮರ್ಸ್ ಶಾಲೆಯಲ್ಲಿ ಆಯೋಜಿಸಿದ್ದ ಗುರುವಂದನ ಹಾಗೂ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು, ದೇಶ ಕಟ್ಟಬೇಕಾದ ಯವಜನತೆ ಅದರಲ್ಲೂ ವಿದ್ಯಾವಂತರೇ ನಾನಾ ರೀತಿಯ ಖಿನ್ನತೆಗೆ ಒಳಗಾಗಿ ಅತ್ಮಹತ್ಯೆಯಂತಹ ಕೃತ್ಯಗಳಿಗೆ ಮುಂದಾಗುತ್ತಿರುವುದು ಬೇಸರದ ಸಂಗತಿ. ಇಂದಿನ ಸ್ವರ್ದಾತ್ಮಕ ಯುಗದಲ್ಲಿ ಮಕ್ಕಳಿಗೆ ಅಧುನಿಕ ಮತ್ತು ಪ್ರಯೋಗತ್ಮಾಕ ಶಿಕ್ಷಣ ಅಗತ್ಯವಿದೆ. ಸಮಾಜದಲ್ಲಿ ಉತ್ತಮ ಸಾದನೆ ಗೈಯಲು ಮಾತೃ ಬಾಷೆಯೊಂದಿಗೆ ಇತರ ಬಾಷೆಗಳು ಅವಶ್ಯಕವಾಗಿದೆ ಎಂದರು. ಮಕ್ಕಳ ಮೇಲೆ ಅತಿಯಾದ ಒತ್ತಡವನ್ನು ಪೋಷಕರು ಹಾಕುತ್ತಿದ್ದಾರೆ.ಮಕ್ಕಳಲ್ಲಿನ ಪ್ರತಿಭೆಯನ್ನು ಸೂಕ್ಷ್ಮವಾಗಿ ಗಮನಿಸಿ ಪೋಷಕರು ಗುರುತಿಸಿ ಅದನ್ನು ಪೋಷಿಸಿದರೇ ಮಾತ್ರ ಮಕ್ಕಳು ಸಮಾಜದಲ್ಲಿ ಉನ್ನತಮಟ್ಟಕ್ಕೇರಲು ಸಾಧ್ಯ ಆಭಿಪ್ರಾಯಪಟ್ಟರು. ಮಕ್ಕಳ ಇಷ್ಟಕ್ಕೆ ವಿರುದ್ದವಾಗಿ ಪೋಷಕರು ತಮ್ಮ ಇಷ್ಟದಂತೆ ಓದಬೇಕು, ನಾವು ಹೇಳಿದ್ದೇ ಕೇಳಬೇಕು ಎಂಬ ಮನೋಭಾವನೆಯಿಂದ ಮಕ್ಕಳಲ್ಲಿ ಇರುವಂತಹ ಪ್ರತಿಭೆಯನ್ನು ಹೊಸಕಿ ಹಾಕುತ್ತಿರುವುದು ಬೇಸರದ ಸಂಗತಿ ಎಂದರು. ಅತಿಯಾದ ಕೆಲಸದ ಒತ್ತಡಗಳಿಂದ ಜನತೆ ದಾರ್ಮಿಕ ಬಾವೈಕ್ಯತೆಯನ್ನು ಮರೆಯುತ್ತಿದ್ದಾರೆ. ದೈವ ಮತ್ತು ದೈವತ್ವದಲ್ಲಿ ನಂಬಿಕೆ ಇಡಲು ಜನರಿಗೆ ಸಮಯವೇ ಸಿಗುತ್ತಿಲ್ಲವೆಂಬುದು ಬೇಸರದ ಸಂಗತಿಯಾಗಿದೆ. ಕುಟುಂಬದೊಂದಿಗೆ ದೇವಾಲಯಗಳಿಗೆ ಹೋಗದಿದ್ದರೂ ಪರವಾಗಿಲ್ಲ, ಮನೆಯಲ್ಲಿನ ದೇವರಗುಡಿಯಲ್ಲಿ ಒಂದು ಗಂಟೆಯಾದರೂ ಮಂತ್ರ ಸ್ತೋತ್ರಗಳನ್ನು ಪಠಿಸಿ ಆಗ ಮನಸ್ಸಿಗೆ ಶಾಂತಿ,ನೆಮ್ಮದಿ ದೊರಕುತ್ತದೆ. ಎಷ್ಟೇ ಹಣವಿದ್ದರೂ ಸಹ ಮನಸ್ಸಿಗೆ ಶಾಂತಿ ನೆಮ್ಮದಿ ಇಲ್ಲದಿದ್ದರೇ ಬದುಕಲು ಆಗುವುದಿಲ್ಲ ಅಂತೇಯೇ ಧಾರ್ಮಿಕತೆ ಇಲ್ಲದಿದ್ದರೇ ಯಾರು ಕೂಡಾ ಉಳಿಯಲು ಸಾಧ್ಯವಿಲ್ಲ ಎಂದರು. ವಿದ್ಯಾಸಂಸ್ಥೆಗಳು ಹಣದ ಹಿಂದೆ ಹೋಗದೇ ಸೇವಾ ಮನೋಭಾವನೆಯಿಂದ ಶಿಕ್ಷಣವನ್ನು ನೀಡುವಂತಾಗಬೇಕೆಂದು ತಿಳಿಸಿದರು. ಈ ಸಂಧರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಎ.ಸಿ ಶ್ರೀನಿವಾಸ್, ಶಾಲೆಯ ಸಂಸ್ಥಾಪಕ ನಾರಾಯಣಗೌಡ, ಕಾರ್ಯದರ್ಶಿ ದೇವರಾಜಗೌಡ, ಮುಖಂಡರಾದ ಸೋಮ್‍ಸಿಂಗ್, ಕಿರಣ್‍ಕುಮಾರ್,ನಾರಾಯಣಸ್ವಾಮಿ, ಇಂದುಮತಿ ಮತ್ತಿತರರು ಹಾಜರಿದ್ದರು.