ಕೆಎಸ್ಆರ್ಟಿಸಿ ಬಸ್ಗೆ ಒಬ್ಬ ಬಲಿ

293

ಬೆಂಗಳೂರು/ಕೃಷ್ಣರಾಜಪುರ: ಕೆಎಸ್‍ಆರ್‍ಟಿಸಿ ಬಸ್‍ಗೆ ಮೀನು ವ್ಯಾಪಾರಿಯೊಬ್ಬ ಬಲಿಯಾಗಿರುವ ಘಟನೆ ಕೆಆರ್‍ಪುರ ಸಂಚಾರಿ ಠಾಣೆ ವ್ಯಾಪ್ತಿಯ ವೆಂಗಯ್ಯನಕೆರೆ ಬಳಿ ನಡೆದಿದೆ.ಆರುಮುಗಂ (62) ಮೃತ ದುರ್ದೈವಿ, ದೇವಸಂದ್ರದ ಬಚ್ಚೇಗೌಡ ಲೇಔಟ್‍ನ ನಿವಾಸಿಯಾದ ಆರುಮುಗಂ ಮೀನು ವ್ಯಾಪಾರಿಯಾಗಿದ್ದು 40 ವರ್ಷಗಳಿಂದ ಕೆಆರ್‍ಪುರದಲ್ಲಿ ವಾಸವಿದ್ದರು, ಎಂದಿನಂತೆ ವೆಂಗಯ್ಯನ ಕೆರೆಯಲ್ಲಿ ಮೀನು ಹಿಡಿಯಲೆಂದು ಸಂಜೆ 4 ಗಂಟೆಗೆ ತನ್ನ ಟಿವಿಎಸ್ ಬೈಕ್‍ನಲ್ಲಿ ದೇವಸಂದ್ರದಿಂದ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ವೆಂಗಯ್ಯನಕೆರೆಗೆ ತೆರಳುತ್ತಾ ರಸ್ತೆ ದಾಟುವ ಸಂದರ್ಭದಲ್ಲಿ ಕೋಲಾರದಿಂದ ಬೆಂಗಳೂರಿನ ಕಡೆಗೆ ವೇಗವಾಗಿ ಬರುತ್ತಿದ್ದ ಕೆಎಸ್ ಆರ್‍ಟಿಸಿ ಬಸ್ ಡಿಕ್ಕಿಹೊಡೆದ ಪರಿಣಾಮ ತೀವ್ರ ರಕ್ತ ಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಸ್ಥಳಕ್ಕಾಗಮಿಸಿದ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದು,ಬಸ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.