ರೈತರಿಗೆ ಸಹಾಯದನದ ಚೆಕ್ ವಿತರಣೆ

460

ಚಿಕ್ಕಬಳ್ಳಾಪುರ/ಬಾಗೇಪಲ್ಲಿ: ಸರ್ಕಾರದ ಯೋಜನೆಗಳನ್ನು ರೈತರು ಉತ್ತಮವಾಗಿ ಬಳಸಿಕೊಂಡು ಸದೃಢರಾಗಬೇಕು ಎಂದು ಸಹಾಯಕ ಕೃಷಿ ಅಧಿಕಾರಿ ಪ್ರಸನ್ನ ಕುಮಾರ್ ತಿಳಿಸಿದರು. ಅವರು ಕೃಷಿ ಭಾಗ್ಯ ಯೋಜನೆಯಲ್ಲಿ ಪಾಲಿಹೌಸ್ ಯೋಜನೆಯ ಫಲಾನುಭವಿಗಳಿಗೆ ಸಹಾಯಧನದ ಚೆಕ್ ನೀಡಿ ಮಾತನಾಡಿದರು. ಕೃಷಿ ಇಲಾಖೆಯಲ್ಲಿ ರೈತರಿಗೆ ಉತ್ತಮವಾದ ಯೋಜನೆಗಳಿವೆ ಅವುಗಳನ್ನು ಸದಬಳಕೆ ಮಾಡಿಕೊಂಡು ಜೀವನ ವನ್ನು ಉತ್ತಮ ಪಡಿಸಿಕೋಳ್ಳಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕಾರ್ಪೋರೆಷನ್ ಬ್ಯಾಂಕ್ ಮೇನೇಜರ್ ವಿಶ್ವನಾಥ್ ಸ್ಥಳೀಯರೈತರು ನರಸಿಂಹ ಪ್ಪ, ಸದಾಶಿವರೆಡ್ಡಿ, ಅದಿನಾರಾಯಣಪ್ಪ, ನರಸಿಂಹಯ್ಯ, ಮರಿಗೌಡ, ನಂಜಿರೆಡ್ಡಿ, ಪಾಲಿಹೌಸ್ ರಮೇಶ್, ಮುಂತಾದವರು ಹಾಜರಿದ್ದರು.