ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರೈತ ನೋರ್ವ ಬಲಿ

355

ಮಂಡ್ಯ/ಮಳವಳ್ಳಿ:ಜಮೀನಿನಲ್ಲಿರುವ ಬಾಳೆತೋಟವನ್ನು ನೋಡಲು ಹೋಗಿದ್ದ ರೈತನೊಬ್ಬ ತುಂಡಾದ ವಿದ್ಯುತ್ ತಂತಿ ತುಳಿದು ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ಮಳವಳ್ಳಿ ತಾಲ್ಲೂಕಿನ ಕೆಂಚನದೊಡ್ಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಚಿಕ್ಕಮಾದಯ್ಯ (43) ಮೃತಪಟ್ಟ ರೈತ ಮೃತನಿಗೆ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಓವ೯ ಪುತ್ರ ಇದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಸೆಸ್ಕಾಂ ಸಹಾಯಕ ಕಾಯ೯ಪಾಲಕ ಅಭಿಯಂತರ ಪರಮೇಶ್ವರಪ್ಪ. ಜೆಇ ಸಚಿನ್ ಬೇಟಿ ನೀಡಿ ಪರಿಶೀಲನೆ ನಡೆಸಿದರು . ಜಿ.ಪಂ ಸದಸ್ಯೆ ಸುಷ್ಮಾರಾಜು. ಚೊಟ್ಟನಹಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷ  ಸಿ.ಪಿ ರಾಜು ಬೇಟಿ ಮೃತಕುಟುಂಬಕ್ಕೆ ಸ್ವಾಂತನ ಹೇಳಿದರು. ಈ ಸಂಬಂಧ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ