ಇದ್ದು,ಇಲ್ಲದಂತಾದ ಕೆಎಸ್ಆರ್ ಟಿಸಿ ಬಸ್ಟಾಂಡು

1164

ಚಿಕ್ಕಬಳ್ಳಾಪುರ /ಶಿಡ್ಲಘಟ್ಟ : ನಗರದ ಸಕಾ೯ರಿ ಸಾರಿಗೆ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳ ಪ್ರವೇಶ ಕಡಿವಾಣ ವಾಕಲು ನಿರ್ಮಿಸಿರುವ ರಸ್ತೆ ಉಬ್ಬುಗಳು ಅವೈಜ್ಞಾನಿಕವಾಗಿದ್ದು ,ದಾಟುವಾಗ ಸಾರಿಗೆ ಸಂಸ್ಥೆಯ ಬಸ್‍ಗಳು ಕೆಟ್ಟು ನಿಲ್ಲುವುದು ಸಾಮಾನ್ಯವಾಗಿದೆ. ಹಂಪ್ಸ್ ದಾಟುವಾಗ ಕೆಟ್ಟು ನಿಲ್ಲುತ್ತಿರುವ ಬಸ್‍ಗಳ ಸಂಖ್ಯೆ ಹೆಚ್ಚುತ್ತಿದ್ದು, ಹೆದರಿದ ಬಹುತೇಕ ಚಾಲಕರು ನಿಲ್ದಾಣಕ್ಕೆ ಹೋಗದೆ ಹೊರಗಡೆಯೆ ಬಸ್ ನಿಲ್ಲಿಸಿ ಅಲ್ಲಿಯೆ ಪ್ರಯಾಣಿಕರನ್ನು ಇಳಿಸಿ , ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುವಂತಾಗಿದೆ.ಇನ್ನೂ ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರು ಕ್ರಾಸ್ ಗಳಲ್ಲೆ ಬಸ್ ಹತ್ತಿ ಹೋಗುತ್ತಾರೆ. ಬಸ್ ನಿಲ್ದಾಣ ದಲ್ಲಿ ಬಸ್ ಗಳು ಮತ್ತು ಪ್ರಯಾಣಿಕರು ಇಲ್ಲದೆ ಖಾಲಿ ಖಾಲಿ. ಒಟ್ಟಾರೆ ನಮ್ಮೂರಲ್ಲಿ ಕೆಎಸ್ ಆರ್ ಟಿಸಿ ಬಸ್ಟಾಂಡ್ ಇದ್ದು, ಇಲ್ಲದಂತಾಗಿದೆ ಎಂದು ಮೂಗು ಮುರಿಯುತ್ತಿದ್ದಾರೆ ಶಿಡ್ಲಘಟ್ಟದ ಜನಸಾಮಾನ್ಯರು.