ಕೊಳಚೆ ನೀರು ಸರಬರಾಜು  ಸಾಭೀತಾದರೆ ಕಠಿಣ ಕ್ರಮ: ಮೇಯರ್ ಪದ್ಮಾವತಿ 

446
ಬೆಂಗಳೂರು (ಕೃಷ್ಣರಾಜಪುರ): ಬೆಳ್ಳಂದೂರು ಕೆರೆಯಲ್ಲಿ ಉತ್ಪತ್ತಿಯಾಗುತ್ತಿರುವ ವಿಷಾಕಾರಿಕ ನೊರೆಯನ್ನು ಶಮನಗೊಳಿಸಿ ಅಭಿವೃದ್ದಿಗೊಳಿಸಲು ಬಿಡಿಎ ಸಿದ್ದವಿದೆ ಎಂದು ಮೇಯರ್ ಪದ್ಮಾವತಿ ತಿಳಿಸಿದರು. ಇತ್ತಿಚ್ಚೀಗೆ  ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನಲೇ ಹಾಗೂ ಕೆರೆಯ ಕಲುಷಿತ ನೀರು ಟ್ಯಾಂಕರ್ ಮೂಲಕ ಸಾರ್ವಜನಿಕರ ಬಳಕೆ ಪೋರೈಕೆ ಮಾಡಲಾಗುತ್ತಿದೆ ಎಂಬ ದೂರಿನ ಮೇರೆಗೆ ಗುರುವಾರ ಬೆಳ್ಳಂದೂರು ಕೆರೆಗೆ ಅಧಿಕಾರಿಗಳೊಂದಿಗೆ ಬೇಟಿ ನೀಡಿದ ಮೇಯರ್ ಪದ್ಮಾವತಿ ಪರಿಶೀಲನೆ ನಡೆಸಿದರು.
 ಇದೇ ವೇಳೆ ಬೆಳ್ಳಂದೂರು ಗ್ರಾಮದ ಸರ್ವೇ ನಂಬರ್ 14.15. 18ರಲ್ಲಿರುವ  ಶುದ್ದ ನೀರಿನ ಘಟಕಕ್ಕೆ ಬಿಬಿಎಂಪಿ ವತಿಯಿಂದ ನೋಟಿಸ್  ನೀಡಿ ಬೀಗ ಜಡಿದು. ಘಟಕದ ನೀರನ್ನು ಪ್ರಯೋಗಲಯಕ್ಕೆ ಕಳುಹಿಸಿಕೊಡಲಾಗಿದೆ. ಸಾರ್ವಜನಿಕರಿಗೆ ಸರಬರಾಜು ಮಾಡುವ ನೀರಿನಲ್ಲಿ ಕಳಪೆ ಕಂಡು ಬಂದರೆ ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು. ಬೆಳ್ಳಂದೂರು ಕೆರೆಯ ಕಲುಷಿತ ನೀರು ಟ್ಯಾಂಕರ್ ಮೂಲಕ ಸಾರ್ವಜನಿಕರ ಬಳಕೆ ಪೋರೈಕೆ ಮಾಡಲಾಗುತ್ತಿದೆ ಎಂಬ ಸುಳ್ಳು ಸುದ್ದಿಯಿಂದ ಟ್ಯಾಂಕರ್ ಮಾಲೀಕರು ನೂರಾರು ನೀರಿನ ಟ್ಯಾಂಕರ್ ಲಾರಿಗಳನ್ನು ನಿಲ್ಲಿಸಿ  ಬೆಳ್ಳಂದೂರಿನಲ್ಲಿಂದು ಪ್ರತಿಭಟನೆ ನಡೆಸಿದರು.
  ಪ್ರತಿಭಟನೆಯಲ್ಲಿ ಪಾಲ್ಗೋಂಡು ಮಾತನಾಡಿದ ಟ್ಯಾಂಕರ್ ಮಾಲೀಕ, ಕೆರೆ ನೀರನ್ನು ಟ್ಯಾಂಕರ್‍ಗಳಲ್ಲಿ ತುಂಬಿ ಪೋರೈಸಲಾಗುತ್ತಿದೆ ಎಂಬ ಸುಳ್ಳ ಸುದ್ದಿಯನ್ನು ಅಲ್ಲಗೆಳೆದರು, ಈ ಭಾಗದಲ್ಲಿ ಸುಮಾರು 150 ಕ್ಕೂ ಹೆಚ್ಚು ಟ್ಯಾಂಕರ್‍ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದ್ದು ವಿನಾ ಕಾರಣ ಕೆರೆನೀರನ್ನು ಸರಬರಾಜು ಮಾಡಲಾಗುತ್ತಿದೆ ಎಂದು ಸುಳ್ಳು ಸುದ್ದಿ ಪ್ರಸಾರಮಾಡುವ ಮೂಲಕ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಇದ್ದರಿಂದ 15 ವರ್ಷದಿಂದ ಟ್ಯಾಂಕರ್‍ಗಳ ಮೂಲಕ ನೀರು ಪೋರೈಸಿ  ಜೀವನ ಸಾಗಿಸುವ ನಮ್ಮ ಕುಂಟಬಳು  ಬೀದಿಗೆ ಬಂದತಾಗಿದೆ ಎಂದು ದೂರಿದರು.
   ಕೆರೆಯ ನೀರು ರಾಯನಿಕ ಮಿಶ್ರಿತವಾಗಿದ್ದು ವಿಷಕಾರಕವಾಗಿದೆ. ನೀರಿನ ಹನಿಯು ಬಟ್ಟೆಯ ಮೇಲೆ ಬಿದ್ದರೆ ಸುಟ್ಟು ಹೋಗುವಂತಹ ಮಟ್ಟದಲ್ಲಿ ನೀರು ಕಲ್ಮಶಗೊಂಡಿದೆ ಈ ನೀರನ್ನು ಟ್ಯಾಂಕರ್ ಮೂಲಕ ಸಾರ್ವಜನಿಕರ ಬಳಕೆಗೆ ಪೂರೈಸಲಾಗುತ್ತಿದೆ ಎಂಬುದು ಸತ್ಯಕ್ಕೆ ದೂರವಾದದು  ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದರು.
 15 ವರ್ಷಗಳ ಹಿಂದೆ ಬೆಳ್ಳಂದೂರು ಗ್ರಾಮದಲ್ಲಿ ಸುಮಾರು 20 ರಿಂದ 30 ಕೊಳವೆ ಬಾವಿಗಳಿದ್ದವು ಅದರೆ ಈಗಾ ಒಂದು ಸೈಟ್‍ಗೆ ಒಂದು ಕೊಳವೆ ಬಾವಿ ಇದ್ದು 300 ರಿಂದ 400 ಅಡಿಗೆ  ಸಿಗುತ್ತಿದ್ದ ನೀರು 1500 ದಾಟಿದೆ. ಸರ್ಕಾರ ಅಥವಾ ಬಿಬಿಎಂಪಿ ಕಾವೇರಿ ನೀರನ್ನು ಸಮರ್ಪಕವಾಗಿ ಪೂರೈಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ ಅದರೂ ಬೆಳ್ಳಂದೂರು ಸುತ್ತ ಮುತ್ತ ಗ್ರಾಮಗಳಿಂದ ನ್ಯಾಯಯುತವಾದ ಬೆಲೆಗೆ ನೀರು ಪೂರೈಕೆ ಮಾಡಲಾಗುತ್ತಿದೆ ಅದರೂ ಕಿಡಿಗೇಡಿಗಳು ವಿನಾ ಕಾರಣ ಗೊಂದಲ  ಸೃಷ್ಟಿಸುತ್ತಿದ್ದಾರೆ ಎಂದು ದೂರಿದರು. ಬೆಳ್ಳಂದೂರು ಕೆರೆಯಿಂದ ವಿಷಪೂತಿತ ನೀರನ್ನು ತೆಗೆದು ಶುದ್ದೀಕರಿಸಿ ಅಪಾರ್ಟ್‍ಮೆಂಟ್‍ಗಳಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪ ನಮ್ಮ ಗಮನಕ್ಕೆ ಬಂದ ತಕ್ಷಣ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಲಾಯಿತು, ಬೆಳ್ಳಂದೂರು ಗ್ರಾಮ ಸರ್ವೇ ನಂ. 14, 15 ಮತ್ತು 18 ರ ಜಮೀನಲ್ಲಿ ನೀರಿನ ಶುದ್ದಿಕರಣ ಘಟಕದ ಮಾಲೀಕರಿಗೆ  ಬಿಬಿಎಂಪಿಯಿಂದ ನೋಟಿಸ್ ನೀಡಲಾಗಿದೆ. ವಾರ್ಡ್ ಅಭಿವೃದ್ದಿ ಮತ್ತು ಆರೋಗ್ಯ ರಕ್ಷಣೆ  ನಮ್ಮ ಮುಖ್ಯ ಕರ್ತವ್ಯವಾಗಿದ್ದು ಯಾವುದೇ ಕಾರಣಕ್ಕೂ ಕೊಳಚೆ ನೀರನ್ನು ಸಾರ್ವಜನಿಕರಿಗೆ  ಸರಬರಾಜು ಮಾಡಲು ಸಾಧ್ಯವಿಲ್ಲ, ಅಂತಹ ಕೆಲಸಕ್ಕೆ ಪ್ರೋತ್ಸಾಹಿಸುವುದಿಲ್ಲ, ಮಹದೇವಪುರ ವಲಯ ಜಂಟಿ ಆಯುಕ್ತರ ಗಮನಕ್ಕೂ ತಂದಿದ್ದು ಜಂಟಿ ಆಯುಕ್ತರು ಪರಿಶೀಲನೆ ಮಾಡಿ ಕೊಳಚೆ ನೀರು ಸರಭರಾಜು ಮಾಡುತ್ತಿರುವುದು  ಸಾಭೀತಾದರೆ ಅಂತವರ ವಿರುದ್ದ ಸೂಕ್ತ ಕಠಿಣ ಕ್ರಮ ಕೈಗೊಳ್ಳಲಿ ಎಂದು ಬೆಳ್ಳಂದೂರು ವಾರ್ಡ್ ಪಾಲಿಕೆ ಸದಸ್ಯೆ ಆಶಾ ಸುರೇಶ್ ಮನವಿ ಮಾಡಿದರು.