ವಾರ್ಡ್ ಪ್ರದಕ್ಷಣೆಯಲ್ಲಿ ಸದಸ್ಯೆ

377

ಚಿಕ್ಕಬಳ್ಳಾಪುರ/ಬಾಗೇಪಲ್ಲಿ :‘ವಾರ್ಡ್ ಪ್ರದಕ್ಷಣೆ’ ಕಾರ್ಯಕ್ರಮವನ್ನು ಪ್ರಾರಂಭಿಸಿ  ವಾರ್ಡ್ ನ ಮನೆ-ಮನೆಗೆ ಭೇಟಿ ನೀಡಿ ಸಾರ್ವಜನಿಕರಿಂದ ಸಮಸ್ಯೆಗಳನ್ನು ಆಲಿಸಿ   ಮಾತನಾಡಿದ ವಾರ್ಡ್ ಸದಸ್ಯೆ ಮಮತ ರವರು  ಬೇಸಿಗೆ ಕಾಲ ಪ್ರಾರಂಭವಾಗುತ್ತಿದ್ದು ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಈಗಾಗಲೇ ನೀರಿನ ಸಮಸ್ಯೆ ನೀಗಿಸಲು ಶಾಸಕರು ಮತ್ತು ಪುರಸಭೆಯ ವತಿಯಿಂದ ಕೊಳವೆಬಾವಿ ಕೊರೆಯಿಸಲಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಪೈಪ್ ಲೈನ್ ಅಳವಡಿಸಿ ನೀರು ಸರಬರಾಜು ಮಾಡಲಾಗುವುದು, ಬೀದಿ ದೀಪಗಳು ಹಲವಾರು ಕಡೆ ಕೆಟ್ಟಿವೆ, ಚರಂಡಿ ಸ್ಚಚ್ಚತೆ, ಸ್ವಚ್ಚ ಭಾರತ ಅಭಿಯಾನದ ಅಡಿ ಶೌಚಾಲಯ ನಿರ್ಮಾಣ, ಸೇರಿದಂತೆ ಇನ್ನೀತರೆ ಸಮಸ್ಯೆಗಳನ್ನು ಪುರಸಭೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದ ಅವರು ಈ ಬಾರಿ ಜನರಿಗೆ ಸರಿಯಾದ ತಿಳುವಳಿಕೆ ಇಲ್ಲದೆ ಸುಮಾರು 7000 ಸಂಧ್ಯಾ ಸುರಕ್ಷಾ, ವಿಧವಾ ವೇತನ, ವಿಕಲಚೇತನರ ವೇತನ ಸೇರಿದಂತೆ ಇನ್ನೀತರ ಫಲಾನುಭವಿಗಳಿಗೆ ವೇತನವನ್ನು ರದ್ದುಗೊಳಿಸಲಾಗಿದ್ದು, ವಾರ್ಡ್ ನ ಬಹುತೇಕರು ಈ ಬಗ್ಗೆ ತಮ್ಮ ಅಳಲನ್ನು ತೋಡಿಕೊಂಡಿದ್ದು ದಾಖಲೆಗಳನ್ನು ನೀಡಿದ್ದಾರೆ. ಈ ಬಗ್ಗೆ ತಾಲ್ಲೂಕು ಆಡಳಿತದೊಂದಿಗೆ ಮಾತನಾಡಿ ವೇತನವನ್ನು ಮಂಜೂರು ಮಾಡಿಸಲಾಗುವುದು, ಸಾರ್ವಜನಿಕರು ಸಹ ನೀರನ್ನು ಮಿತವಾಗಿ ಬಳಸಿ ಮುಂದಿನ ಪೀಳಿಗೆಗೆ ಮಾದರಿಯಾಗಬೇಕು. ಸಮಯಕ್ಕೆ ಸರಿಯಾಗಿ ಪುರಸಭೆಗೆ ಕಂದಾಯವನ್ನು ಪಾವತಿಸಿ ಪಟ್ಟಣದ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದರು. ಈ ಸಂದರ್ಭದಲ್ಲಿ ಕನ್ನಡ ಸೇನೆ ಕರ್ನಾಟಕದ ತಾಲ್ಲೂಕು ಅಧ್ಯಕ್ಷ ಬಿ.ಎ. ಬಾಬಾಜಾನ್, ವಾರ್ಡ್ ನ ಬಾಲೇ ನಾಯಕ್, ಪ್ರಶಾಂತ್, ಸೈಯದ್ ಸಿದ್ದೀಕ್, ನಾರಾಯಣಸ್ವಾಮಿ, ರವೀಂದ್ರ, ಮತ್ತಿತರರು ಹಾಜರಿದ್ದರು.