ನೂತನ ಪದಾಧಿಕಾರಿಗಳ ಪದಗ್ರಹಣ

348

ಬೆಂಗಳೂರು(ಮಹದೇವಪುರ):ನಗರದಲ್ಲಿ ಅತಿ ಹೆಚ್ಚು ಕೈಗಾರಿಕಾ ಪ್ರದೇಶ ಹೊಂದಿರುವ ಮಹದೇವಪುರ ಕ್ಷೇತ್ರದಲ್ಲಿ ಕನ್ನಡಿಗೆರಿಗೆ ಸೂಕ್ತ ಸ್ಥಾನ ಕಲ್ಪಿಸಿಕೊಡಲು ಎಲ್ಲಾ ಸಂಘಟನೆಗಳು ಮುಂದಾಗಬೇಕು  ಎಂದು ಪಾಲಿಕೆ ಸದಸ್ಯ ನಿತಿಷ್ ಪುರುಷೋತ್ತಮ್ ಕರೆ ನೀಡಿದರು.ಮಹದೇವಪುರ ಕ್ಷೇತ್ರದ ಗರುಡಾಚಾರ್ ಪಾಳ್ಯದ ಸರ್ಕಾರಿ ಸಂಯುಕ್ತ ಶಾಲೆಯಲ್ಲಿ ಆಯೋಜಿಸಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೈಗಾರಿಕಾಕರಣ ಹಾಗು ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಂಸ್ಥೆಗಳನ್ನು ಎತೇಚ್ಚವಾಗಿ ಹೊಂದಿರುವ ಮಹದೇವಪುರ ಕ್ಷೇತ್ರದಲ್ಲಿ ಕನ್ನಡಿಗರು  ಅನುಕೂಲ ಪಡೆದುಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ, ಉದ್ಯೋಗದಲ್ಲಿ ವಲಸಿಗರನ್ನೇ ಹೆಚ್ಚಾಗಿ ಸಂಸ್ಥೆಗಳು ತೊಡಗಿಸಿಕೊಳ್ಳುತ್ತಿವೆ, ಕನ್ನಡಿಗರಿಗೆ ಉದ್ಯೋಗ ನೀಡುವಲ್ಲಿ ಖಾಸಗಿ ಸಂಸ್ಥೆಗಳು ಇಚ್ಚಾಶಕ್ತಿವಹಿಸುತ್ತಿಲ್ಲ, ಕನ್ನಡಿಗರು ತಮ್ಮದೇ ನೆಲದಲ್ಲಿ ಆರ್ಥಿಕವಾಗಿ ಹಿಂದುಳಿಯುವಂತಾಗಿರುವುದು ಚಿಂತೆಹುಟ್ಟುವಂತಹ ವಿಚಾರವಾಗಿದ್ದು ಆದಷ್ಟು ಬೇಗ ಸರೋಜಿನಿ ಮಹಿಷಿ ವರದಿಯನ್ನು ಸಮಗ್ರವಾಗಿ ಜಾರಿಗೆ ತರುವ ಮೂಲಕ ಕನ್ನಡಿಗರಿಗೆ ಕೈಗಾರಿಕೆಗಳಲ್ಲಿ ಉದ್ಯೋಗ ಮೀಸಲಾತಿ ನೀಡಬೇಕಿದೆ, ಉದ್ಯೋಗ ಮೀಸಲಾತಿ ದೊರೆತರೆ ಕನ್ನಡಿಗರ ಜೀವನ ಸುಧಾರಣೆಗೊಳ್ಳಲಿದೆ ಎಂದರು. ಕ್ಷೇತ್ರದ ಜನತೆಗೆ ಗ್ರಂಥಾಲಯ, ಕನ್ನಡ ಭವನದ ಅವಶ್ಯವಿರುವುದು ಕಂಡು ಬಂದಿದೆ, ಕನ್ನಡತನದ ವೃದ್ಧಿಗೆ ಮತ್ತಷ್ಟು ಪ್ರೋತ್ಸಾಹ ನೀಡಲು ಕನ್ನಡ ಭವನದ ಅವಶ್ಯವಿದ್ದು, ಆದಷ್ಟು ಬೇಗ ಕನ್ನಡ ಭವನದ ನಿರ್ಮಾಣಕ್ಕೆ ಬಿಬಿಎಂಪಿ ಅನುದಾನದಲ್ಲಿ ಸರ್ಕಾರಿ ಸ್ಥಳ ಗುರುತಿಸಿ ಕಾಮಗಾರಿ ನಡೆಸಲಾಗುವುದೆಂದು ತಿಳಿಸಿದರು. ಇದೆ ವೇಳೆ ಮಾತನಾಡಿದ ಮಾಯಣ್ಣ ಕನ್ನಡದ ನೆಲದಲ್ಲಿ ಪರಕೀಯರು ಸಂಪತ್ತು ಲೂಟಿ ಹೊಡೆಯುತ್ತಿದ್ದಾರೆ, ಕನ್ನಡಿಗರು ಬಡವರಾಗಿಯೇ ಉಳಿಯುವುದಕ್ಕೆ ಕಸಾಪ ಬಿಡುವುದಿಲ್ಲ, ಪರಿಷತ್ನವತಿಯಿಂದ ಕೈಗಾರಿಕೆಗಳಿಗೆ ಮತ್ತು ಖಾಸಗಿ ಸಂಸ್ಥೆಗಳಿಗೆ ನೋಟಿಸ್ ಹೊರಡಿಸಿ ಉದ್ಯೋಗ ಮೀಸಲಾತಿ ಕೊಡುವಂತೆ ಆಗ್ರಹಿಸಲಾಗುವುದೆಂದು ತಿಳಿಸಿದರು. ಇದೆ ವೇಳೆ ಗರುಡಾ ಚರ್ ಪಾಳ್ಯದ ವಾರ್ಡ್ ಕಸಾಪ ಹೊಣೆಗಾರಿಕೆಯನ್ನು ಹೊತ್ತುಕೊಂಡ ನೂತನ ಅಧ್ಯಕ್ಷ ರಮೆಶ್ ಗೌಡರಿಗೆ ಅಭಿನಂದಿಸಿ ಕನ್ನಡಿಗರನ್ನು ಸಂಘಟಿಸಿ, ತೊಂದರೆ ಯಲ್ಲಿರುವವರಿಗೆ ಬೆನ್ನೆಲುಬಾಗಿ ನಿಂತುಕೊಳ್ಳಿ ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ನಿತಿಷ್ ಪುರುಷೊತ್ತಮ್, ಮರಿಲಿಂಗಯ್ಯ, ಉದ್ಯಮಿ ಚಂದ್ರಶೇಖರ್, ಯಲ್ಲಪ್ಪ, ನಾರಾಯಣ ಸ್ವಾಮಿ, ವೆಂಕಟೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.