ದ್ವಿಚಕ್ರ ವಾಹನ ಕಳ್ಳ ಅಂದರ್

567

ಚಿಕ್ಕಬಳ್ಳಾಪುರ/ ಚಿಂತಾಮಣಿ: ನಗರದ ಬಾಗೇಪಲ್ಲಿ ಕ್ರಾಸ್ ಬಳಿ ಹಿರೋ ಡ್ಯೂಯೆಟ್ ದ್ವಿಚಕ್ರ ವಾಹನ ದಲ್ಲಿ ಬರುತ್ತಿದ್ದವನು ಪೊಲೀಸ್ ರನ್ನು ಕಂಡು ಅಡ್ಡದಿಡ್ಡಿಯಾಗಿ ಗಾಡಿಚಲಾಯಿಸಿ ಪರಾರಿಯಾಗಳು ಮುಂದಾದಾಗ ಆಸಾಮಿಯನ್ನು ಹಿಡಿದು ನಗರ ಠಾಣೆ ಯಲ್ಲಿ ವಿಚಾರಿಸಿ ಬಾಯಿಬಿಡಿಸಿದಾಗ ಹೆಸರು ಎಸ್ ಎನ್ ನಾಗರಾಜ @ ರಾಜು ಬಿನ್ ಈರಪ್ಪ, 21ವರ್ಷ ಸಿಂಗಾನಹಳ್ಳಿ ಗ್ರಾಮ, ಗುಡಿಬಂಡೆ ತಾಲ್ಲೂಕು, ಎಂದು ತಿಳಿದು ಬಂದಿದೆ
ಚಿಕ್ಕಬಳ್ಳಾಪುರ ಜಿಲ್ಲೆಯ ಪೊಲೀಸ್ ಅಧೀಕ್ಷರಾದ ಎನ್ ಚೈತ್ರಾ ರವರ ನಿರ್ದೇಶನ ಮೇರೆಗೆ ಡಿವೈ ಎಸ್ ಪಿ ಶ್ರೀ ಕೃಷ್ಣಮೂರ್ತಿ ಮಾರ್ಗದರ್ಶನ ದಲ್ಲಿ ಸಿಐ, ಹನುಮಂತಪ್ಪ ನೇತೃತ್ವದಲ್ಲಿ ಕ್ರೈಂ,ಪಿಎಸ್ಐ ಸಿ.ಆರ್ ನರಸಿಂಹಮೂರ್ತಿ ಸಿಬ್ಬಂದಿ ದೇವರಾಜ, ಮುರಳಿ ಕೃಷ್ಣ, ಅರುಣ್ ಕುಮಾರ್ ಮತ್ತು ನರೇಶ್ ರವರನ್ನು ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಎರಡು ತಿಂಗಳಿನಿಂದ ಚಿಂತಾಮಣಿ ಸೇರಿದಂತೆ ಹೊಸಕೋಟೆ, ಬೆಂಗಳೂರಿನ ಆವಲಹಳ್ಳಿ ,ಕತ್ತರಿಗುಪ್ಪೆ ಕಡೆಗಳಲ್ಲಿ ಕದಿಯಲಾಗಿದ್ದ ದ್ವಿಚಕ್ರ ವಾಹನಗಳನ್ನು ಸಂಗ್ರಹಿಸಿ ಆರೋಪಿಯು ಚೇಳೂರು ರಸ್ತೆಯ ಹಳೇಯ ಮಿಲ್ ಹತ್ತಿರ ಗೋಡೌನ್ ಬಳಿ ಬಚ್ಚಿಟ್ಟಿದ್ದ ಸುಮಾರು 2,35 ಲಕ್ಷ ಬೆಲೆ ಬಾಳುವ 6 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ಜೈಲಿಗಟ್ಟಿದ್ದಾರೆ.