ನಕಲಿ ಒಡವೆ ವಂಚಕಿಯರ ಬಂಧನ

379

ಮಂಡ್ಯ/ಮಳವಳ್ಳಿ: ಬೆಂಗಳೂರಿನಿಂದ ಬಂದು ನಕಲಿ ವಡವೆಗಳನ್ನು ಗಿರಿವಿ ಅಂಗಡಿಗೆ ಗಿರಿವಿಟ್ಟು ವಂಚನೆ ಮಾಡುತ್ತಿದ್ದ ಮೂವರು ಮಹಿಳೆಯರನ್ನು ಬಂಧಿಸುವಲ್ಲಿ ಮಳವಳ್ಳಿ ಗ್ರಾಮಾಂತರ ಪೊಲೀಸರು ಯಶ್ವಸಿಯಾಗಿದ್ದಾರೆ. ಬೆಂಗಳೂರು ನಿವಾಸಿಗಳಾದ ಮಮ್ತಾಜ್ ತಾಜ್, ಅಯಿಸಾ, ರೇಷ್ಮಾಭಾನು, ಬಂಧಿತ ಆರೋಪಿಗಳು. ಮಳವಳ್ಳಿ ತಾಲ್ಲೂಕಿನ  ಮತ್ತಿತಾಳೇಶ್ವರ ದೇವಸ್ಥಾನದ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಮಹಿಳೆಯರನ್ನು ಗಸ್ತಿನಲ್ಲಿದ್ದ ಗ್ರಾಮಾಂತರ ವೃತ್ತ ಆರಕ್ಷಕ ನಿರೀಕ್ಷಕ ಆರ್. ಶ್ರೀಕಾಂತ್ ಹಾಗೂ ಗ್ರಾಮಾಂತರ ಅಪರಾಧ ವಿಭಾಗ ಸಬ್ ಇನ್ಸ್ಪೆಕ್ಟರ್ ಸಿದ್ದೇಗೌಡರು ವಿಚಾರಣೆಗೆ ಒಳಪಡಿಲಾಗಿ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಈ ವಂಚಕಿಯರು ಕೊಳ್ಳೇಗಾಲ ನಗರ ಹಾಗೂ ಇತರೆ ಕಡೆಗಳಲ್ಲಿಯೂ ನಕಲಿ ಚಿನ್ನದ ವಡೆವೆಗಳನ್ನು ಗಿರಿವಿವಿಟ್ಟು ಗಿರಿವಿದಾರರಿಗೆ ವಂಚನೆಮಾಡಿ ಅವರ ಹಣ ಪಡೆದಿರುವುದಾಗಿ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾರೆ. ಕಾಯಾ೯ಚರಣೆ ತಂಡದಲ್ಲಿಲ ಮುಖ್ಯ ಪೇದೆ ರಾಜು ಮಹಿಳಾ ಪೇದೆಗಳಾದ ಪೂಣಿ೯ಮ, ಹೇಮಲತಾ, ರುಕ್ಮಿಣಿ. ಪ್ರಭುಸ್ವಾಮಿ, ನಟರಾಜು, ರಿಯಾಜ್ ಪಾಷ, ಮೋಹನ್, ಕೃಷ್ಣ ಇದ್ದರು.