ಸೌಲಭ್ಯ ವಂಚಿತ ಮಾಂಗರವಾಡಿ ಜನರಿಗೆ ಬೇಕಿದೆ ಸಹಾಯ ಹಸ್ತ….

341

ಬಸವಕಲ್ಯಾಣ: ಪಕ್ಕದಲ್ಲೆ ಹರಿಯುವ ಚರಂಡಿ ಗಬ್ಬು ನಾತ, ಮನೆಯಲ್ಲಿ ಸೊಳ್ಳೆಗಳ ಕಾಟ, ಅಸ್ವಚ್ಚ ಪರಿಸರದಿಂದ ಹರಡುವ ಸಾಂಕ್ರಾಮಿಕ ರೋಗ, ಮಕ್ಕಳಿಗೆ ಸಿಗದ ಶಿಕ್ಷಣ, ಪ್ರಾಣಿಗಳು ವಾಸಿಸಲು ಯೊಗ್ಯವಿಲ್ಲದ ಸ್ಥಳದಲ್ಲಿ ಬದುಕು ಸಾಗಿಸುವ ಆ ಜನರ ಪಾಡು ಉಹಿಸುವದಕ್ಕೂ ಕಷ್ಟ ಎಂದರೆ ತಪ್ಪಾಗದು…!
ಇಂದಿನ ಆಧುನಿಕ ಯುಗದಲ್ಲಿಯೂ ಇಂಥದೊಂದು ವ್ಯವಸ್ಥೆಯಲ್ಲಿ ಜನ ವಾಸವಾಗಿದ್ದಾರೆ ಅಂತ ಕೇಳೋದಕ್ಕೂ ಕಷ್ಟವಾಗಬಹುದು.
ಹೌದು ಬಸವಕಲ್ಯಾಣ ನಗರದ ಹೃದಯ ಭಾಗದಲ್ಲಿಯೇ ಇರುವ ಈಶ್ವರ ನಗರದಲ್ಲಿ ಸಕಲ ಸೌಲಭ್ಯ ವಂಚಿತ ಜನಾಂಗ ಜವನ ಸವಿಸುತ್ತಿದ್ದಾರೆ. ಇವರು ಅದೇನು ಪಾಪ ಮಾಡಿದ್ದಾರೋ ಗೊತ್ತಿಲ್ಲ. ಆದರು ಅದು ಹೇಗೋ ನಡಿಯುತ್ತಿದೆ ಇವರ ಬದುಕು.
ಸರ್ಕಾರದ ಸೌಲಭ್ಯವೆಂದರೆ ಇವರಿಗೆ ಗೊತ್ತೆ ಇಲ್ಲ. ಚುನಾವಣೆ ಬಂದಾಗ ಮಾತ್ರ ಇವರ ಬಳಿಗೆ ಬರುವ ರಾಜಕೀಯ ಮುಖಂಡರು ಚುನಾವಣೆ ಮುಗಿದ ನಂತರ ಮತ್ತೆ ಇತ್ತಕಡೆ ಸೌಜನ್ಯಕ್ಕೂ ಭೇಟಿ ನೀಡುವದಿಲ್ಲ. ಇವರ ಸಮಸ್ಯೆ ಬಗ್ಗೆ ಅಧಿಕಾರಿಗಳಿಗೆ ಅರೀವಿದ್ದರು ಕೂಡ ಸಮಸ್ಯೆ ಬಗೇಹರಿಸಲು ಯಾವತ್ತು ಪ್ರಯತ್ನಿಸಿಲ್ಲ. ಬರೋಬ್ಬರಿ ನಾಲ್ಕು ದಶಕಗಳಿಂದ ಇಲ್ಲಿ ವಾಸಿಸುವ ಜನರು ಕನಿಷ್ಠ ಸೌಲಭ್ಯಕೂಡ ಕಂಡಿಲ್ಲ.
ಹೊರ ಜಗತ್ತಿನ ಸಂಪರ್ಕವಿಲ್ಲದೆ ವಾಸಿಸುವ ಮಾಂಗಾರವಾಡಿ ಬಡಾವಣೆಗೆ ಭೇಟಿನೀಡಿದಾಗ ಈ ಮೇಲೆ ಹೇಳಿರುವ ಸಂಗತಿಗಳ ಸಾಕ್ಷಾತ್ ದರ್ಶನ ಆಗುವದಂತು ಖಚಿತ. ಅಂತರಾಷ್ಟ್ರೀಯ ಪ್ರವಾಸಿ ಕೇಂದ್ರವಾಗಿ ಬೆಳೆಯುತ್ತಿರುವ ಬಸವಕಲ್ಯಾಣ ನಗರದಲ್ಲಿ ಇಂಥದೊಂದು ಬಡಾವಣೆ ಇರುವದು ನಿಜಕ್ಕೂ ನಾಚಿಕೆ ಪಡುವ ಸಂಗತಿ ಅಲ್ಲದೇ ಮತ್ತೆನು ಅಲ್ಲ.
ಸುಮಾರು 50ಕ್ಕೂ ಅಧಿಕ ಮಾಂಗಗಾರುಡಿ ಕುಟುಂಬಗಳು ಕಳೆದ ನಲವತ್ತು ವರ್ಷಗಳಿಂದ ಇಲ್ಲಿ ವಾಸಿಸುತ್ತಿವೆ. ಆದರೆ ಇದುವರೆಗೂ ಇವರಿಗೆ ಸ್ವಂತಕ್ಕಾಗಿ ಆರಡಿ, ಮುರಡಿ ಸ್ಥಳ ಸಿಕ್ಕಿಲ್ಲ. ಬಡವರಿಗಾಗಿಯೇ ಇರುವ ಎಲ್ಲರಿಗೂ ಸುರು ಎನ್ನುವ ಭಾಗ್ಯ ಇವರಿಗೆ ದಕ್ಕಿಲ್ಲ. ವಿಧವಾ ವೇತನ, ಸಂಧ್ಯಾ ಸುರಕ್ಷಾ ಯೋಜನೆಗಳು ಅದ್ಯಾರ ಪಾಲಾಗುತ್ತಿವೆ ಎಂದು ಗೊತ್ತಾಗುತಿಲ್ಲ. ಕುಡಿಯಲು ಹನಿ ನೀರಿಗೂ ಸಹ ಪಕ್ಕದ ಬಡಾವಣೆಗೆ ಆಶ್ರಯಿಸಬೇಕಾದ ಸ್ಥಿತಿ ಈ ಜನರಿಗೆ ತಪ್ಪುತಿಲ್ಲ.
ಇವರು ವಾಸಿಸುವ ಸ್ಥಳಕ್ಕೆ ಸಂಬಂಧಿಸಿದಂತೆ ವಿವಾದ ಇರುವದರಿಂದ ಪಕ್ಕಾ ಮನೆ ನಿಮರ್ಾಣಕ್ಕೆ ಸಾಧ್ಯವಾಗುತಿಲ್ಲ. ನಾಲ್ಕು ದಶಕಗಳಿಂದಲೂ ತಾತ್ಕಾಲಿಕ ಸೇಡ್ನಲ್ಲಿಯೇ ವಾಸ ಮಾಡುತಿದ್ದಾರೆ. ಮಳೆಗಾಲ ಬಂದಾಗ ಮಳೆ ನೀರಿನೊಂದಿಗೆ ಬಡಾವಣೆಯ ಚರಂಡಿ ಮನೆಯೊಳಗೆ ಸೇರುತ್ತವೆ. ಮಲಗಿಕೊಳ್ಳೊಕು ಜಾಗ ಇರಲ್ಲ. ಇಂಥ ವ್ಯವಸ್ಥೆ ಮಧ್ಯೆಯೇ ಅಡಿಗೆ ಮಾಡಿ ಊಟ ಮಾಡುತ್ತೆವೆ ಎನ್ನುತ್ತಾರೆ ಇಲ್ಲಿಯ ಮಹಿಳೆಯರು.
ಕಳೆದ ನಾಲ್ಕು ದಶಕದಿಂದ ಇಲ್ಲಿಯೇ ವಾಸವಿದ್ದರು ನಮ್ಮ ಹೆಸರಿಗೆ ನಿವೇಶನ ಮಂಜೂರಿಯಾಗಿಲ್ಲ. ಅಂದು (40 ವರ್ಷದ ಹಿಂದೆ) ನಮ್ಮ ಹೆಸರಿಗೆ ಜಾಗಾ ಮಾಡಿಕೊಡುವದಾಗಿ ಹೇಳಿ ಮೊಸ ಮಾಡಿದ್ದಾರೆ. ನಮಗೆ ಅಕ್ಷರ ಜ್ಞಾನ ಇಲ್ಲದಿರುವುದೆ ಈ ಎಲ್ಲ ಸಮಸ್ಯೆ ಕಾರಣವಾಗಿದೆ. ಈ ಸ್ಥಳ ನಮ್ಮದು, ನೀವು ಇಲ್ಲಿಂದ ಜಾಗಾ ಖಾಲಿ ಮಾಡಿ ಎಂದು ಪ್ರಭಾವಿ ವ್ಯಕ್ತಿಯೊಬ್ಬರು ಮೇಲಿಂದ ಮೇಲೆ ದಬ್ಬಾಳಿಕೆ ಮಾಡುತಿದ್ದಾರೆ. ಈ ಪ್ರಭಾವಿ ವ್ಯಕ್ತಿ ಮಾತು ಕೇಳಿ ನಗರ ಸಭೆ ಅಧಿಕಾರಿಗಳು ನಮಗೆ ಯಾವುದೇ ರೀತಿಯ ಸೌಲಭ್ಯ ಕಲ್ಪಿಸುತಿಲ್ಲ. ನಮ್ಮ ಸಮಸ್ಯೆಗೆ ಮುಕ್ತಿ ದೊರಕಿಸಿ, ಸಕಲ ಸೌಲಭ್ಯ ಕಲ್ಪಿಸಬೇಕು ಎಂದು ಬಡಾವಣೆ ಜನರ ಒಕ್ಕೋರಲಿನ ಕೂಗಾಗಿದೆ.
ನ್ಯಾಯ ಕಲ್ಪಿಸಿ: ನಮ್ಮ ಬಡಾವಣೆಯಲ್ಲಿ ಕನಿಷ್ಠ ಸೌಲಭ್ಯಗಳು ಇಲ್ಲ. ಮಕ್ಕಳಿಗೆ ಶಿಕ್ಷಣ ಸಿಗುತಿಲ್ಲ. ಅಕ್ಷರ ಜ್ಞಾನ ಇಲ್ಲದಿರುವದರಿಂದ ನಮ್ಮ ಜನರಿಗೆ ಯಾವುದೇ ಉದ್ಯೋಗ ಬರುವದಿಲ್ಲ. ಖಾಸಗಿ ಅಂಗಡಿಗಳಲ್ಲಿ ಕೆಲಸಕ್ಕೂ ಇಟ್ಟುಕೊಳ್ಳುವದಿಲ್ಲ. ಮನೆಯಲ್ಲಿ ಕಿತ್ತುತಿನ್ನೊ ಬಡತನ ಇರುವದರಿಂದ ಮಕ್ಕಳಿಗೆ ಶಿಕ್ಷಣ ಕಲ್ಪಿಸಲು ಸಾಧ್ಯವಾಗುತಿಲ್ಲ. ದಿನ ಬೆಳಗಾದರೆ ಮಕ್ಕಳ ಭವಿಷ್ಯದ್ದೆ ಚಿಂತೆಯಾಗಿದೆ. ಏನಾದರು ಮಾಡಿ ನಮ್ಮ ಜನರಿಗೆ ನ್ಯಾಯ ಕಲ್ಪಿಸಿಕೊಡಿ ಎನ್ನುತ್ತಾರೆ ಬಡಾವಣೆ ನಿವಾಸಿ ಸುನೀಲ ಬಾಬುರಾವ.

ಆಶ್ರಯ ಮನೆ ಮಂಜೂರು ಮಾಡಿ:
ನಾವು ಸುಮಾರು 40 ವರ್ಷಗಳಿಂದ ಇದೇ ಸ್ಥಳದಲ್ಲಿ ವಾಸವಿದ್ದೇವೆ. ನಮ್ಮಿಂದ ನಗರ ಸಭೆಯವರು ಕರ ವಸೂಲಿ ಮಾಡಿಕೊಳ್ಳುತ್ತಾರೆ. ಆದರೆ ನಾವಿರುವ ನಿವೇಶನ ನಮ್ಮ ಹೆಸರಿಗೆ ಮಾಡಿಕೊಡಿ ಎಂದರೆ ಮಾಡಿಕೊಡೊದಿಲ್ಲ. ಕನಿಷ್ಠ ಪಕ್ಷ ಮೂಲ ಸೌಕರ್ಯ ಕಲ್ಪಿಸಿಕೊಡಿ ಎಂದರು ಇತ್ತ ಕಡೆ ಗಮನ ಹರಿಸಲ್ಲ. ಇಲ್ಲಿಯ ಸಮಸ್ಯೆಗಳ ಕುರಿತು ಅನೇಕಬಾರಿ ನಗರ ಸಭೆ ಅಧಿಕಾರಿಗಳ ಗಮನಕ್ಕೆ ತಂದರು ಪ್ರಯೊಜನೆ ಯಾಗಿಲ್ಲ. ಈಗಲಾದರು ಅಧಿಕಾರಿಗಳು ಸ್ಥಳದ ವಿವಾದ ಬಗೇಹರಿಸಿ, ನಮಗೆ ಸರ್ಕಾರ ದಿಂದ ಆಶ್ರಯ ಮನೆ ಮಂಜೂರಿ ಮಾಡಿಕೊಡಬೇಕು. ವಿವಾದ ಬಗೇಹರಿಯದಿದ್ದರೆ ಬೇರೆ ಸ್ಥಳದಲ್ಲಿ ಜಮಿನು ಖರಿದಿಸಿ ಸರ್ಕಾರ ದಿಂದ ನಿವೇಶನ ಕಲ್ಪಿಸಬೇಕು… ರವಿ ಮಾಂಗಗಾರುಡಿ

ಸಚಿವರು ಗಮನ ಹರಿಸುತ್ತಾರಾ?
ಸಕರ್ಾರ ಸೌಲಭ್ಯಗಳಿಂದ ವಂಚಿತ ರಾಗಿರುವ ಪಾದರಿ ಜನಾಂಗಕ್ಕೆ ಸರ್ಕಾರ ಸಹಾಯ ಹಸ್ತದ ಅಗತ್ಯವಿದ್ದು, ಇಲ್ಲಿಯ ಜನರಿಗೆ ಅಗತ್ಯವಿರುವ ನಿವೇಶನ, ಆಶ್ರಯ ಮನೆ ಮಂಜೂರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಗಮನ ಹರಿಸಬೇಕಾಗಿದೆ. ಪೌರಾಡಳಿತ ಖಾತೆ ಸಚಿವ ಈಶ್ವರ ಖಂಡ್ರೆ ಅವರು ಜಿಲ್ಲೆಯವರಾಗಿರುವದರಿಂದ ಅಧಿಕಾರಿಗಳ ಗಮನಕ್ಕೆ ತಂದು ಜನರಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು, ಈ ಬಗ್ಗೆ ಸಚಿವರು ಮನಸ್ಸು ಮಾಡಬೇಕಾಗಿದೆ.