ಅಕ್ರಮ ಮದ್ಯಮಾರಾಟ ಅಧಿಕಾರಿಗಳಿಂದ ದಾಳಿ

300

ಮಂಡ್ಯ/ ಮಳವಳ್ಳಿ: ಪೆಟ್ಟಿ ಅಂಗಡಿಗಳಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಸುಮಾರು 10 ಸಾವಿರ ರೂ ಗೂ ಹೆಚ್ಚು ಬೆಲೆ ಬಾಳುವ ಮದ್ಯವನ್ನು ವಶಪಡಿಸಿಕೊಂಡು ಪ್ರತ್ಯೇಕ   ಪ್ರಕರಣದಲ್ಲಿ ನಾಲ್ವರನ್ನು ಬಂಧಿಸುವಲ್ಲಿ  ಮಳವಳ್ಳಿ ತಾಲ್ಲೂಕಿನ ಹಲಗೂರು ಪೊಲೀಸರು ಯಶ್ವಸಿಯಾಗಿದ್ದಾರೆ. ಹಲಗೂರು ಪಿಎಸ್ ಐ ಶ್ರೀಧರ್  ಹಾಗೂ ಸಿಬ್ಬಂದಿ ಮಳವಳ್ಳಿತಾಲ್ಲೂಕಿನ ಅಂತರಹಳ್ಳಿ ಹಾಗೂ ಡಿ .ಹಲಸಹಳ್ಳಿ ಗ್ರಾಮದ ಪೆಟ್ಟಿಅಂಗಡಿಗಳಲ್ಲಿ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿರುವ ಬಗ್ಗೆ  ಖಚಿತ ಮಾಹಿತಿಯೊಂದಿಗೆ ದಾಳಿ ನಡೆಸಿ ಸುಮಾರು 10 ಸಾವಿರ ರೂ ಗೂ ಹೆಚ್ಚು ಮದ್ಯವನ್ನು ವಶಪಡೆಸಿಕೊಂಡು ಅಂತರಹಳ್ಳಿ ಗ್ರಾಮದಲ್ಲಿ ಮೂವರು ಹಾಗೂ ಡಿ.ಹಲಸಹಳ್ಳಿ ಗ್ರಾಮದಲ್ಲಿ ಒಬ್ಬನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ