ದಲಿತ ವಿದ್ಯಾರ್ಥಿ ಸಾವಿನ ಪ್ರಕರಣವನ್ನು ಸಿಒಡಿ.ಗೆ ಒಪ್ಪಿಸುವಂತೆ ಒತ್ತಾಯ

284

ಚಿಕ್ಕಬಳ್ಳಾಪುರ/ಗುಡಿಬಂಡೆ: ನಗರದ ಸರ್ಕಾರಿ ಪ್ರೌಢಶಾಲೆಯ ೯ನೇ ತರಗತಿ ವಿದ್ಯಾರ್ಥಿ ಆರ್.ಚೊಕ್ಕನಹಳ್ಳಿ ಗ್ರಾಮದ ಮುರುಳಿ ಸಾವನ್ನು ಆತ್ಮಹತ್ಯೆ ಎಂದುಬಿಂಬಿಸಲಾಗಿದೆ. ಆದರೆ ಆತನನ್ನು ಕೊಲೆ ಮಾಡಲಾಗಿದ್ದು ಸರ್ಕಾರ ಕೂಡಲೇ ಪ್ರಕರಣವನ್ನು ಸಿಒಡಿ ತನಿಖೆಗೆ ನೀಡಬೇಕು ಎಂದು ದಲಿತ ಸಂಘರ್ಷ ಸಮಿತಿ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿತ ನಗರದ ಮುಖ್ಯರಸ್ತೆಯಲಿ ಬೃಹತ್ ಮೆರವಣಿಗೆ ನಡೆಸಿದ ಕಾರ್ಯಕರ್ತರು ಪೊಲೀಸ್ ಇಲಾಖೆ ಮತ್ತುಸರ್ಕಾರದ ವಿರುದ್ಧ ಧಿಕ್ಕಾರ,ಘೋಷಣೆ ಕೂಗಿದರು,  ಕೂಗಿದರು. ನಂತರ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಚೈತ್ರಾ  ಪ್ರತಿಭಟನಾಕಾರರಿಂದ ಮನವಿ ಪತ್ರಸ್ವೀಕರಿಸಿದರು. ಈ ವೇಳೆ ವದ್ಯಾರ್ಥಿ ಮುರುಳಿ ಸಾವಿನ  ಪ್ರಕರಣದ  ತನಿಖಾ ನೇತೃತ್ವವನ್ನುತಾನೆ  ವಹಿಸಿಕೊಳ್ಳುವುದಾಗಿ  ಆಶ್ವಾಸನೆ ನೀಡಿದ್ದಾರೆ ತಾಲೂಕು ಕಚೇರಿ ಆವರಣದಲ್ಲಿ ಈ ಕುರಿತು ನಡೆದ ಭಾರಿಬಹಿರಂಗ ಸಭೆಯಲ್ಲಿ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಯೋಜಕ ಎನ್. ವೆಂಕಟೇಶ್ ಮನುಷ್ಯ ಮತ್ತು ಸಮಾಜ ಆಧುನೀಕರಣಗೊಂಡಷ್ಷು ಮಾನವೀಯವಾಗುವ ಬದಲು ಮತ್ತಷ್ಟು ಜಾತಿವಾದಿಯಾಗುತ್ತಾ ಹೋಗುತ್ತಿರುವುದು ಹಾಗೂ ಕರಾಳರೂಪವನ್ನು ನೇರವಾಗಿಯೇ ಪ್ರದರ್ಶಿಸುತ್ತಿರುವುದು ಎಲ್ಲರನ್ನೂ ತಳಮಳ ಗೊಳಿಸುತ್ತಿದೆ. ಕರ್ಮಸಿದ್ದಾಂತದ ಮತ್ತು ವರ್ಣಾಶ್ರಮದ ಶ್ರೇಣೀಕೃತ ವ್ಯವಸ್ಥೆಯ ಸಮರ್ಥನೆಯ ಹಿನ್ನೆಲೆಯಲ್ಲಿ ಈ ಕೊಲೆ, ಅತ್ಯಾಚಾರ ಹಲ್ಲೆಗಳು ತಾನಾಗಿಯೇ ಮಾನ್ಯತೆ ಪಡೆದುಕೊಳ್ಳುತ್ತಿವೆ. ಜಾತಿ ವ್ಯವಸ್ಥೆ ದೇಶದ ಎಲ್ಲಾ ಬಗೆಯ ಮಾನವೀಯ ಮೌಲ್ಯಗಳನ್ನು ದ್ವಂಸ ಗೊಳಿಸುತ್ತಿದೆ. ಕ್ಷುಲ್ಲಕ ಕರಾಣಗಳಿಗಾಗಿ ದಲಿತರನ್ನು ಹತ್ಯೆ ಮಾಡಲಾಗುತ್ತಿದೆ. ಈಗ ಇದು ಶಾಳೆಗಳನ್ನು ಪ್ರವೇಶಿಸಿ ಓದುವ ದಲಿತ ಮಕ್ಕಳನ್ನು ಬಲಿ ತೆಗೆದುಕೊಳ್ಳುತ್ತಿರುವುದು ಅಘಾತಕಾರಿ ಗುಡಿಬಂಡೆ ವಿದ್ಯಾರ್ಥಿ ಮುರಳಿ ಕೊಲೆ ಇದಕ್ಕೊಂದು ನಿದರ್ಶನ ಎಂದರು. ಆದ್ದರಿಂದ ಸತ್ಯಾ ಸತ್ಯತೆಗಳನ್ನು ತಿಳಿಯಲು ಪ್ರಕರಣವನ್ನು ಸಿಓಡಿಗೆ ವಹಿಸಲೇ ಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ದ.ಸಂ.ಸ ಜಿಲ್ಲಾ ಸಂಚಾಲಕ ಬಿ.ವಿ.ಆನಂದ್, ಹಿರಿಯ ಮುಖಂಡ ಎನ್. ಮುನಿಸ್ವಾಮಿ, ಕೊಟ್ಟಾಶಂಕರ್, ದೊಡ್ಡಹಳ್ಳಿ ನರಸಿಂಹಮೂರ್ತಿ, ದಲಿತ ಕವಿ ಗೊಲ್ಲಹಳ್ಳಿ ಶಿವಪ್ರಸಾದ್, ದಲಿತ ದಮನಿತರ ಸ್ವಾಭಿಮಾನ ಹೋರಾಟ ಸಮಿತಿಯ ಬಿ.ಆರ್. ಭಾಸ್ಕರ್ ಪ್ರಸಾದ್, ಹುಲಿಕುಂಟೆ ಮೂರ್ತಿ, ದಿನೇಶ್, ಕರ್ನಾಟಕ ಜನಶಕ್ತಿ ಯ ಹೆಚ್.ವಿ.ವಾಸು, ಗೌರಿ, ಪ್ರಗತಿಪರ ಚಿಂತಕ ಹಾ.ಮ.ರಾಮಚಂದ್ರ, ಅಮ್ ಆದ್ಮಿ ಪಾರ್ಟ್ ಯ ಮೋಹನ್ ದಾಸರಿ, ಡಿವೈಎಫ್ಐನ ಕೃಷ್ಣರೆಡ್ಡಿ, ಡಾ. ಅನಿಲ್ ಕುಮಾರ್, ಹರ್ಷಕುಮಾರ್, ಜಿಲ್ಲಾ ಪಂಚಾಯತಿ ಸದಸ್ಯ ದಲಿತ ಮುಖಂಡ ಕೆ.ಸಿ.ರಾಜಾಕಾಂತ್, ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಸದಸ್ಯರು ಪ್ರತಿಭಟನಾ ಮೆರವಣಿಗೆ ಹಾಗೂ ಬಹಿರಂಗ ಸಭೆಯಲ್ಲಿ ಭಾಗವಹಿಸಿದ್ದರು.