ಬೇಜವಾಬ್ದಾರಿ ಅಧಿಕಾರಿಗಳಿಗೆ ಬುದ್ದಿ ಕಲಿಸೋರು ಯಾರು?

463

ಬೆಂಗಳೂರು(ಕೆಆರ್ ಪುರ):  ಮಳೆ ಬೆಳೆ ಇಲ್ಲದೆ ಬರಗಾಲ ಬಂದು ಗ್ರಾಮೀಣ ಪ್ರದೇಶದ ಜನ ತತ್ತರಿಸಿ ಹೋಗಿದ್ದಾರೆ, ಕನಿಷ್ಟ ಕುಡಿಯುವ ನೀರು ಇಲ್ಲದೆ ಪರದಾಡುತ್ತಿದ್ದರೆ ಈ ಭವಣೆಯನ್ನು ನೀಗಿಸ ಬೇಕಾದ ಅಧಿಕಾರಿಗಳು ಮಾತ್ರ ತಮಗಿಷ್ಟ ಬಂದಂತೆ ಸರ್ಕಾರಿ ಕೆಲಸವನ್ನು ತಮಗಿಷ್ಟ ಬಂದಂತೆ ದುರುಪಯೋಗ ಪಡೆಸಿಕೊಳ್ಳುವ ಅಧಿಕಾರಿಗಳು. ಘಂಟೆ ೧೧ ಆದರೂ ಯಾಒಬ್ಬ ಅಧಿಕಾರಿಯೂ ಕಚೇರಿಗೆ ಆಗಮಿಸಿಲ್ಲ, ಎಲ್ಲಾ ಕುರ್ಚಿಗಳು ಖಾಲಿ ಖಾಲಿ ಹೇಳೋರಿಲ್ಲ ಕೇಳೋರಿಲ್ಲ . ತಡವಾಗಿ ಬಂದಿದ್ದನ್ನು ಕೇಳಿದರೆ ಹಾರಿಕೆ ಉತ್ತರ ನೀಡಿ ನುಳಿಚಿಕೊಳ್ಳುವ ಇವರು. ತಡವಾಗಿ ಬರಲು ಕಾರಣ ಏನು ಎಂದರೆ ಟ್ರಾಪಿಕ್ ಜಾಮ್, ಆ ರಾಜಕಾರಣಿ ಕರೆದಿದ್ದರು, ಈ ರಾಜಕಾರಣಿ ಕರೆದಿದ್ದರು ಹಾಗಾಗಿ ತಡವಾಯಿತೆಂದು ಸಬೂಬು ನೀಡುವ ಇವರು ಗ್ರಾಮೀಣ ನೀರು ಸರಭರಾಜು ಇಲಾಖೆ ಕಚೇರಿಗೆ ಪ್ರಮುಖರಾದ ಎಇಇ ಗೋಪಾಲ್ ರವರೇ 11 ಘಂಟೆ ನಂತರ ಬಂದರೆ ಅವರ ಕೆಳಗಿರುವ ಅಧಿಕಾರಿಗಳ ಸ್ಥಿತಿ ಹೇಗಿರ ಬಹುದು, ಹಾಗಾಗಿಯೇ ಎಲ್ಲಾ ಸಿಬ್ಬಂದಿಯ ಮತ್ತು ಅಧೀಕಾರಿಗಳ ಪರವಾಗಿ ಮಾತನಾಡಿದ ಗೋಪಾಲ್ ಅವರ ಕೆಳ ಅಧಿಕಾರಿಗಳಾದ ಎಇ ಶಂಕರಪ್ಪ ಮತ್ತು ಶ್ರೀರಾಮ್ ಶಟ್ಟರ್ ರವರು ಸೈಟ್ಗೆ ಹೋಗಿದ್ದಾರೆ ಎಂದರು, ಜಾರಕೊಳ್ಳುವ ಪ್ರಯತ್ನ ಮಾತ್ರವಲ್ಲದೆ ಜಿಲ್ಲಾ ಪಂಚಾಯತಿ ಸದಸ್ಯರ ಮನೆಗಳ ಬಳಿ ಇದ್ದಾರೆ ಎಂದರು ಆಗ ಸಂಬಂದ ಪಟ್ಟ ಜಿಲ್ಲಾ ಪಂಚಾಯತಿ ಸದಸ್ಯರಾದ ಕೆಂಪರಾಜ್ ಮತ್ತ ಗಣೇಶ್ ರವರನ್ನು ದೂರವಾಣಿ ಮೂಲಕ ಸಂಪರ್ಕಿಸಿದರೆ ನಾವು ಯಾರನ್ನು ಕರೆದಿಲ್ಲ ಅವರು ಏಕೆ ಬಂದಿದ್ದರು ಅಥವಾ ಬಂದರಾ ಬಂದಿಲ್ವಾ ಎಂಬ ಬಗ್ಗೆಯೂ ಮಾಹಿತಿ ಇಲ್ಲ ಎಂದಿದ್ದಾರೆ. ಇನ್ನು ಜಿಲ್ಲಾ ಪಂಚಾಯತಿ ಕಚೇರಿಯಲ್ಲಿ 10 ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದು ಯಾರೋಬ್ಬರೂ ಇರಲಿಲ್ಲ, 11.15 ಕ್ಕೆ ಒಬ್ಬ ಎಸ್ಡಿಎ ಮಾತ್ರ ಆಗಮಿಸಿ ತಮ್ಮಷ್ಟಕ್ಕೆ ತಾವು ಕೆಲಸ ಆರಂಬಿಸಿದ್ದಾರೆ, ಆದರೆ ಸಹಿ ಹಾಕಲೂ ಸಹ ಅವರಿಗೆ ಪುಸ್ತಕ ಇರಲಿಲ್ಲ, ಅಧಿಕಾರಿಗೆ ಬೇಟಿ ಮಾಡಿದರೆ ನಾನು ಬನಶಂಕರಿಗೆ ಮೀಟಿಂಗ್ ಇರುವ ಕಾರಣ ಹೋರಟಿದ್ದೇನೆ ಎಂದರು, ಒಬ್ಬ ಅಧೀಕಾರಿ ಕಚೇರಿಯಿಂದ ತೆರಳ ಬೇಕಾದರೆ ಮೂಮೆಂಟ್ ರಿಜಿಸ್ಟರ್ ಇಡ ಬೇಕು ಅದರಲ್ಲಿ ಬರೆದಿಡ ಬೇಕು ಇದೆಲ್ಲವನ್ನು ಗಾಳಿಗೆ ತೂರಿರುವ ಅಧಿಕಾರಿಗಳು ತಮಗಿಷ್ಟ ಬಂದಂತೆ ಕೆಲಸ ನಿರ್ವಹಿಸುತ್ತಿದ್ದಾರೆ. 15 ಅಧಿಕಾರಿಗಳ ಪೈಕಿ ಯಾರೊಬ್ಬರೂ ಇಲ್ಲದಿರುವುದು ವಿಪರಿಯಾಸ, ಕೂಡಲೆ ಹಿರಿಯ ಅಧೀಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಜರುಗಿಸುತ್ತಾರ ಅನ್ನುದನ್ನು ಕಾದು ನೋಡಬೇಕು.