ವಿಷಾಹಾರ ಸೇವನೆ ನಾಲ್ಕು ಹಸುಗಳು ಸ್ಥಳದಲ್ಲೇ ಸಾವು

266

ಚಾಮರಾಜನಗರ/ಕೊಳ್ಳೇಗಾಲ: ವಿಷಾಹಾರ ಆಹಾರ ಸೇವನೆ ಹಿನ್ನೆಲೆಯಲ್ಲಿ ನಾಲ್ಕು ಹಸುಗಳು ಸ್ಥಳದಲ್ಲೇ ಸಾವನ್ನಪಿರುವ ಘಟನೆ ತಾಲ್ಲೂಕಿನ ಮಧುವನಹಳ್ಳಿ ಗ್ರಾಮದಲ್ಲಿ ನಡೆದಿದೆ. ಲೊಕ್ಕನಹಳ್ಳಿ ರಸ್ತೆಯಲ್ಲಿರುವ ಪುಟ್ಟಬಸವಯ್ಯ ರವರ. ಜಮೀನಿನ ಮನೆಯಲ್ಲಿ ಸುಮಾರು ಎರಡು ಲಕ್ಷ ಮೌಲ್ಯದ ನಾಲ್ಕು ಹಸುಗಳು ಸಾವನ್ನಪ್ಪಿವ ಪುಟ್ಟಬಸವಯ್ಯ ಎಂದಿನಂತೆ ಮುಂಜಾನೆ ಹಸುಗಳಿಗೆ ಆಹಾರ ನೀಡಿದ್ದಾರೆ. ಸ್ವಲ್ಪ ಸಮಯದ ನಂತರ ಇದಕ್ಕಿದಂತೆ ಹಸುಗಳು ಕೆಳಗೆ ಬಿದ್ದು ಒದ್ದಾಡಿ ಮೃತ ಪಟ್ಟಿವೆ ಎಂದು ಪುಟ್ಟಬಸವಯ್ಯ ತಿಳಿಸುತ್ತಾರೆ. ಸ್ಥಳಕ್ಕೆ ಆಗಮಿಸಿದ ಹನೂರು ಶಾಸಕ ಆರ್.ನರೇಂದ್ರ ರವರು ಸರ್ಕಾರದಿಂದ ಬರುವ ಪಶುಭಾಗ್ಯದ ಯೋಜನೆಯಲ್ಲಿ ಹಸುಗಳನ್ನು ನೀಡುವುದಾಗಿ ಬರವಸೆ ಹಸು ಕಳೆದುಕೊಂಡ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ತಾ.ಪಂ ಅಧ್ಯಕ್ಷ ರಾಜು,ತಹಶೀಲ್ದಾರ್ ಕಾಮಾಕ್ಷಮ್ಮ, ವೃತ್ತ ನೀರಿಕ್ಷಕ ಅಮರ ನಾರಾಯಣ್,ಉಪನೀರಿಕ್ಷಕ ವನರಾಜು, ಪಶು ಇಲಾಖೆಯ ಜಿಲ್ಲಾ ಉಪನಿರ್ದೇಶಕ ಡಾ.ಬಾಲಸುಂದರ್ ಸ್ಥಳಕ್ಕೆ ಭೇಟಿ ನೀಡಿದ್ದರು