ರಸ್ತೆಯಲ್ಲಿಯೇ ಮಗುವಿಗೆ ಜನ್ಮ ನೀಡಿದ ತಾಯಿ

432

ರಾಯಚೂರು/ ಮಾನ್ವಿ :ನಗರದ ಬಸವೇಶ್ವರ ವೃತ್ತದಲ್ಲಿ ಗಭಿ೯ಣಿ ಮಹಿಳೆ ರಸ್ತೆಯಲ್ಲೆ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಜರುಗಿದೆ. ಗಬಿ೯ಣಿ ಮಹಿಳೆ ರಾಯಚೂರಿನ ರಿಮ್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಸ್ಸಿನಲ್ಲಿ ತೆರಳಿ ಮಾನ್ವಿಯ ಬಸವೇಶ್ವರ ವೃತ್ತದಲ್ಲಿ ಇಳಿಯುತ್ತಿದ್ದಂತೆ ಯಲ್ಲಮ್ಮಳಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಅದೇ ಸಮಯಕ್ಕೆ ಆ ಸ್ಥಳಕ್ಕ ಬಂದ ಬಿಕ್ಷಕಿಯೊಬ್ಬರು ಸಹಾಯಕ್ಕೆ ಧಾವಿಸಿ ಹೆರಿಗೆ ರಸ್ತೆಯಲ್ಲಿ ಹೆರಿಗೆ ಮಾಡಿದ್ದಾರೆ. ಇನ್ನು ಅದೇ ರಸ್ತೆಯಲ್ಲಿ ಓಡಾಡುತ್ತಿದ್ದ ಸಾವ೯ಜನಿಕರು, ಔಷಧ ಅಂಗಡಿಯವರು ಸಹಾಯಕ್ಕೆ ಧಾವಿಸಿ ಮಾನವೀಯತೆ ಮೆರೆದಿದ್ದಾರೆ. ಇನ್ನು ತಾಯಿ ಯಲ್ಲಮ್ಮ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ತಾಯಿ ಮಗು ಆರೊಗ್ಯವಾಗಿದ್ದಾರೆ. ಸದ್ಯಕ್ಕೆ ಮಾನ್ವಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.