ಬಿಜೆಪಿ ವಾರ್ಡ್ ಕಚೇರಿಯ ಉದ್ಘಾಟನೆ

521

ಬೆಂಗಳೂರು/ಕೃಷ್ಣರಾಜಪುರ: ಉತ್ತರ ಪ್ರದೇಶದ ಚುನಾವಣೆ ಫಲಿತಾಂಶವು ಬಿಜೆಪಿ ಪಕ್ಷದ ಸಂಘಟನೆಗೆ ಮತ್ತು ಕಾರ್ಯಕರ್ತರಿಗೆ ಪ್ರೇರಣೆಯಾಗಿದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ತಿಳಿಸಿದರು.

ಇಲ್ಲಿನ ದೇವಸಂದ್ರ ವಾರ್ಡಿನ ಬಿ.ನಾರಾಯಣಪುರದಲ್ಲಿ ವಾರ್ಡ್ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಉತ್ತರ ಪ್ರದೇಶದ ಚುನಾವಣೆ ಫಲಿತಾಂಶವು ರಾಜ್ಯ ರಾಜಕಾರಣದ ಮೇಲೆ ಫ್ರಭಾವ ಬೀರಲಿದೆ. ಕಾಂಗ್ರೇಸ್ ಮುಕ್ತ ದೇಶಕ್ಕೆ ನಾಂದಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.  ಪ್ರಧಾನಿ ಮೋದಿಯವರು ಜಾರಿಗೆ ತಂದಿರುವ ಜನಪರ ಯೋಜನೆಗಳು ಹಾಗು ಅವರ ನಿರ್ಧಾರಗಳ ಬಗ್ಗೆ ಜನ ಸಾಮಾನ್ಯರಿಗೆ ಸೂಕ್ತ ರೀತಿಯಲ್ಲಿ ಅರಿವು ಮೂಡಿಸಿ ಸಂಘಟನೆಗೆ ಬಲ ಪಡಿಸಲು ಕಾರ್ಯಕತರ್ಯರು ಶ್ರಮಿಸಬೇಕೆಂದು ಹೇಳಿದರು.

ಕಾಂಗ್ರೇಸ್ನ ಕೈಗೊಂಬೆಗಳಾಗಿ ವರ್ತಿಸುತ್ತಿರುವ ಪೊಲೀಸ್ ಅಧಿಕಾರಿಗಳು ಬಿಜೆಪಿ ಕಾರ್ಯಕರ್ತರನ್ನು ಹೀನಾಯ ರೀತಿಯಲ್ಲಿ ವರ್ತಿಸುತ್ತಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದರು. ರಾಜ್ಯ ಸರಗಕಾರದ ಕೈಗೊಂಬೆಯಾಗಿರುವ ಅಧಿಕಾರಿಗಳು ಅಪರಾಧ ಚಟುವಟಿಕೆ ನಿಯಂತ್ರಿಸುವಲ್ಲಿ ವಿಫಲವಾಗಿದ್ದಾರೆ ಎಂದರು.
ಕೆಆರ್ ಪುರ ಶಾಸಕರ ದ್ವೇಶದ ರಾಜಕಾರಣ ಎಂದಿಗೂ ಶಾಶ್ವತವಲ್ಲ ಇದುವರೆಗೆ ದ್ವೇಶ ರಾಜಕಾರಣ ಮಾಡಿರುವವರು ಮೂಲೆ ಗುಂಪಾಗಿರುವುದು ಇತಿಹಾಸ ಪುಟ ಸೇರಿದೆ.ಈ ಪ್ರಕ್ರಿಯೆ ಇಲ್ಲಿಯೂ ನಡೆಯಲಿದೆ ಎಂದರು.

ಕಾಂಗ್ರೇಸ್ ಸರ್ಕಾರದ ದಬ್ಬಾಳಿಕೆಗೆ ಕಾರ್ಯಕರ್ತರು ಹೆದರುವ ಅವಶ್ಯವಿಲ್ಲ ಮುಂದಿನ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಗುಡುಗಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ನಂದೀಶ್ ರೆಡ್ಡಿ, ಪಾಲಿಕೆ ಸದಸ್ಯೆ ಪೂರ್ಣಿಮಾ ಶ್ರೀನಿವಾಸ್, ಕ್ಷೇತ್ರಾಧ್ಯಕ್ಷ ಚಿದಾನಂದ, ವಾರ್ಡ ಅಧ್ಯಕ್ಷ ನಾಗೇಶ್ವರ್ರಾವ್, ಮುಖಂಡರಾದ ಸಚ್ಚಿದಾನಂದ ಮೂರ್ತಿ, ಸುಂದರ್. ಭಕ್ತಪಾಲ್ ಹಾಗೂ ಮಾಜಿ ಪಾಲಿಕೆ ಸದಸ್ಯರು ಮತ್ತಿತರರಿದ್ದರು.