ರಂಗು ರಂಗಿನ ಹೋಳಿ ಹಬ್ಬ, ಮಿಂದೆದ್ದ ಜನತೆ

264

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ: ನಗರ ಸೇರಿದಂತೆ ತಾಲ್ಲೂಕಿನ ವಿವಿಧ ಹಳ್ಳಿಗಳಲ್ಲಿ ಹೋಳಿ ಹಬ್ಬವನ್ನು ರಂಗು ರಂಗಿನ ಹಬ್ಬವಾಗಿ ಆಚರಣೆ ಮಾಡಿದರು. ಕಾಮನ ಹುಣ್ಣಿಮೆ ವಸಂತ ಹುಣ್ಣಿಮೆ ಹೋಳಿ ಹುಣ್ಣಿಮೆ ಮುಂತಾದ ಹೆಸರುಗಳಿಂದ ಕರೆಯಲ್ಪಡುವ ಬಣ್ಣಗಳ ಹಬ್ಬದಲ್ಲಿ ಶಿಡ್ಲಘಟ್ಟದ ಜನತೆ ಮಿಂದೆದ್ದರು. ಹೋಳಿ ಹಬ್ಬದ ಹಿಂದೆ ಪ್ರಕೃತಿಯ ಋುತು ಪರಿವರ್ತನೆಯ ರಹಸ್ಯವು ಅಡಗಿದೆ. ಋುತು ಪರಿವರ್ತನೆಯ ವೇಳೆಯಲ್ಲಿ ಯಾವ ರೋಗ ಉಂಟಾಗುವುದೋ ಅವುಗಳನ್ನು ನಿವಾರಿಸಲು ವಿಘ್ನಬಾಧೆಗಳನ್ನು ನಿವಾರಿಸುವ ಘಟನೆಗಳು ಅಡಗಿಕೊಂಡಿವೆ. ಹಾಗೂ ಜನರಲ್ಲಿ ಸಾಮರಸ್ಯ ಸ್ವತಂತ್ರ ಸ್ವಚ್ಛಂದ ವಾತಾವರಣ ದೇಹದಲ್ಲಿ ನೂತನ ಚೈತನ್ಯ ಹೊರಹೊಮ್ಮುವುದು.
ಸೂರ್ಯನ ಕಿರಣಗಳು ನಮ್ಮ ಚರ್ಮದ ಮೇಲೆ ನೇರವಾಗಿ ಬೀಳುತ್ತವೆ. ಇದರಿಂದ ಶರೀರದಲ್ಲಿ ಕಾವು ಹೆಚ್ಚಾಗಿ ಸಿಟ್ಟು ಹೆಚ್ಚಾಗುವುದು ಖಿನ್ನತೆಯೂ ಬರುವುದು ನಮ್ಮ ಶರೀರದ ಸೆಜಿಯನ್ನು ಸಹಿಸುವ ಕ್ಷಮತೆಯ ಹೆಚ್ಚಾಗಲಿ ಎಂದು ಮುತ್ತಗದ ಪುಷ್ಪಗಳನ್ನು ನೆನೆ ಹಾಕಿ ಬಣ್ಣ ಆಡುವರು ಪದ್ಧತಿ ಹಿಂದಿನ ಕಾಲದಲ್ಲಿತ್ತು. ಆದರೆ ಇಂದು ರಸಾಯನಿಕ ಮಿಶ್ರಿತ ಬಣ್ಣ ಎರಚುವುದೇ ಹೆಚ್ಚಾಗಿ ಕಂಡುಬರುತ್ತಿತ್ತು ಇದು ಆರೋಗ್ಯದ ಮೇಲೆ ದುಷ್ಟರಿಣಾಮ ಉಂಟು ಮಾಡುತ್ತದೆ..ಮುತ್ತುಗದ ಪುಷ್ಪಗಳ ಬಣ್ಣ ಕಫ ನಿವಾರಕ ಹಾಗೂ ಮುತ್ತಗದ ಎಲೆಯಿಂದ ಮಾಡಿದ ತಾಟಿನಲ್ಲಿ ಊಟ ಆರೋಗ್ಯಕ್ಕೆ ಒಳ್ಳೇಯದು ಬಣ್ಣ ಆಡುವುದರಿಂದ ದೇಹದಲ್ಲಿ ರೋಗ ಪ್ರತಿಕಾರಕ ಶಕ್ತಿ ಸದೃಢವಾಗುವುದು ಕಾಮಾಲೆಯಿಂದ ರಕ್ಷಣೆ ನೀಡುವುದು.ಹಲವು ಬೀದಿಗಳಲ್ಲಿ ಕಾಮಣನನ್ನು ಸುಟ್ಟು ಬಣ್ಣ ಹಲವು ಕಡೆ ಬಣ್ಣ ಎರಚಿ ಕಾಮಣ್ಣನನ್ನು ಸುಟ್ಟರು.
ಮನೆ ಮಂದಿ ಸೇರಿ ಲಿಂಗ ಬೇದವಿಲ್ಲದೆ ಬಣ್ಣ ಎರಚಿ ಬಣ್ಣ ಆಟವಾಡುವುದು. ಕಣ್ಮನ ಸೆಳೆಯಿತು.
ಹಲವು ದೇವಾಲಯಗಳಲ್ಲಿ ವಿವಿಧ ಪೂಜೆಗಳು ನಡೆದವು. ಬೀಸಿಲಿನ ತಾಪಕ್ಕೆ ಪಾನಕ ಮಜ್ಜಿಗೆಯೇ ಪ್ರಾಸದವಾಗಿ ನಡೆಯುತ್ತಿತ್ತು,ನಗರದ ಅಶೋಕ ರಸ್ತೆಯ ಹಾವಿನ ವೃತ್ತದಲ್ಲಿ ಯುವಕರು ಹೋಳಿ ಹಬ್ಬದ ಪ್ರಯುಕ್ತ ಕಾಮನ ದಹನ ಮಾಡಿ ಬಣ್ಣಗಳ ಎರಚಾಟದಲ್ಲಿ ಸಂತಸ ಹಂಚಿಕೊಂಡರು