ಕೌಟುಂಬಿಕ ಕಲಹ, ಗೃಹಿಣಿ ಆತ್ಮಹತ್ಯೆ

250

ಬೆಂಗಳೂರು/ಮಹದೇವಪುರ: ಕೌಟುಂಬಿಕ ಕಲಹದಿಂದ ಬೇಸತ್ತು ಗೃಹಿಣಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕಾಟಮನಲ್ಲೂರಿನಲ್ಲಿ ನಡೆದಿದೆ. ಚೈತ್ರ(25) ಮೃತ ದುರ್ದೈವಿ, 5 ವರ್ಷಗಳ ಹಿಂದೆ ಕಾಟಂನಲ್ಲೂರಿನ ನಿವಾಸಿಯೊಂದಿಗೆ ಮದುವೆಯಾಗಿದ್ದ ಚೈತ್ರ ಇತ್ತೀಚೆಗೆ ಗಂಡನ  ಕುಟುಂಬದವರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಕೊಂಡಿರುವ ಆವಲಹಳ್ಳಿ ಠಾಣೆ ಪೊಲೀಸರು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಹೊಸಕೋಟೆಯ ಎಮ್ವಿಜೆ ಆಸ್ಪತ್ರೆಗೆ ರವಾನಿಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.