ಪ್ರಿಯತಮೆಯನ್ನು ನೋಡಲು ಹೋಗಿ..ಶವವಾದ.

318

ಬೆಂಗಳೂರು/ಹೊಸಕೊಟೆ: ಪ್ರೀಯತಮೆಯನ್ನು ನೋಡಲೆಂದು ಹೋದ ಯುವಕನೊಬ್ಬ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾದ ಘಟನೆ ಒಂದು ನಂದಗುಡಿ ವ್ಯಾಪ್ತಿಯಲ್ಲಿ ನಡೆದಿದೆ. ಪ್ರೀತಿಸಿದ ಯುವತಿ  ಮನೆಯಲ್ಲಿದವರು ಎಲ್ಲಾ ತನ್ನ ಸೇರಿ ಪ್ರಿಯತಮೆಯ ವೇಲ್ ನಿಂದಲೇ ಕತ್ತು ಬಿಗಿದು ಕೊಲೆ ಮಾಡಿದ್ದಾರೆಂಬ ಅನುಮಾನ ವ್ಯಕ್ತವಾಗಿದೆ, ಈ ಘಟನೆ ಬೆಂಗಳೂರು ಗ್ರಾಮಾಮತರ ಜಿಲ್ಲೆ ಹೊಸಕೋಟೆ ತಾಲುಕಿನ ನಂದಗುಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬೈಲನರಸಾಪುರದಲ್ಲಿ ನಡೆದಿದೆ. 25 ವರ್ಷ ವಯಸ್ಸಿನ ರೌಡಿ ಶೀಟರ್ ಸಾಹಿಲ್ಖಾನ್ ಅನುಮಾನಾಸ್ಪದವಾಗಿ ಸಾವಿಗೀಡಾದ ವ್ಯಕ್ತಿ. ಸಾಹಿಲ್ 10 ನೇತರಗಪ್ರಿಯತಮೆಯನ್ನು ನೋಡಲು ಹೋಗಿ..ಶವವಾದ.ತಿ ವ್ಯಾಸಂಗ ಮಾಡುತ್ತಿದ್ದ ಅಪ್ರಾಪ್ತಳನ್ನು ಕಳೆದ  ಒಂದು ವರೆ ವರ್ಷದಿಂದ ಗಾಡವಾಗಿ ಪ್ರೀತಿಸುತ್ತಿದ್ದ, ಪರಸ್ಪರ ಇಬ್ಬರಿಗೂ ಒಪ್ಪಿಗೆಯೂ ಇತ್ತು, ಆಗಾಗ್ಗೆ ಇಬ್ಬರು ಜೊತೆಯಲ್ಲಿ ಸಿನಿಮಾ ಶಿಕಾರುಗಳನ್ನು ತಿರುಗಿದ್ದರು, ಆದರೆ ಇತ್ತೀಚೆಗೆ  ಸಾಹಿಲ್ ಖಾನ್ ಕುಡಿಯುವ ಚಟಕ್ಕೆ ಬಿದ್ದಿದ್ದ ಇಬ್ಬರ ಮದ್ಯೆ ಮನಸ್ತಾಪ ಇತ್ತು, ಅದೇ ರೀತಿ ನೆನ್ನೆ ರಾತ್ರಿಯೂ ಸಹ ಕುಡಿದು ಬಂದು ತನ್ನ ಪ್ರೀತಿಸಿದ ಹುಡಿಗಿಯನ್ನು ನೋಡಲು . ಕುಡಿದು ಬಂದಿದ್ದನ್ನು ಮನಗಂಡ ಯುವತಿ ಚೀಮಾರಿಹಾಕಿ ನಾನು ನಿನಗೆ ಸಿಗಲ್ಲ ಎಂದು ನಿರಾಕರಿಸಿದ್ದಾಳೆ, ಸಾಹಿಲ್ ಹಟಮಾಡಿದ್ದಾನೆ ಆಗ ಎಲ್ಲರು ಸೇರಿ ಮನೆಗೆ ಕರೆಸಿಕೊಂಡು ಕೊಲೆ ಮಾಡಿದ್ದಾರೆ ಎಂದು ಕೊಲೆಯಾದ ಅಸಾಹಿಲ್ ಪೊಷಕರ ಆರೋಪ ಮಾಡಿದ್ದಾರೆ. 2012 ರಲ್ಲಿ ಬೈಲನರಸಾಪುರದಲ್ಲಿ ನಡೆದ ಗುಂಪು ಗರ್ಷಣೆಯಲ್ಲಿ ಆರೋಪಿಯಾಗಿದ್ದ ಸಾಹಿಲ್ ಖಾನ್ ಇನ್ನೂ ಸುಮಾರು 10 ಪ್ರಕರಣಗಳಲ್ಲಿ ಭಾಗಿಯಾಗಿದ್ದ, ಈ ಸಂಭಂದ ನಂದಗುಡಿ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದ. ಆದರೆ ಈಗ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದಾನೆ. ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರಿಯತಮೆಯ ಸಂಭಂದಿ ನಾವು ತೀರ ಬಡ ಕುಟುಂಬದವರು, ನಮ್ಮ ಮನೆಯಲ್ಲಿ 4 ಹೆಣ್ಣು ಮಕ್ಕಳಿದ್ದಾರೆ, ಸಾಹಿಲ್ ನಮ್ಮ ಮನೆಗೆ ಆಗಾಗ್ಗೆ ಬಂದು ಹೊಗುತ್ತಿದ್ದ,ನಮ್ಮ ಹೆಣ್ಣು ಮಗಳೊಬ್ಬಳನ್ನು ಪ್ರೀತಿಸುತ್ತಿದ್ದ,ಆತನ ಬಗ್ಗೆ ನಮಗೂ ಒಳ್ಳೆ ಅಭಿಪ್ರಾಯ ಇದೆ, ಆದರೆ ರಾತ್ರಿ ಕುಡಿದು ಬಂದಿದ್ದರಿಂದ ನಮ್ಮ ಮಗಳು ಅವನನ್ನು ಮಾತನಾಡಲು ನಿರಾಕರಿಸಿದ್ದಾಳೆ ಅಷ್ಟೆ ಅವರ ಪ್ರೀತಿ ಬಗ್ಗೆ ನಮಗೂ ಇಷ್ಟ ಇತ್ತು, ಅವನ ಸಾವು ನಮಗೂ ಬೇಸರ ತಂದಿದೆ, ಎಂದು ಪ್ರಿಯತಮೆಯ ಸಂಭಂದಿ ಫಹಮೀದ ಬೇಸರ ವ್ಯಕ್ತಪಡಿಸಿದರು.
ನಂದಗುಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಬಗ್ಗೆ ತನಿಖೆ ನಡೆಯಬೇಕಿದೆ