ಆತ್ಮಹತ್ಯೆ…ಕೊಲೆಶಂಕೆ.

1093

ಚಿಕ್ಕಬಳ್ಳಾಪುರ/ಚಿಂತಾಮಣಿ : ಗೃಹಿಣಿ ಒಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕು ಚಿನ್ನಸಂದ್ರ ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಆಸ್ಮಾ ಭಾನು(26).
ಖಾದರ್ ಮತ್ತು ಅಸ್ಮಾಭಾನುಗೆ ಇತ್ತೀಚೆಗಷ್ಟೆ ಮದುವೆ ಯಾಗಿತ್ತು, ಮನೆಯಲ್ಲಿ ಸಣ್ಣ ಪುಟ್ಟ ವಿಚಾರಗಳಲ್ಲಿ ಗಲಾಟೆ ಮಾಡಿ ತನಗೆ ದೈಹಿಕವಾಗಿ ಹಾಗು ಮಾನಸಿಕವಾಗಿ ಹಿಂಸೆಯನ್ನು ನೀಡುತ್ತಿರುವುದಾಗಿ ಮೃತಳು ತಮ್ಮ ಪೋಷಕರಿಗೆ ಹೇಳಿಕೊಂಡಿದ್ದಳು ಎಂದು ತಿಳಿದು ಬಂದಿದೆ. ಅಲ್ಲದೆ 3 ಲಕ್ಷ ರೂ ಹಣವನ್ನು ತವರುಮನೆ ಯಿಂದ ತರುವಂತೆ ಮನೆಯಲ್ಲಿ ವರದಕ್ಷಿಣೆ ಕಿರುಕುಳ ನೀಡಿ, ಚಿತ್ರ ಹಿಂಸೆ ನೀಡುತ್ತಿದರು ಎಂಬ ಆರೋಪವೂ ಇದೆ.
ಆಸ್ಮಾಭಾನುದು ಆತ್ಮಹತ್ಯೆಯಲ್ಲ ಆಕೆಯ ಗಂಡನೇ ಕೊಲೆ ಮಾಡಿರುವುದಾಗಿ ಮೃತಳ ಪೋಷಕರು ಮಾಡುತ್ತಿರುವ ಆರೋಪದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಗ್ರಾಮಾಂತರ ಪೋಲೀಸ್ ರು ತನಿಖೆ ನಡೆಸುತ್ತಿದ್ದಾರೆ.