ವರ್ಷಗಳ ನಂತರ ಕೊಂಡೋತ್ಸವಕ್ಕೆ ಮರುಚಾಲನೆ

285

ಮಂಡ್ಯ/ಮದ್ದೂರು : ಕಳೆದ 8 ವಷ೯ಗಳಿಂದ ನಿಂತಿದ್ದ ಗಂಗಾಧರೇಶ್ವರ ದೇವಸ್ಥಾನದ ಕೊಂಡೋತ್ಸವ ಮದ್ದೂರು ತಾಲ್ಲೂಕು ಎಸ್.ಐ ಹೊನ್ನಲಗೆರೆ ಗ್ರಾಮದಲ್ಲಿ ಅದ್ದೂರಿ ಹಾಗೂ ಸಡಗರದಿಂದ ಅಚರಿಸಲಾಯಿತು. ಪೂಜಾಕುಣಿತ ದೊಂದಿಗೆ ನೂರಾರು ಭಕ್ತರದೊಂದಿಗೆ ಅಚ೯ಕ ಮಂಜು ರವರ ಮನೆಯಿಂದ ಮೆರವಣಿಗೆ ಹೊರಟು ಪ್ರಮುಖ ಬೀದಿಗಳ ಮೂಲಕ ಗಂಗಾದೇಶ್ವರ ದೇವಸ್ಥಾನಕ್ಕೆ ಬಂದು ಹರಕೆ ಹೊತ್ತ ಭಕ್ತರು ಕೊಂಡವನ್ನು ಹಾಯುತ್ತಾರೆ. ನಂತರ ಭಕ್ತರು ಪೂಜೆ ಸಲ್ಲಿಸಲಾಯಿತು ಭಕ್ತರಿಗೆ ಅನ್ನಸಂತಪ೯ಣೆವನ್ನು ನಡೆಸಲಾಯಿತು. ಕಳೆದ 8 ವಷ೯ಗಳ ಹಿಂದೆ ಬೇವನಮ್ಮ ದೇವಸ್ಥಾನ ಜಾತ್ರೆ ಸಂದರ್ಭದಲ್ಲಿ ಕೋಮುಗಲಭೆಯಾದ ಯಾಗಿ ಹಬ್ಬ ಅಧ೯ಕ್ಕೆ ನಿಂತಿತ್ತು. ಈ ಹಿನ್ನಲೆಯಲ್ಲಿ ಗಂಗಾಧರೇಶ್ವರ ದೇವಸ್ಥಾನದ ಕೊಂಡೋತ್ಸವವೂ ಸಹ ನಿಲ್ಲಿಸಲಾಗಿತ್ತು..