ವಿಚಾರಣಾಗೋಷ್ಠಿ ಮತ್ತು ಕಾರ್ಯಗಾರ

242

ಕೋಲಾರ/ಬಂಗಾರಪೇಟೆ; ಇಲ್ಲಿನ ತಾಲ್ಲೂಕು ಪಂಚಾಯಿತಿ ಕಛೇರಿ ಮುಂದೆ ಏರ್ಪಡಿಸಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ನಿಯಂತ್ರಣ ಅನುಷ್ಠಾನ ಗೊಳಿಸಲು ವಿಚಾರಣಾಗೋಷ್ಠಿ ಮತ್ತು ಕಾರ್ಯಗಾರ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ತ್ರಿಲೋಕಚಂದ್ರ ತಮಟೆ‌ ಭಾರಿಸುವ ಮೂಲಕ ಚಾಲನೆ‌ ನೀಡಿದರು.ತಾಲ್ಲೂಕು ಆಡಳಿತ ಮತ್ತು ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಹಾಗೂ ಭೂಮಿ ಪೂಜೆ ಜಾನಪದ ಕಲಾತಂಡ ಹಿರೇಕರಪನಹಳ್ಳಿ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಜಿಪಂ ಸಿಇಓ ಬಿ.ವಿ.ಕಾವೇರಿ, ಸಹಾಯಕ ಕಮೀಷನರ್ ಮಂಜುನಾಥ್, ತಹಸೀಲ್ದಾರ್ ಸತ್ಯಪ್ರಕಾಶ್, ಕಲಾವಿದ ಮಾರುತಿ ಪ್ರಸಾದ್ ಇತರರಿದ್ದರು.