ಅಂಗವಿಕಲರ ಪ್ರತಿಭಟನೆ

302

ಮಂಡ್ಯ/ ಮಳವಳ್ಳಿ: ಕುಷ್ಟರೋಗ ನಿವಾರಿತ ಅಂಗವಿಕಲರಿಗೆ ಅಂತ್ಯೋದಯ ಅನ್ನ ಯೋಜನೆ ಕಾಡ್ ೯ ನೀಡುವಂತೆ ಒತ್ತಾಯಿಸಿ ಸಮುದಾಯ ಗ್ರಾಮೀಣ ಅಂಗವಿಕಲ ಪುನವ೯ತಿ ಯೋಜನೆ ಮತ್ತು ಶ್ರೀಕೀತಿ೯ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘ ವತಿಯಿಂದ ಮಳವಳ್ಳಿ ಪಟ್ಟಣದ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಈ ಸಂದಭ೯ದಲ್ಲಿ ಅಂಗವಿಕಲ ಮುಖಂಡ ಕೃಷ್ಣಮೂತಿ೯ ಮಾತನಾಡಿ ಸತತ ನಾಲ್ಕು ವಷ೯ಗಳಿಂದ ಐದಾರು ಬಾರಿ ಮನವಿ ಸಲ್ಲಿಸಿದ್ದರೂ ಸರಿಯಾದ ರೀತಿ ಸ್ಪಂದಿಸದೆ ಯಾವುದೇ ಕ್ರಮ ಕೈಗೊಳ್ಳದೆ ನಿಲ೯ಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿದರು. ಅಂಗವಿಕಲರ ಬಗ್ಗೆ ತಾತ್ಸರ ಮನೋಬಾವನೆಯಿಂದ ಕಾಣುತ್ತಿದ್ದು, ನಾವು ನೀಡಿರುವ ದಾಖಲಾತಿಗಳ ಕಳೆದುಹೋಗಿದೆ ಎಂದು ಮತ್ತೆ ಮತ್ತೆ ದಾಖಲೆಗಳನ್ನು ಪಡೆದುಕೊಂಡು ನಿಲ೯ಕ್ಷ್ಯ ಹಾಗೂ ಅಸಡ್ಡೆ ತೋರಿಸುತ್ತಾರೆ ಈ ಪ್ರತಿಭಟನೆ ಸಾಂಕೇತಿಕ ವಾಗಿ ಮುಂದಿನದಿನಗಳಲ್ಲಿ ಉಗ್ರಹೋರಾಟ ಮಾಡುವುದಾಗಿ ತಿಳಿಸಿದರು. ಪ್ರತಿಭಟನೆ ಮನವಿಯನ್ನು ಶಿರಸ್ತೇದ್ದಾರ್ ಮಹದೇವರವರಿಗೆ ಮನವಿ ಸಲ್ಲಿಸದರು.