ಬ್ಯಾಂಕಿನ ವ್ಯವಸ್ಥಾಪಕ ವರ್ಗಾವಣೆಗೆ ಒತ್ತಾಯಿಸಿ ಪ್ರತಿಭಟನೆ

337

ಚಿಕ್ಕಬಳ್ಳಾಪುರ/ಚಿಂತಾಮಣಿ: ತಾಲ್ಲೂಕಿನ ಕೈವಾರ ದಲ್ಲಿ ಇರುವ ಕೆನರಾ ಬ್ಯಾಂಕಿನ ವ್ಯವಸ್ಥಾಪಕರಿಗೆ ವರ್ಗಾವಣೆ ಮಾಡಿ ಎಂದು ಕೈ ವಾರ ಕ್ಷೇತ್ರದ ಸಾರ್ವಜನಿಕರು ಮತ್ತು ಸ್ತ್ರೀ ಶಕ್ತಿ ಸಂಘ, ಕನ್ನಡ ಹಿತರಕ್ಷಣಾ ವೇದಿಕೆ, ಹಾಲು ಉತ್ಪಾದಕರು, ರೈತರು ಮತ್ತು ಸಂಘ ಸಂಸ್ಥೆಗಳು ಕೆನರಾ ಬ್ಯಾಂಕಿನ ಮುಂದೆ ಧರಣಿ ನಡೆಸಿದರು. ಕೈವಾರ ದಲ್ಲಿ ಇರುವ ಕೆನರಾ ಬ್ಯಾಂಕಿನ ವ್ಯವಸ್ಥಾಪಕ ಗಿರಿ ಬಾಬು ಗ್ರಾಹಕರೊಂದಿಗೆ ಏಕಪಕ್ಷೇಯವಾಗಿ ವರ್ತಿಸುವ ಅಧಿಕಾರಿಯಾಗಿ ತಮ್ಮಗೆ ಇಷ್ಟಬಂದ ರೀತಿ ಸರ್ಕಾರದ ಆದೇಶಗಳನ್ನು ಗಾಳಿಗೆ ತೂರಿ ಬೇಜವಾಬ್ದಾರಿ ಯುಕ್ತ ವಾಗಿ ಸರ್ವಾಧಿಕಾರ ನಡೆಸುತ್ತಿದ್ದಾರೆ ಎಂದು ಸಂಘಟನೆ ಗಳಿಂದ ಧರಣಿ ನಡೆಸುತ್ತಿದ್ದಾರೆ.⁠⁠⁠⁠