ಹುಲ್ಲು ಬಣವೆ ಬೆಂಕಿ,ಸಂಪೂರ್ಣ ಭಸ್ಮ

237

ಚಾಮರಾಜನಗರ/ಕೊಳ್ಳೇಗಾಲ:ತಾಲೂಕಿನ ನರಿಪುರ ಗ್ರಾಮದಲ್ಲಿ ಬತ್ತದ ಹುಲ್ಲಿನ ಮೆದೆಗೆ ಆಕಸ್ಮಿಕ ಬೆಂಕಿ ತಗುಲಿ ಸಾವಿರಾರು ರೂ ನಷ್ಟವಾಗಿರುವ ಘಟನೆ ನಡೆದಿದೆ. ಗ್ರಾಮದ ಸಿದ್ದಯ್ಯ ಎಂಬುವವರ ಮನೆ ಮುಂದೆ ಸುಮಾರು ಒಂದು ಎಕರೆ ಬತ್ತದ ಹುಲ್ಲನ್ನು ತಂದು ರಾಶಿ ಹಾಕಿದ್ದರು. ಮಧ್ಯಾಹ್ನ ಆಕಸ್ಮಿಕವಾಗಿ ಬೆಂಕಿ ಬಿದ್ದು ಹೊತ್ತಿ ಉರಿದಿದ್ದು, ತಕ್ಷಣ ಗ್ರಾಮಸ್ಥರು ಧಾವಿಸಿ ಹರಸಾಹಸ ಪಟ್ಟು ಬೆಂಕಿಯನ್ನು ನಂದಿಸಿ ಅಕ್ಕ ಪಕ್ಕದಲ್ಲಿದ್ದ ಮನೆಗಳಿಗೆ ಬೆಂಕಿ ಹರಡುವುದನ್ನು ತಪ್ಪಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಬರುವಷ್ಟರಲ್ಲಿ ಹುಲ್ಲಿನ ಮೆದೆ ಭಸ್ಮವಾಗಿತ್ತು. ಇದರಿಂದ ರೈತ ಸಿದ್ದಯ್ಯ ಅವರಿಗೆ ನಷ್ಟ ಸಂಭವಿಸಿದೆ.