ದುನಾ೯ತದ ಕುಂಟೆ : ಕೆಟ್ಟ ವಾಸನೆ ಕಿರಿ ಕಿರಿ!

309

ಕೋಲಾರ/ಶಿಡ್ಲಘಟ್ಟ : ತಾಲ್ಲೂಕಿನ ವರದ ನಾಯಕನಹಳ್ಳಿ ಗ್ರಾಮದ ಹೃದಯಭಾಗದಲ್ಲಿರುವ ಗ್ರಾಮದ ಕುಂಟೆ ಸ್ವಚ್ಛತೆ ಇಲ್ಲದೇ ದುರ್ನಾತ ಬೀರುತ್ತಿದ್ದು ಸ್ಥಳೀಯರ ಆರೋಗ್ಯದ ಮೇಲೆ ದುಷ್ಟಪರಿಣಾಮ ಬೀರುವ ಆತಂಕ ಮನೆ ಮಾಡಿದೆ.ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ನೈರ್ಮಲ್ಯ ಹದಗೆಟ್ಟಿದ್ದು ಸ್ವಚ್ಛತೆ ಇಲ್ಲದೇ ಸೊಳ್ಳೆಗಳಿಗೆ ಆಶ್ರಯತಣವಾಗಿ ಪರಿವರ್ತನೆಗೊಂಡಿದೆ. ಕುಂಟೆ ಪಕ್ಕದಲ್ಲಿ ಶಾಲೆ ಮತ್ತು ಹಾಲಿನ ಡೈರಿ ಸಮೀಪವೆ ಇದ್ದು ಸಾಂಕ್ರಾಮಿಕ ರೋಗ ಹರಡುವ ಭೀತಿ ಗ್ರಾಮಸ್ಥರಲ್ಲಿ ಆವರಿಸಿದೆ. ಗ್ರಾಮೀಣ ಭಾಗದಲ್ಲಿ ಸ್ವಚ್ಚತೆ ಕಾಪಾಡಬೇಕೆಂದು ಜಾರಿಗೊಳಿಸಿರುವ ಸ್ವಚ್ಛಭಾರತ ಅಭಿಯಾನ ಕೇವಲ ಪ್ರಚಾರಕ್ಕೆ ಮಾತ್ರ ಸೀಮಿತವಾಗಿದೆಯಾ ಎಂಬ ಅನುಮಾನ ಮೂಡಿದೆ ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇತ್ತಗಮನಹರಿಸಿ ಸ್ಚಚ್ಛಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.