ಬುದ್ದಿ ಕಲಿಯದ ಬದ್ದೂ… ಅಧಿಕಾರಿಗಳು

226

ಬಳ್ಳಾರಿ:ಮ್ಯಾನ್ ಹೋಲ್ ನಲ್ಲಿ ಕಾರ್ಮಿಕರನ್ನು ಇಳಿಸಬಾರದೂ ಅನ್ನೋ ನಿಯಮವಿದ್ದರೂ. ಜೊತೆಗೆ ಇತ್ತೀಚೆಗಷ್ಟೇ ಮ್ಯಾನಹೋಲ್ ಗೆ ಇಳಿದ ಮೂವರು ಕಾರ್ಮಿಕರು ಮೃತಪಟ್ಟ ಸುದ್ದಿಮಾಸುವ ಮುನ್ನವೇ ಮ್ಯಾನಹೋಲಗೆ ಪೌರಕಾರ್ಮಿಕರನ್ನು ಇಳಿಸಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಬಳ್ಳಾರಿಯ ಕಪ್ಪಗಲ್ ರಸ್ತೆಯ ಎಸಿಬಿ ಕೌಂಪೌಡ ಬಳಿ ಇಂದು ಮುಂಜಾನೆ ಕೆಯುಡಬ್ಲೂಎಸ್ ನ ಅಧಿಕಾರಿಗಳು ಮ್ಯಾನ್ ಹೋಲ್ ನಲ್ಲಿ ವೇಸ್ಟೆಜ್ ಹೋಗಿ ಬ್ಲ್ಯಾಕ್ ಆದ ಪರಿಣಾಮ ಪೌರಕಾರ್ಮಿಕನೊಬ್ಬನನ್ನು ಇಳಿಸಿ ಸ್ವಚ್ಛತೆಗೆ ಮುಂದಾಗಿದ್ದರು. ಮ್ಯಾನಹೋಲ್ ನಲ್ಲಿ ಕಾರ್ಮಿಕ ಇಳಿದು ಸ್ವಚ್ಚತೆ ಮಾಡುತ್ತಿದ್ದನ್ನು ಗಮನಿಸಿದ ಸ್ಥಳೀಯರು ಅಧಿಕಾರಿಗಳಿಗೆ ಪೋನ್ ಮಾಡಿ ತರಾಟೆಗೆ ತೆಗೆದುಕೊಂಡರು. ಅಲ್ಲದೇ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಪೌರಕಾರ್ಮಿಕರನ್ನು ಮ್ಯಾನ್ಹೋಲ್ ಗೆ ಇಳಿಸಿದ್ದಕ್ಕೆ ನಗರ ನೀರು ಸರಬುರಾಜು ಮತ್ತು ಒಳಚರಂಡಿ ವಿಭಾಗದ ಅಧಿಕಾರಿಗಳ ವಿರುದ್ದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.